
ಬೆಂಗಳೂರು, (ಮಾ.03): ರಮೇಶ್ ಜಾರಕಿಹೊಳಿ ವಿರುದ್ಧ ಮಹಿಳೆಯೋರ್ವರಿಗೆ ಕೆಲಸ ಕೊಡಿಸೋದಾಗಿ ನಂಬಿಸಿ ವಂಚಿಸಿದ ಆರೋಪ ಕೇಳಿಬಂದ ಹಿನ್ನೆಲೆ ನೈತಿಕ ಹೊಣೆಹೊತ್ತು ಜಲಸಂಪನ್ಮೂಲ ಸಚಿ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.
ಇನ್ನು ರಮೇಶ್ ಜಾರಕಿಹೊಳಿ ಅವರ ಹಸಿ-ಬಿಸಿ ದೃಶ್ಯದ ಜೊತೆಗೆ ಕೆಲ ಮಾತುಗಳು ಸಹ ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸಿದೆ.
ಹೌದು...ಆ ವಿಡಿಯೋನಲ್ಲಿ ಯುವತಿಯೊಂದಿಗೆ ಮಾತನಾಡುತ್ತಾ, ಸಿದ್ದರಾಮಯ್ಯ ಚಲೋ. ಯಡಿಯೂರಪ್ಪ ಬಾಳಾ ಕರಪ್ಯನ್ ಮಾಡವ್ನೇ ಎಂದಿದ್ದಾರೆ. ಓರ್ವ ಸಚಿವರೇ ಸಿಎಂ ಬಗ್ಗೆ ಈ ರೀತಿ ಹೇಳಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೇ ಯಡಿಯೂಪ್ಪ ಸೇರಿದಂತೆ ಬಿಜೆಪಿ ನಾಯಕರಿಗೆ ಇರಿಸುಮುರಿಸು ಉಂಟಾಗಿದೆ.
ಸಿಡಿದ ರಾಸಲೀಲೆ : ಈಗ ಕೈ ನಾಯಕನ ಹೊಗಳಿ ಸಿಎಂ BSY ಭ್ರಷ್ಟ ಎಂದ ಜಾರಕಿಹೊಳಿ?
ಇನ್ನು ಈ ಬಗ್ಗೆ ರಾಜ್ಯ ಕಾಂಗ್ರೆಸ್ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಹಾಸಿಗೆಯಲ್ಲೂ 'ಯಡಿಯೂರಪ್ಪ ಭ್ರಷ್ಟ' ಎಂದು ಬಿಜೆಪಿ ಸಚಿವರೇ ಕನವರಿಸುತ್ತಿದ್ದಾರೆ ಎಂದರೆ. ಬಿಎಸ್ ಯಡಿಯೂರಪ್ಪ, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಅದೆಷ್ಟಿರಬಹುದು ಎಂದು ರಾಜ್ಯದ ಜನತೆ ಚಿಂತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.
ಮತ್ತೊಂದು ಟ್ವೀಟ್ನಲ್ಲಿ ಧರ್ಮ, ಸಂಸ್ಕೃತಿ ರಕ್ಷಣೆಯಲ್ಲಿ ಅತ್ಯುತ್ತಮ ಪರ್ಫಾರ್ಮೆನ್ಸ್ ತೋರಿದ ರಾಜ್ಯ ಬಿಜೆಪಿ ನಾಯಕರು ಎಂದು ಒಟ್ಟು ಪಟ್ಟಿಯನ್ನೇ ಮಾಡಿದೆ.
ಕಳೆದ ಬಾರಿಯಲ್ಲಿ ರೇಣುಕಾಚಾರ್ಯ, ಹಾಲಪ್ಪ, ರಘುಪತಿ ಭಟ್, ಸವದಿ, ಸಿಸಿ ಪಾಟೀಲ್, ರಾಮದಾಸ್ ಅತ್ಯುತ್ತಮ ಪರ್ಫಾರ್ಮೆನ್ಸ್ ತೋರಿದ್ದಾರೆ. ಈ ಬಾರಿಯಲ್ಲಿ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಅತ್ಯುತ್ತಮ ಪರ್ಫಾರ್ಮೆನ್ಸ್ ತೋರಿದ್ದಾರೆ. ಈ ಲಿಸ್ಟ್ ಮುಂದುವರೆಯುವುದು ಅಲ್ಲವೇ ಬಿಜೆಪಿ ಕರ್ನಾಟಕ..? ಎಂದು ಕಾಂಗ್ರೆಸ್ ಟಾಂಗ್ ಕೊಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.