ಗೈರಾದ ಶಾಸಕರಿಗೆ ಶೋಕಾಸ್ ನೋಟಿಸ್​ ಕೊಟ್ಟ ಕಾಂಗ್ರೆಸ್​:ನೋಟಿಸ್​ನಲ್ಲೇನಿದೆ?

By Web DeskFirst Published Jan 19, 2019, 9:42 PM IST
Highlights

ಶಾಸಕಾಂಗ ಸಭೆಗೆ ಗೈರಾದ ಶಾಸಕರಿಗೆ ಶೋಕಾಸ್ ನೋಟಿಸ್​ ಕೊಟ್ಟ ಕಾಂಗ್ರೆಸ್! ನೀಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ! ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದು, ಸಮಜಾಯಿಷಿ ನೀಡುವಂತೆ ನೋಟೀಸ್!ಆಪರೇಷನ್ ಕಮಲದ ಭೀತಿಯಿಂದ ಕಂಗೆಟ್ಟು ಶಾಸಕಾಂಗ ಸಭೆ ಕರೆದಿದ್ದ ರಾಜ್ಯ ಕಾಂಗ್ರೆಸ್! ಹಾಗಾದ್ರೆ ಶೋಕಸ್ ನೋಟಿಸ್ ನಲ್ಲೇನಿದೆ

ಬೆಂಗಳೂರು, [ಜ.19]: ನಿನ್ನೆ [ಶುಕ್ರವಾರ] ಶಾಸಕಾಂಗ ಪಕ್ಷದ ಸಭೆಗೆ ಗೈರಾದ ನಾಲ್ವರು ಶಾಸಕರಿಗೆ ಇಂದು [ಶನಿವಾರ] ರಾಜ್ಯ ಕಾಂಗ್ರೆಸ್​ ಶೋಕಾಸ್ ನೋಟಿಸ್ ನೀಡಿದೆ.

ಗೋಕಾಕ್​ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಸಹೋದರ [ಮಾಧ್ಯಮದಿಂದ ಬ್ಯಾನ್ ಆದ ಶಾಸಕ], ಅಥಣಿ ಶಾಸಕ ಮಹೇಶ್​​ ಕಮಟಳ್ಳಿ, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇದ್ರ ಹಾಗೂ ಚಿಂಚೋಳಿ ಶಾಸಕ ಉಮೇಶ್​​ ಜಾಧವ್​​ಗೆ ನೋಟಿಸ್​ ಶೋಕಾಸ್​ ನೀಡಿಲಾಗಿದೆ.

ಗೈರಾದ ನಾಲ್ವರ ಶಾಸಕ ಸ್ಥಾನಕ್ಕೆ ಕುತ್ತು! ಕೈ ಮುಂದಿನ ಹೆಜ್ಜೆ ಏನು?

 ಶಾಸಕಾಂಗ ಸಭೆಗೆ ಏಕೆ ಬಂದಿಲ್ಲ ಎನ್ನುವುದ ಬಗ್ಗೆ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೋಟಿಸ್​​ ನೀಡಿದ್ದಾರೆ. 

ರಾಜ್ಯದಲ್ಲಿ ಆಪರೇಷನ್ ಕಮಲದ ವದಂತಿ ಹಬ್ಬಿತ್ತು. ಇನ್ನೇನು ಬಿಜೆಪಿ ಕುದುರೆ ವ್ಯಾಪಾರ ನಡೆಸಿ ಸಮ್ಮಿಶ್ರ ಸರ್ಕಾರವನ್ನ ಉರುಳಿಸಿ ಅಧಿಕಾರ ಹಿಡಿಯಲಿದೆ ಅನ್ನೋ ಚರ್ಚೆ ಜೋರಾಗಿತ್ತು. 

ಕೊನೆಘಳಿಗೆಯಲ್ಲಿ ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ಶಾಕ್!

ಇದೆಲ್ಲದರ ಮಧ್ಯೆ ಇಬ್ಬರು ಅತೃಪ್ತ ಶಾಸಕರು ತಾವು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನ ವಾಪಸ್ ಪಡೆದುಕೊಳ್ಳುತ್ತೇವೆ ಎಂದು ಘೋಷಣೆ ಮಾಡಿದ್ದರು. ಇದ್ರಿಂದ ಮೈತ್ರಿ ಸರ್ಕಾರದ ಕುರ್ಚಿ ಅಲುಗಾಡಲು ಶುರುವಾಗಿತ್ತು.

ಅಲ್ಲದೇ ಕಾಂಗ್ರೆಸ್​ನ ಅತೃಪ್ತ ಶಾಸಕರು ಮುಂಬೈ ರೆಸಾರ್ಟ್ ನಲ್ಲಿ ಠಿಕಾಣಿ ಹೂಡಿದ್ದರು. ಇದ್ರಿಂದ ಪರಿಸ್ಥಿತಿ ನಿಯಂತ್ರಣ ಕೈ ಮೀರುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್, ಅತೃಪ್ತರನ್ನು ಸಮಾಧಾನ ಮಾಡಲು ಹಾಗೂ ಒಗ್ಗಟ್ಟು ಪ್ರದರ್ಶಿಸಲು ನಿನ್ನೆ [ಶುಕ್ರವಾರ] ಕಾಂಗ್ರೆಸ್​ ಶಾಸಕಾಂಗ ಸಭೆ ಕರೆದಿತ್ತು.

ಆಪರೇಷನ್ ಕಮಲ: ಸ್ವಾಮಿ, ಅಯ್ಯನ ರಹಸ್ಯ ಆಟಕ್ಕೆ ದಿಕ್ಕು ತಪ್ಪಿದ ಬಿಜೆಪಿ!

ಆದ್ರೆ ಈ ನಾಲ್ಕು ಶಾಸಕರು ಶಾಸಕಾಂಗ ಸಭೆಗೆ ಗೈರಾಗಿದ್ದರು. ಇದ್ರಿಂದ ಇದೀಗ ಶೋಕಾಸ್ ನೋಟಿಸ್ ನೀಡಲಾಗಿದ್ದು, ಇದಕ್ಕೆ ಏನಂತ ಸ್ಪಷ್ಟ ನೀಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಆಪರೇಷನ್ ಸಂಕ್ರಾಂತಿ ಎಲ್ಲಿಗೆ ಬಂತು? ಏನಾಯ್ತು?

 ನೋಟಿಸ್​ನಲ್ಲಿ ಏನಿದೆ?
ಮಹತ್ವದ ಸಭೆಗೆ ಹಾಜರಾಗಲೇ ಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ನೋಟಿಸ್​ ನೀಡಿದ್ದರೂ ತಾವು ಸಕಾರಣಗಳನ್ನು ನೀಡದೇ ಗೈರಾಗಿದ್ದೀರಿ. 

ಇದಲ್ಲದೆ ತಾವು ಪಕ್ಷ ತೊರೆಯುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ.  ಬಿಜೆಪಿ ನಾಯಕರನ್ನು ಭೇಟಿಯಾಗಿದ್ದೀರಿ. ಅದನ್ನು ನೀವು ಎಲ್ಲಿಯೂ ನಿರಾಕರಿಸಿಲ್ಲ. 

ತಾವು ಕಾಂಗ್ರೆಸ್​ ಅನ್ನು ತೊರೆಯುವ ನಡವಳಿಕೆಗಳನ್ನು ಪ್ರದರ್ಶಿಸಿದ್ದೀರಿ. ಹೀಗಾಗಿ ಇದೆಲ್ಲವೂ ತಮ್ಮ ಉದ್ದೇಶಪೂರ್ವಕ ನಡೆ ಎಂದು ಪಕ್ಷ ಪರಿಗಣಿಸಿದೆ. 

ಇದೆಲ್ಲದರ ಹಿನ್ನೆಲೆಯಲ್ಲಿ ತಮ್ಮನ್ನು ಶಾಸಕತ್ವದಿಂದ ಏಕೆ ಅನರ್ಹ ಮಾಡಬಾರದು ಎಂಬುದಕ್ಕೆ ಸಮಜಾಯಿಷಿ ನೀಡಿ. ತಪ್ಪಿದಲ್ಲಿ ಸಂವಿಧಾನದ ಷೆಡ್ಯೂಲ್​ 10ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

click me!