15 ಪಕ್ಷೇತ್ರಗಳಲ್ಲಿ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ಇದರ ಮಧ್ಯೆ ಬಿಜೆಪಿ ಎಲ್ಲಾ ಕ್ಷೇತ್ರಗಳಿಗೆ ತಮ್ಮ ಉಸ್ತುವಾರಿಗಳನ್ನು ನೇಮಿಸುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಇನ್ನು ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸದೇ ಉಸ್ತುವಾರಿಗಳನ್ನ ನೇಮಕ ಮಾಡಿದೆ. ಹಾಗಾದ್ರೆ ಯಾವ ಕ್ಷೇತ್ರ ಯಾರ ಹೆಗಲಿಗೆ..? ಎನ್ನುವ ಡಿಟೇಲ್ಸ್ ಈ ಕೆಳಗಿನಂತಿದೆ.
ಬೆಂಗಳೂರು, [ನ.16]: ಉಪಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್, ಇಂದು [ಶನಿವಾರ] 15 ಕ್ಷೇತ್ರಗಳಿಗೆ ತನ್ನ ಉಸ್ತುವಾರಿಗಳನ್ನ ನೇಮಿಸಿದೆ.
ಬೈ ಎಲೆಕ್ಷನ್‌ಗೆ ಬಿಜೆಪಿ ಪಡೆ ರೆಡಿ: 15 ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ
undefined
ಇನ್ನು ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಯಾರು ಎನ್ನುವುದನ್ನು ಘೋಷಣೆ ಮಾಡಿಲ್ಲ. ಆಗಲೇ ಉಸ್ತುವಾರಿಗಳನ್ನ ನೇಮಕ ಮಾಡಿದ್ದು, ಉಪಚುನಾವಣಾ ಸಮರದ ಹೊಣೆ ಮಾಜಿ ಸಚಿವರುಗಳಿಗೆ ನೀಡಲಾಗಿದೆ.
Breaking: ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಚಿಕ್ಕಬಳ್ಳಾಪುರ, ಗೋಕಾಕ್, ಯಶವಂತಪುರ, ಅಥಣಿ, ಕಾಗವಾಡ, ಶಿವಾಜಿನಗರ, ಹಾಗೂ ಕೆ.ಆರ್.ಪೇಟೆ [ಮಂಡ್ಯ] ಕ್ಷೇತ್ರಗಳಿಗೆ ಅಧಿಕೃತವಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿಲ್ಲ. ಆದ್ರೆ ಈ ಎಲ್ಲಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಹಾಗಾದ್ರೆ, ಯಾರು ಯಾವ ಕ್ಷೇತ್ರಕ್ಕೆ ಎನ್ನುವುದು ಈ ಕೆಳಗಿನಂತಿದೆ.
ಉಸ್ತುವಾರಿಗಳ ಪಟ್ಟಿ
1. ಅಥಣಿ- ಎಂ.ಬಿ.ಪಾಟೀಲ್
2. ಕಾಗವಾಡ- ಈಶ್ವರ ಖಂಡ್ರೆ
3. ಗೋಕಾಕ್- ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್.
4. ಹೊಸಕೋಟೆ- ಕೃಷ್ಣ ಬೈರೆಗೌಡ
5. ಯಲ್ಲಾಪುರ- ಆರ್ ವಿ ದೇಶಪಾಂಡೆ
6. ಹಿರೇಕೆರೂರು- ಹೆಚ್ ಕೆ ಪಾಟೀಲ್
7. ರಾಣೆಬೆನ್ನೂರು- ಎಸ್ ಆರ್ ಪಾಟೀಲ್
8. ವಿಜಯನಗರ- ಬಸವರಾಜ್ ರಾಯರೆಡ್ಡಿ
9. ಚಿಕ್ಕಬಳ್ಳಾಪುರ- ಶಿವಶಂಕರರೆಡ್ಡಿ
10. ಕೆ.ಆರ್.ಪುರಂ- ಕೆ.ಜೆ.ಜಾರ್ಜ್ ಮತ್ತು ರಾಮಲಿಂಗಾರೆಡ್ಡಿ
11. ಯಶವಂತಪುರ- ಎಂ.ಕೃಷ್ಣಪ್ಪ
12. ಶಿವಾಜಿನಗರ- ಯು.ಟಿ.ಖಾದರ್
13. ಮಹಾಲಕ್ಷ್ಮೀ ಲೇಔಟ್- ಹೆಚ್ ಎಂ ರೇವಣ್ಣ ಮತ್ತು ರಾಮಲಿಂಗಾರೆಡ್ಡಿ
14. ಕೆ.ಆರ್.ಪೇಟೆ-ಚೆಲುವರಾಯಸ್ವಾಮಿ
15.ಹುಣಸೂರು- ಹೆಚ್.ಸಿ.ಮಹಾದೇವಪ್ಪ
8 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ
ಯಲ್ಲಾಪುರ- ಭೀಮಣ್ಣ ನಾಯಕ್
ಹಿರೇಕೆರೂರು- ಬಿ.ಎಚ್. ಬನ್ನಿಕೋಡ್
ರಾಣೇಬೆನ್ನೂರು - ಕೆ.ಬಿ. ಕೋಳಿವಾಡ್
ಚಿಕ್ಕಬಳ್ಳಾಪುರ- ಎಂ. ಅಂಜಿನಪ್ಪ
ಕೆ.ಆರ್.ಪುರ, ಬೆಂಗಳೂರು - ಎಂ. ನಾರಾಯಣಸ್ವಾಮಿ
ಮಹಾಲಕ್ಷ್ಮೀ ಲೇಔಟ್ - ಎಂ. ಶಿವರಾಜ್
ಹೊಸಕೋಟೆ- ಪದ್ಮಾವತಿ ಸುರೇಶ್
ಹುಣಸೂರು- ಎಚ್.ಪಿ. ಮಂಜುನಾಥ್
ಉಪ ಚುನಾವಣೆ ವೇಳಾಪಟ್ಟಿ
* ನವೆಂಬರ್ 11 : ನಾಮಪತ್ರ ಸಲ್ಲಿಕೆ ಆರಂಭ
* ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನ,
* ನವೆಂಬರ್ 19 ನಾಮಪತ್ರಗಳ ಪರಿಶೀಲನೆ
* ನವೆಂಬರ್ 21 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
* ಡಿಸೆಂಬರ್ 5 ಮತದಾನ (7 ಗಂಟೆಯಿಂದ 6)
* ಡಿಸೆಂಬರ್ 9 ಮತ ಎಣಿಕೆ.