ಕಾಂಗ್ರೆಸ್ ಗುಲಾಮಗಿರಿಯಿಂದಾಗಿ ಒಬ್ಬ ವಿಧಾನಸೌಧ ನಮ್ದು ಅಂದ್ರೆ, ಇನ್ನೊಬ್ಬ ಸಂಸತ್ ವಕ್ಫ್ ಆಸ್ತಿ ಅಂತಾನೆ; ಸಿಟಿ ರವಿ

By Sathish Kumar KH  |  First Published Dec 4, 2024, 4:41 PM IST

ಕಾಂಗ್ರೆಸ್ ಪಕ್ಷವು ಮತ ಬ್ಯಾಂಕ್‌ಗಾಗಿ ಜನರನ್ನು ಗುಲಾಮರನ್ನಾಗಿ ಮಾಡುತ್ತಿದೆ ಮತ್ತು ವಕ್ಫ್ ಕಾಯ್ದೆಯ ಹೆಸರಿನಲ್ಲಿ ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದೆ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ. ವಕ್ಫ್ ಮಂಡಳಿಗೆ ಅತಿಯಾದ ಅಧಿಕಾರ ನೀಡಿರುವುದನ್ನು ಟೀಕಿಸಿದ ಅವರು, ಸಚಿವ ಜಮೀರ್ ಅಹ್ಮದ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.


ಹುಬ್ಬಳ್ಳಿ (ಡಿ.04): ಜನ ಕಾಂಗ್ರೆಸ್ ಪಾರ್ಟಿಗೆ ಅದಿಕಾರ ಕೊಟ್ಟಿದ್ದು ಭಸ್ಮಾಸುರನ ಕೈಗೆ ಅಧಿಕಾರ ಕೊಟ್ಟಂತೆ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದ ಜನರ ತಲೆ ಮೇಲೆ ಕಾಂಗ್ರೆಸ್ ಕೈ  ಇಟ್ಟಿದೆ. ಒಬ್ಬ ವಿಧಾನಸೌಧ ನಮ್ದು ಅಂತಾನೆ, ಇನ್ನೊಬ್ಬ ಸಂಸತ್ ಭವನ ಕೂಡಾ ವಕ್ಫ ಬೋರ್ಡ್ ಅಂತಾನೆ. ಮತ ಬ್ಯಾಂಕಗಾಗಿ ಕಾಂಗ್ರೆಸ್ ಗುಲಾಮರಾಗಿರಿ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಾಗ್ದಾಳಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನ ಕಾಂಗ್ರೆಸ್ ಪಾರ್ಟಿಗೆ ಅದಿಕಾರ ಕೊಟ್ಟಿದ್ದು ಭಸ್ಮಾಸೂರನ ಕೈಗೆ ಅಧಿಕಾರ ಕೊಟ್ಟಂತೆ ಆಗಿದೆ. ಅಧಿಕಾರಕ್ಕೆ ತಂದ ಜನರ ತಲೆ ಮೇಲೆ ಕಾಂಗ್ರೆಸ್ ಕೈ  ಇಟ್ಟಿದೆ. ಒಬ್ಬನು ವಿಧಾನ ಸೌಧವೂ ನಮ್ದು ಅಂತಾನೆ. ಇನ್ನೊಬ್ಬ ಸಂಸತ್ ಭವನ ಕೂಡಾ ವಕ್ಫ ಬೋರ್ಡ್ ಅಂತಾರೆ. ಮತದ ಆಸೆಗೆ ಕಾಂಗ್ರೆಸ್ ಗುಲಾಮರಾಗಿ ಕಾಯ್ದೆ ತಂದಿದ್ದೇ ಇದಕ್ಕೆ ಕಾರಣ. ಮತ ಬ್ಯಾಂಕಗಾಗಿ ಕಾಂಗ್ರೆಸ್ ಗುಲಾಮರಾಗಿರಿ ಮಾಡ್ತಿದೆ. ನಮ್ಮದು ದೇಶ ಭಕ್ತರ ಪಾರ್ಟಿ, ನಮಗೆ ಎದೆಗಾರಿಕೆ ಇರೋದಕ್ಕೆ ಆರ್ಟಿಕಲ್ 370 ರದ್ದಾಗಿದ್ದು. ನಾವು ಉಪಚುನಾವಣೆಯಲ್ಲಿ ಸೋತಿದ್ದೇವೆ, ಸತ್ತಿಲ್ಲ. ಕೆಲ ಯುದ್ಧದಲ್ಲಿ ಮೊದಲು ರಾಕ್ಷಸರು ಗೆದ್ದಿದ್ದರು ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.

Tap to resize

Latest Videos

ನಿಮ್ಮ ಪಾಪದ ಕೊಡ ತುಂಬಿದೆ. ನಾವು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲೋದಕ್ಕೆ ಹಲವು ಕಾರಣ ಇವೆ. ನಾವು ಅನ್ಯಾಯ ಮಾಡಿಲ್ಲ. ಅನ್ಯಾಯ ಮಾಡಿದ್ದರೆ ಸುಮ್ಮನೆ ಇರೋದಕ್ಕೆ ಜನ ಹೇಳಿಲ್ಲ. ಕರ್ನಾಟಕದಲ್ಲಿ ವಕ್ಫ್ ಕಾಯ್ದೆ ಹೆಸರಲ್ಲಿ 90 ಸಾವಿರ ಎಕರೆ ಜಮೀನು ಕಬಳಿಸಲು ಹೊರಟಿದ್ದಾರೆ. ಇದು ಲ್ಯಾಂಡ್ ಜಿಹಾದ್. ಸಿದ್ದರಾಮಯ್ಯ ಮನೆದೇವರು ಬೀರಲಿಂಗೇಶ್ವರ ದೇವಾಲಯವನ್ನು ವಕ್ಫ್ ಆಸ್ತಿ ಎಂದು ನಮೂದು ಮಾಡಿದ್ದಾರೆ. ರಾಜ್ಯದ ನೂರಾರು ಶಾಲೆ, ಆಸ್ಪತ್ರೆ, ಕೆರೆ ಎಲ್ಲವನ್ನೂ ವಕ್ಫ್ ಆಸ್ತಿ ಎಂದು ಮಾಡಿದ್ದಾರೆ. ಕಂಡವರ ಆಸ್ತಿಗೆ ಬೇಲಿ ಹಾಕೋ ಅಧಿಕಾರ ಯಾರಿಗೂ ಇಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ಅಪಾಯದಂಚಿನಲ್ಲಿ ಅಲ್ಪಸಂಖ್ಯಾತರು: ಬಾಂಗ್ಲಾದೇಶದ ಆಡಳಿತ ಬದಲಾವಣೆಯ ಕರಾಳ ಮುಖ!

ವಕ್ಫ್ ಮಂಡಳಿಗೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಮೀರಿ ಅಧಿಕಾರ ಕೊಟ್ಟ ಹಾಗಾಗಿದೆ ಅಲ್ವಾ.? ಯಾಕೆ ಸಿಎಂ ಸಿದ್ದರಾಮಯ್ಯ ಎದೆಗಾರಿಕೆ ತೋರಸ್ತಿಲ್ಲ. ಕಾಂಗ್ರೆಸ್ ಪಕ್ಷ ಮತಕ್ಕಾಗಿ ಮತಾಂಧತೆಗೆ ಕುಮ್ಮಕ್ಕು ಕೊಡುತ್ತಿದೆ. ಮತಾಂಧತೆಯನ್ನು ಪ್ರೋತ್ಸಾಹ ಮಾಡುತ್ತಿದೆ. ನಮ್ಮ ಹೋರಾಟ ರೈತರ ಪರವಾಗಿದೆ. ನಮ್ಮ ಹೋರಾಟ ಸಂವಿಧಾನ ಪರ, ಸಂವಿಧಾನದ ಮೇಲೆ ಷರಿಯಾ ಹೇರಲು ಕಾಂಗ್ರೆಸ್ ಪ್ರಯತ್ನ ‌ಮಾಡತಿದೆ. ಇದು ರೈತರಿಗೆ ಮರಣ ಶಾಸನ. ಕಾಯ್ದೆ ಎಲ್ಲವರೆಗೂ ಅಲ್ಲಿ ಇರತ್ತದೆಯೋ, ಅಲ್ಲಿವರೆಗೂ ಅದು ತೂಗುಕತ್ತಿ ಆಗಿರುತ್ತದೆ. ಯಾವಾಗ ಆದರೂ ಅದು ಮರಣ ಶಾಸನ ಆಗಬಹುದು. ಹೀಗಾಗಿ, ಆ ವಕ್ಫ್ ಕಾಯ್ದೆ ರದ್ದಾಗಬೇಕು. ವಕ್ಫ ವಿರುದ್ದ ಜನಾಭಿಪ್ರಾಯ ರೂಪಿಸುತ್ತೇವೆ ಎಂದು ಹೇಳಿದರು.

ದೇಶದಲ್ಲಿ ಕಾಂಗ್ರೆಸ್ ಸಂವಿಧಾನದ ಪರವೋ, ಇಸ್ಲಾಂ ಧರ್ಮದ ಷರಿಯಾ ಕಾನೂನು ಪರಾನೋ ಎಂದು ಸ್ಪಷ್ಟಪಡಿಸಬೇಕು. ಸಚಿವ ಜಮೀರ್ ಯಾವ ಕಾಯ್ದೆ ಅಡಿ ವಕ್ಫ್ ಅದಾಲತ್ ನಡೆಸುತ್ತಿದ್ದಾರೆ. ಕೆಲ‌ಕಡೆ ಜಮೀರ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ವಕ್ಫ್ ಅದಾಲತ್ ನಡೆಸೋದಕ್ಕೆ ಅಧಿಕಾರ ಇಲ್ಲ. ಜಮೀರ್ ಅಹಮ್ಮದ್ ಅವರನ್ನ ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ಟಿಪ್ಪು ಸುಲ್ತಾನ ಅವಧಿಯಲ್ಲಿ ಕೆಲವರಿಗೆ ಪರಮಾಧಿಕಾರ ಕೊಟ್ಟಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಸಚಿವ ಜಮೀರ್‌ಗೆ ಪರಮಾಧಿಕಾರ ಕೊಟ್ಟಿದ್ದಾರೆ. ಇದು ತಪ್ಪು. ಸಿದ್ದರಾಮಯ್ಯನವರೇ ನೀವು ಟಿಪ್ಪು ಸುಲ್ತಾನ ಅಲ್ಲ, ಸಿದ್ದರಾಮುಲ್ಲಾಖಾನ್ ಆಗದೆ ಸಿದ್ದರಾಮಯ್ಯ ಆಗಿರಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ 2.5 ವರ್ಷಕ್ಕೆ ಸಿಎಂ ಹುದ್ದೆ ಹಂಚಿಕೆ ಒಪ್ಪಂದದ ಗುಟ್ಟು ಬಿಚ್ಚಿಟ್ಟ ಡಿ.ಕೆ, ಶಿವಕುಮಾರ್

click me!