ರಾಜ್ಯದಲ್ಲಿ ಈಗಾಗಲೇ ಘೋಷಣೆ ಮಾಡಿದ್ದ ಜೆಡಿಎಸ್‌ನ 12 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬದಲಿಸಿ, ಇಂದು ಹೊಸದಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು (ಏ.19): ರಾಜ್ಯದಲ್ಲಿ ಈಗಾಗಲೇ ಘೋಷಣೆ ಮಾಡಿದ್ದ ಜೆಡಿಎಸ್‌ನ 12 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬದಲಿಸಿ, ಇಂದು ಹೊಸದಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ 130 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು, ಜೆಡಿಎಸ್ ಸ್ವತಂತ್ರ ಸರ್ಕಾರವನ್ನು ರಚಿಸುವ ಉದ್ಧೇಶ ಇಟ್ಟುಕೊಂಡು ಭಾರಿ ಪ್ರಚಾರ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈಗಾಗಲೇ 1ನೇ ಹಾಗೂ 2ನೇ ಪಟ್ಟಿಯಲ್ಲಿ ಬಿಡುಗಡೆ ಮಾಡಿದ್ದ 12 ಅಭ್ಯರ್ಥಿಗಳನ್ನು ಕೊನೇ ಕ್ಷಣದಲ್ಲಿ ಬದಲಾವಣೆ ಮಾಡಿದ್ದಾರೆ. ಇನ್ನು ಈ ಎಲ್ಲ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿರುವುದು ಗೆಲ್ಲುವ ಉದ್ದೇಶದಿಂದಲೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಬದಲಾವಣೆಯಾದ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳ ವಿವರ ಇಲ್ಲಿದೆ ನೋಡಿ..
ಜೆಡಿಎಸ್ 3ನೇ ಪಟ್ಟಿ ಬಿಡುಗಡೆ: ಆಯನೂರು ಮಂಜುನಾಥ್‌ಗೆ ಟಿಕೆಟ್- 59 ಅಭ್ಯರ್ಥಿಗಳು
ಬದಲಾಯಿಸಿದ ಅಭ್ಯರ್ಥಿಗಳ ಪಟ್ಟಿ
7 ಕ್ಷೇತ್ರಗಳಲ್ಲಿ ಜೆಡಿಎಸ್ ಬಾಹ್ಯ ಬೆಂಬಲ: ರಾಜ್ಯದಲ್ಲಿ ಪ್ರಮುಖ 2 ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಹಿರಂಗವಾಗಿ ಹೇಳಿದ್ದಾರೆ. ಆದರೆ, ದೇಶದಲ್ಲಿ ರಾಷ್ಟ್ರೀಯ ಪಕ್ಷಗಳ ಹೊರತಾಗಿ ಮೈತ್ರಿಕೂಟವನ್ನು ರಚನೆ ಮಾಡಲು ಜೆಡಿಎಸ್ ಕೂಡ ಸೇರಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿಪಿಐಎಂನ 3 ಹಾಗೂ ಆರ್‌ಪಿಐನ 3 ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲವನ್ನು ನೀಡಿದೆ. ಜೊತೆಗೆ, ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಅವರಿಗೂ ಬಾಹ್ಯ ಬೆಂಬಲವನ್ನು ಕೊಡಲಾಗಿದೆ.
ಜೆಡಿಎಸ್‌ನಿಂದ ಬಾಹ್ಯ ಬೆಂಬಲ ಕೊಟ್ಟ ಕ್ಷೇತ್ರಗಳ ಅಭ್ಯರ್ಥಿಗಳು
ನಂಜನಗೂಡು - ದರ್ಶನ್ ಧ್ರುವನಾರಾಯಣ
ಗುಲ್ಬರ್ಗ ಗ್ರಾಮಾಂತರ - ಸಿಪಿಐಎಂ ಅಭ್ಯರ್ಥಿಗೆ ಬೆಂಬಲ
ಬಾಗೇಪಲ್ಲಿ- ಸಿಪಿಐಎಂ ಅಭ್ಯರ್ಥಿಗೆ ಬೆಂಬಲ
ಕೆಆರ್.ಪುರಂ- ಸಿಪಿಐಎಂ ಅಭ್ಯರ್ಥಿಗೆ ಬೆಂಬಲ
ಸಿವಿ ರಾಮನ್‌ನಗರ - ಆರ್‌ಪಿಐ ಅಭ್ಯರ್ಥಿಗೆ ಬೆಂಬಲ
ವಿಜಯನಗರ - ಆರ್‌ಪಿಐ ಅಭ್ಯರ್ಥಿಗೆ ಬೆಂಬಲ
ಮಹದೇವಪುರ - ಆರ್‌ಪಿಐ ಅಭ್ಯರ್ಥಿಗೆ ಬೆಂಬಲ