'ಮಿಸ್ಟರ್ ಕುಮಾರಸ್ವಾಮಿ ನಾನು ತಿಹಾರ್ ಜೈಲು ನೋಡಿದ್ದೇನೆ' ಹೆಚ್‌ಡಿಕೆ ವಿರುದ್ಧ ಡಿಕೆ ಶಿವಕುಮಾರ ವಾಗ್ದಾಳಿ

By Ravi Janekal  |  First Published Aug 3, 2024, 3:49 PM IST

'ಮಿಸ್ಟರ್ ಕುಮಾರಸ್ವಾಮಿ ನಾನು ತಿಹಾರ್ ಜೈಲು ನೋಡಿದ್ದೇನೆ, ನನ್ನ ಮೇಲೆ ಹಾಕಿದ್ದ ಕೇಸ್ ಗಳನ್ನ ಕೂಡ ನೋಡಿದ್ದೇನೆ' ಎಂದು ಕೇಂದ್ರ ಸಚಿವ ಎಚ್‌ಡಿಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ ತಿರುಗೇಟು ನೀಡಿದರು. 


ಬೆಂಗಳೂರು (ಆ.3): 'ಮಿಸ್ಟರ್ ಕುಮಾರಸ್ವಾಮಿ ನಾನು ತಿಹಾರ್ ಜೈಲು ನೋಡಿದ್ದೇನೆ, ನನ್ನ ಮೇಲೆ ಹಾಕಿದ್ದ ಕೇಸ್ ಗಳನ್ನ ಕೂಡ ನೋಡಿದ್ದೇನೆ' ಎಂದು ಕೇಂದ್ರ ಸಚಿವ ಎಚ್‌ಡಿಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ ತಿರುಗೇಟು ನೀಡಿದರು. 

ಮುಡಾ ಹಗರಣ ಅಂತಾ ಹೇಳ್ಕೊಂಡು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬಿಜೆಪಿಯವರು ಪಾದಯಾತ್ರೆ ಮಾಡ್ತಿದ್ದಾರೆ. ನಾನು ನಿನ್ನೆ ಕುಮಾರಸ್ವಾಮಿಗೆ ಕೆಲವು ಪ್ರಶ್ನೆಗಳನ್ನ ಕೇಳಿದ್ದೆ. ನನ್ನ ಕರೆದುಕೊಂಡು ಹೋಗೋಕೆ ಮಿಲಿಟರಿಯವರು ಬರ್ತಾರೆ ಅಂದಿದ್ರು. ಅಂದ್ರೆ ನನ್ನನ್ನ ತಿಹಾರ್ ಜೈಲಿಗೆ ಕಳಿಸ್ತೇನೆ ಅಂತಾ ಕುಮಾರಸ್ವಾಮಿ ಹೇಳಿದ್ರು. ಮಿಸ್ಟರ್ ಕುಮಾರಸ್ವಾಮಿ ನಿನ್ನ ನಾಯಕತ್ವದಲ್ಲಿ 19 ಸೀಟು ಕೊಟ್ಟಿದ್ದಾರೆ. ಇದೀಗ ಎಂಪಿಯಲ್ಲಿ ಸಿಕ್ಕಿದ್ದ ಎರಡೇ ಎರಡು ಸೀಟು. ನೀವಿಬ್ರು ಇದೀಗ ತಬ್ಬಾಡಿಕೊಂಡು ಕೂತಿದ್ದೀರಿ. ಹಿಂದೆ ನಾನು ಪೆನ್‌ಡ್ರೈವ್ ಬಿಟ್ಟಿದ್ದೇನೆ ಅಂತಾ ಹೇಳಿದ್ರಿ ಇದೀಗ ಪ್ರೀತಂ ಗೌಡ ಹೆಸರು ಹೇಳ್ತೀರಿ. ನಾನು ಇಂತಹ ನೀಚ ಕೆಲಸ ಮಾಡಿಲ್ಲ ಅಂತಾ ರಾಜ್ಯದ ಜನರಿಗೆ ಗೊತ್ತು‌. ಪ್ರೀತಂ ಗೌಡ ನಮ್ಮ ಕುಟುಂಬ ಹಾಳು ಮಾಡಿದ್ದ. ನನ್ನ ಪಕ್ಕ ಕೂತಿದ್ದ ಪಾದಯಾತ್ರೆಯಲ್ಲಿ ನಾವು ಭಾಗಿಯಾಗಲ್ಲ ಅಂದ್ರಿ. ಆದರೆ ರಾತ್ರೋರಾತ್ರಿ ಪಾದಯಾತ್ರೆಗೆ ಬರ್ತೀನಿ ಅಂತೀರಿ ಎಂದು ತಿವಿದರು.

Tap to resize

Latest Videos

undefined

ಈ ಹಿಂದೆ ಪೆನ್‌ಡ್ರೈವ್ ಕೇಸ್ ಆದಾಗ ರೇವಣ್ಣ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ ಅಂದಿದ್ರಿ ಇದೀಗ ಎಲ್ಲಿಗೆ ಬಂತು ಆ ನಿಮ್ಮ ಅಕ್ಕರೆ. ಪ್ರೀತಂ ಗೌಡ ಪೆನ್ ಡ್ರೈವ್ ಹಂಚಿದ್ದಾರೆ ಅಂದ್ರೆ ಯಾಕೆ ಬಿಜೆಪಿಯವರನ್ನು ಪ್ರಶ್ನೆ ಮಾಡಿಲ್ಲ ನೀವು? ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದು ಯಾರು? ನಾನು ನಿಮ್ಮ‌ಎರಡು ಪಕ್ಷಗಳ ನಾಯಕರನ್ನು ಪ್ರಶ್ನೆ ಮಾಡ್ತೀನಿ. ಬಿಜೆಪಿ ಅಧ್ಯಕ್ಷ ನನ್ನನ್ನು ಭ್ರಷ್ಟಾಚಾರದ ಪಿತಾಮಹ ಅಂದಿದ್ದಾರೆ. ಮಿಸ್ಟರ್ ವಿಜಯೇಂದ್ರ ನಿಮ್ಮ ತಂದೆಯವರು ಯಾಕೆ ರಾಜೀನಾಮೆ ಕೊಟ್ರು? ವಿಧಾನಸೌಧದಲ್ಲಿ ಕಣ್ಣೀರು ಹಾಕಿದ್ರು ಯಾಕೆ? ಜೈಲಿಗೆ ಯಾಕೆ ಹೋಗಿದ್ರು ಅಂತಾ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಸವಾಲು ಹಾಕಿದರು.

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯರ ಮೇಲೆ ಗೂಬೆ ಕೂರಿಸಲು ಮೋದಿ, ಅಮಿತ್ ಷಾ ಕುತಂತ್ರ -ಎಂಬಿ ಪಾಟೀಲ್

ಬಿಜೆಪಿಯವರು ವಿಧಾನಸಭಾ ಚುನಾವಣೆಗೆ ಮುಂಚೆ ಜೆಡಿಎಸ್ ಬಗ್ಗೆ ಒಂದು ಜಾಹೀರಾತು ನೀಡಿದ್ರು. ಮುಡಾ ಹಗರಣದಲ್ಲಿ ಅಕ್ರಮ ಆಗಿದೆ. ಹಗರಣದಲ್ಲಿ ಕುಮಾರಸ್ವಾಮಿ, ದೇವೇಗೌಡ ಇದ್ದಾರೆ ಎಂದು ಪಕ್ಷಿನೋಟ ಹಾಕಿದ್ರಿ. ಹಾಗಾದರೆ ಈಗ ದೇವೇಗೌಡರ ಕುಟುಂಬದ ಆಸ್ತಿ ಬಿಚ್ಚಿಡಬೇಕಲ್ಲವ? ಸಿದ್ದರಾಮಯ್ಯ ಹಾಗೂ ಅವರ ಕುಟುಂಬದಲ್ಲಿ ಅಕ್ರಮ ಆಗಿದೆ ಅಂತಾ ಆರೋಪಿಸುತ್ತಿದ್ದೀರಲ್ಲ. ಅವರು ಸರ್ಕಾರಿ ಜಮೀನು ಕಬಳಿಕೆ ಮಾಡಿದ್ದಾರಾ? ನಮ್ಮ ಜಮೀನು ಮುಡಾಗೆ ಹೋದ್ರೆ ಅದಕ್ಕೆ ಪರ್ಯಾಯವಾಗಿ ಸೈಟ್ ತೆಗೆದುಕೊಳ್ಳೋದು ತಪ್ಪಾ? ನೀವೇ ಅಧಿಕಾರದಲ್ಲಿದ್ದಾಗ ಬೊಮ್ಮಾಯಿ ಸಿಎಂ ಆಗಿದ್ದಾಗ ಸೈಟ್ ಕೊಟ್ಟಿದ್ದೀರಿ. ನಮ್ಮ ಸರ್ಕಾರದ ಅವಧಿಯಲ್ಲಿ ಸೈಟ್ ತಗೊಂಡಿಲ್ಲ. ನಿಮ್ಮ ಹಗರಣ, ಭೂಕಬಳಿಕೆ ಬಗ್ಗೆ ಬಿಜೆಪಿಯವರು ಪ್ರಕಟಣೆ ಹೊರಡಿಸಿದ್ದೀರಲ್ಲ. ಜೆಡಿಎಸ್ ಅವರು ಇದಕ್ಕೆ ಉತ್ತರ ಕೊಡಬೇಕು. ಅದುಬಿಟ್ಟು ಪ್ರಶ್ನೆ ಮಾಡಿದ ನನ್ನ ಬಗ್ಗೆ ನಾಳೆ ಉತ್ತರ ಕೊಡ್ತಿನಿ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ. ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ ಅಂತಾ ಉತ್ತರ ಕೊಡಬೇಕಲ್ಲವ ಕುಮಾರಸ್ವಾಮಿಯವರೇ? ನಿಮ್ಮ ಸಹೋದರ ಬಾಲಕೃಷ್ಟೇಗೌಡ ಅವರ ಹೆಸರಿನಲ್ಲಿ ಎಷ್ಟು ಕೋಟಿ ಆಸ್ತಿ ಮಾಡಿದ್ದೀರಿ ಅಂತಾ ಹೇಳಬೇಕು ಎಂದು ಆಗ್ರಹಿಸಿದರು.

ಡಿಕೆ ಶಿವಕುಮಾರ ಬಗ್ಗೆ ಮಾತಾಡದಿದ್ರೆ ಕುಮಾರಸ್ವಾಮಿಗೆ ತಿಂದಿದ್ದು ಅರಗುವುದಿಲ್ಲ: ಡಿಕೆ ಸುರೇಶ್ ಕಿಡಿ

ಬಿಜೆಪಿಯಲ್ಲಿ ಇರೋರೆಲ್ಲ ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹದವರೇ. ಪಿಎಸ್‌ಐ ಹಗರಣ ಮಾಡಿದ್ದು ಯಾರು? ಆಗ ಸಿಎಂ ಡಿಸಿಎಂ ಯಾರು ಇದ್ರು ಅಂತಾ ಹೇಳಬೇಕಲ್ವಾ? ಪಾಪ ಅಶ್ವಥ್ ನಾರಾಯಣ ಅವತ್ತು ಡಿಸಿಎಂ ಆಗಿದ್ದ. ಜಿಲ್ಲೆಗೆ ಬಂದು ಯಾರು ಗಂಡಸು ಅಂತಾ ಕೇಳಿದ್ದ ಅಶ್ವಥ್ ನಾರಾಯಣ. ಹೌದಪ್ಪ ನಾವೆಲ್ಲ ಹೆಂಗಸರು, ನೀನೊಬ್ನೆ ಗಂಡಸು ಎಂದು ಡಿಕೆ ಶಿವಕುಮಾರ ತಿರುಗೇಟು ನೀಡಿದರು.

click me!