ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ: ಹಣ ಯಾರು ಕಾಂಗ್ರೆಸ್ ಪಕ್ಷ ಕೊಡುತ್ತಾ?

By Sathish Kumar KH  |  First Published Nov 28, 2023, 7:53 PM IST

ಬರಗಾಲದಲ್ಲಿ ರೈತರಿಗೆ ಪರಿಹಾರ ಕೊಡುವುದಕ್ಕೂ ಹಣವಿಲ್ಲ. ಇಂತಹ ಸಂದರ್ಭದಲ್ಲಿ ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಕೊಟ್ಟಲ್ಲಿ ಅವರಿಗೆ ಹಣವನ್ನು ಕಾಂಗ್ರೆಸ್ ಪಕ್ಷದಿಂದ ಕೊಡಲಾಗುತ್ತದೆಯೇ?


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ನ.28): ರಾಜ್ಯದಲ್ಲಿ ಭೀಕರ ಬರಗಾಲ ಕಂಡುಬಂದಿದ್ದು, ರೈತರಿಗೆ ಪರಿಹಾರ ನೀಡುವುದಕ್ಕೂ ಹಣವಿಲ್ಲವೆಂದು ರಾಜ್ಯ ಸರ್ಕಾರ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದೆ. ಆದರೆ, ಈಗ ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಕೊಟ್ಟಲ್ಲಿ ಅವರಿಗೆ ಹಣವನ್ನು ಕಾಂಗ್ರೆಸ್ ಪಕ್ಷದಿಂದ ಕೊಡಲಾಗುತ್ತದೆಯೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗಿನ ಹಾಕತ್ತೂರು ಸಮೀಪದ ಮಾಜಿ ಸಚಿವ ಸಾ.ರಾ. ಮಹೇಶ್ ತೋಟದ ಮನೆಯಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ ಮಾಧ್ಯಮಗಳೊಂದಿಗೆ ಅವರು, ಸರ್ಕಾರದಿಂದ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಂಪುಟ ದರ್ಜೆ ಸ್ಥಾನಮಾನ ನೀಡುತ್ತಿದ್ದಾರೆ ಎಂದು ಕೇಳಿಬರುತ್ತಿದೆ. ಬರಗಾಲದಲ್ಲಿ ರೈತರಿಗೆ ಪರಿಹಾರ ಕೊಡುವುದಕ್ಕೂ ಹಣವಿಲ್ಲ. ಇಂತಹ ಸಂದರ್ಭದಲ್ಲಿ ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಕೊಟ್ಟಲ್ಲಿ ಅವರಿಗೆ ಹಣವನ್ನು ಕಾಂಗ್ರೆಸ್ ಪಕ್ಷದಿಂದ ಕೊಡಲಾಗುತ್ತದೆಯೇ? ಏನು ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ. ಅದು ಅವರ ಪಕ್ಷಕ್ಕೆ ಬಿಟ್ಟಿರುವ ವಿಚಾರವಾಗಿದೆ ಎಂದು ಹೇಳಿದರು.

Tap to resize

Latest Videos

undefined

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕ ಬಿ.ಆರ್. ಪಾಟೀಲ್ ರಾಜಿನಾಮೆ ಪ್ರಸ್ತಾಪ

ಆದರೆ, ನಮಗೆ ರಾಜ್ಯದಲ್ಲಿ ಬರಗಾಲವಿದೆ. ಈ ಬರಗಾಲದಲ್ಲಿ ಬೆಳೆ ನಷ್ಟವಾದ ರೈತರಿಗೆ ಪರಿಹಾರ ಕೊಡಲು ಒಂದು ಕಡೆ ದುಡ್ಡಿಲ್ಲ ಅಂತ, ಕೇಂದ್ರ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರ ಅರ್ಜಿ ಹಾಕಿಕೊಂಡಿದೆ. ರಾಜ್ಯದ ಸ್ಥಿತಿ ಹೀಗಿರುವಾಗ ಈಗ ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿದರೆ ದುಡ್ಡು ಎಷ್ಟು ಖರ್ಚಾಗುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷದಿಂದ ಹಣ ಕೊಡುತ್ತಾರಾ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. 

ಸರ್ಕಾರ  ಅಧಿಕಾರಕ್ಕೆ ಬಂದು ತಕ್ಷಣ ಈಗ ತಾನೆ ಎಲ್ಲಾ ಸಚಿವರಿಗೆ ಹೊಸ ಕಾರು ಕೊಡಿಸಿದ್ದಾರೆ. ಅದಕ್ಕೆ 9.5 ಕೋಟಿ ರೂ. ಖರ್ಚು ಮಾಡಿದ್ದಾರೆ. ಮನೆ ರಿನೋವೇಷನ್ ಗಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ಇದಕ್ಕೆ ಹಣ ಎಷ್ಟೊಂದು ಖರ್ಚಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಸೇರಿ 800 ಕೋಟಿ ರೂ. ಹಣ ಇದೆ ಎನ್ನುತ್ತಾರೆ. ಆದರೆ ಇರುವುದು ಬರಗಾಲದ ನಿರ್ಣಹಣೆಗೆ ಹಣ ಅಲ್ಲ. ಅದು ಕುಡಿಯುವ ನೀರು ಮತ್ತು ಮೇವಿಗಾಗಿ ಮೀಸಲಿರಿಸಿರುವ ಹಣ. ರೈತರ ಪರಿಸ್ಥಿತಿ ಏನು ಎನ್ನುವುದಕ್ಕೆ ಇವರು ಚಿಂತಿಸುತ್ತಿಲ್ಲ. ಬದಲಾಗಿ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಅವರಿಗೆ ಸಚಿವ ಸಂಪುಟ ದರ್ಜೆ ಸ್ಥಾನ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಸಮಂತಾಳ ಯಶೋಧಾ ಸಿನಿಮಾ ರೀತಿ ಮಹಿಳೆಯರ ಗರ್ಭದಲ್ಲಿ ಮಕ್ಕಳನ್ನು ಬೆಳಸಿ, ಹೆರಿಗೆ ನಂತರ ಬೆಂಗಳೂರಲ್ಲಿ ಮಗು ಮಾರಾಟ!

ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತಾ ದರ್ಶನ ಅಲ್ಲ ಜನಸ್ಪಂದನಾ ಎಂದಿದ್ದಾರೆ. ಸಿಎಂ ಅವರು ಜನ ಸ್ಪಂದನ ಮಾಡುತ್ತಿರುವುದಕ್ಕೆ ಅಭಿನಂದಿಸುತ್ತೇನೆ.ಚಅಧಿಕಾರಿಗಳನ್ನು ಬರಲು ಹೇಳಿ ನಾಡಿನ ಜನತೆಯ ಸಮಸ್ಯೆ ಆಲಿಸಿದ್ದಾರೆ. ಆದರೆ ಈಗಲಾದರೂ ಇವರಿಗೆ ರಾಜ್ಯದ ಜನತೆಯ ಗ್ರೌಂಡ್ ರಿಯಾಲಿಟಿ ಅರ್ಥವಾಗಿದೆ ಎಂದುಕೊಂಡಿದ್ದೇನೆ. ವಿವಿಧ ಸಮಸ್ಯೆಗಳು ಜನಸ್ಪಂದನದಲ್ಲಿ ಅರಿವಿಗೆ ಬಂದಿರುತ್ತದೆ. ಒಬ್ಬ ಸಿಎಂ ಜನಸ್ಪಂದನಾ ಮಾಡುವುದನ್ನು ನಾನು ಅಭಿನಂದಿಸುತ್ತೇನೆ. ಎಲ್ಲವನ್ನು ಟೀಕಿಸುವುದಿಲ್ಲ. ಮುಂದಿನ 3 ತಿಂಗಳಲ್ಲಿ ಮತ್ತೆ ಜನಸ್ಪಂದನಾ ಮಾಡುತ್ತೇನೆ ಎಂದಿದ್ದಾರೆ. ಸಿಎಂ ಅವರು ಜನಸ್ಪಂದನದಲ್ಲಿ ಆಲಿಸಿದ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ 3 ತಿಂಗಳ ಗಡುವು ನೀಡಿದ್ದಾರೆ. ಈಗ ಅವರಿಗೆ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಥವಾಗಿರಬಹುದು ಎಂದರು.

ನಾನು ಜನತಾ ದರ್ಶನ ಮಾಡಿದಾಗ ಬೆಳಿಗ್ಗೆ 9 ರಿಂದ ರಾತ್ರಿ 1 ಗಂಟೆವರೆಗೆ ಮಾಡಿದ್ದೆನು. ಅವತ್ತು ಇದ್ದ ಸಮಸ್ಯೆಗಳು ಈಗಲೂ ಮುಂದುವರಿದಿವೆ. ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್. ಅಶೋಕ್ ಅವರು ಕೂಡ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಅಂತ ಮಾಡಿದ್ದರು. ತಿಂಗಳಿಗೆ ಒಂದು ಗ್ರಾಮಕ್ಕೆ ಅವರು ಭೇಟಿ ನೀಡಿದ್ದರು. ಈಗ ಸಿಎಂ ಅವರು ಜನಸ್ಪಂದನಾ ಮಾಡಿದ್ದಾರೆ. ಅವರಿಗೆ ಮನವರಿಕೆ ಆಗಿರುವ ಕಷ್ಟಗಳನ್ನು ಸಿಎಂ ಬಗೆಹರಿಸಲಿ ಆಗ ಅವು ಅರ್ಥಪೂರ್ಣ ಆಗುತ್ತವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

click me!