ಪದ್ಮಾವತಿ ಸುರೇಶ್ ಆಸ್ತಿ ಡಿಟೇಲ್ಸ್: ಗಂಡ-ಹೆಂಡ್ತಿ ಬಳಿ ಕೇಜಿಗಟ್ಲೇ ಚಿನ್ನ, ಬೆಳ್ಳಿ..!

By Web DeskFirst Published Nov 16, 2019, 6:14 PM IST
Highlights

ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಸಿದರು. ಈ ವೇಳೆ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದು, ಕೋಟ್ಯಾಧೀಶೆಯಾಗಿದ್ದಾರೆ. ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ಕೂಡ ಕೋಟ್ಯಾಧೀಪತಿಗಳಾಗಿದ್ದು, ಹೊಸಕೋಟೆ ಅಖಾಡದಲ್ಲಿ ಕಬೇರರ ಸವಾಲ್ ಏರ್ಪಟ್ಟಿದೆ. ಹಾಗಾದ್ರೆ ಹೊಸಕೋಟೆ ಕಣದ ಕಲಿಗಳ ಆಸ್ತಿ ಎಷ್ಟು..? ಈ ಕೆಳಗಿನಂತಿದೆ ನೋಡಿ...

ಬೆಂಗಳೂರು, [ನ.16]: ಹೊಸಕೋಟೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಸುರೇಶ ಇಂದು [ಶನಿವಾರ] ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ಅಫಿಡೆವಿಟ್​ ಸಲ್ಲಿಸಿದ್ದು, ಅವರ ಆಸ್ತಿ ಮೌಲ್ಯ ಒಟ್ಟು 424 ಕೋಟಿ ರೂ. ಇದೆ ಎಂದು ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ. 424 ಕೋಟಿ 56 ಲಕ್ಷ 58 ಸಾವಿರ 436.34 ರೂ. ಆಸ್ತಿ ಇದ್ದು, 16 ಕೋಟಿ 63 ಲಕ್ಷ 68 ಸಾವಿರ 160 ರೂ 34 ಪೈಸೆ ಚರಾಸ್ತಿ ಹಾಗೂ 407 ಕೋಟಿ 92 ಸಾವಿರದ 90 ಸಾವಿರದ 276 ರೂ. ಸ್ಥಿರಾಸ್ತಿ ಹೊಂದಿದ್ದಾರೆ.

ಎಂಟಿಬಿ ಆಸ್ತಿ 18 ತಿಂಗಳಲ್ಲಿ 180 ಕೋಟಿ ರು. ಹೆಚ್ಚಳ!

ಇನ್ನು 47 ಕೋಟಿ 77 ಲಕ್ಷದ 62 ಸಾವಿರದ 936 ರೂಪಾಯಿ 48 ಪೈಸೆ ರೂ. ಬೈರತಿ ಸುರೇಶ್ ಹಾಗೂ ಪದ್ಮಾವತಿ ಸಾಲ ಇದೆ ಎಂದು ದಾಖಲೆಯಲ್ಲಿ ತೋರಿಸಿದ್ದಾರೆ. ಪದ್ಮಾವತಿ ಒಂದೂವರೆ ಕೆಜಿ ಚಿನ್ನ ಮತ್ತು 10 ಕೆಜಿ ಬೆಳ್ಳಿ ಆಭರಣ ಹೊಂದಿದ್ದರೆ, ಸುರೇಶ್ ಬಳಿ 2 ಕೆಜಿ 12 ಗ್ರಾಂ ಚಿನ್ನ, 50 ಕೆಜಿ ಬೆಳ್ಳಿ ಆಭರಣಗಳಿವೆ.

ಇಷ್ಟೇ ಅಲ್ಲದೇ ಪದ್ಮಾವತಿ ಹೆಸರಿನಲ್ಲಿ ಪ್ರ್ಯಾಡೋ, ಬೆಂಜ್ಹ್, ಆಡಿ, ಹುಂಡೈ ಐ20, JCB ಇದ್ರೆ, ಸುರೇಶ್ ಹೆಸರಲ್ಲಿ 3 ಇನ್ನೋವಾ ಕಾರು, ಬೆಂಜ್ಹ್, ಮಹೀಂದ್ರಾ ಜೀಪ್ ಇದೆ. ಮತ್ತೊಂದೆಡೆ ಇವರ ಪ್ರತಿಸ್ಪರ್ಧಿ ಬಿಜೆಪಿ  ಅಭ್ಯರ್ಥಿ ಎಂಟಿಬಿ ನಾಗರಾಜ್ ರಾಜ್ಯದ ಶ್ರೀಮಂತ ರಾಜಕಾರಣಿಯಾಗಿದ್ದಾರೆ.

ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಯಲ್ಲಿ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದು, ತಮ್ಮ ಹಾಗೂ ಪತ್ನಿ ಹೆಸರಿನಲ್ಲಿ ಬರೋಬ್ಬರಿ 1195.80 ಕೋಟಿ ರು.ಗಳಷ್ಟುಚರ ಮತ್ತು ಸ್ಥಿರ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಶರತ್‌ 100 ಕೋಟಿ ಒಡೆಯ!

 ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶರತ್ ಬಚ್ಚೇಗೌಡ ಕೂಡ ಕೋಟ್ಯಾಧೀಶ. ಇವರೂ ಸಹ 138 ಕೋಟಿ ರೂ. ಮೌಲ್ಯ ಆಸ್ತಿ ಹೊಂದಿದ್ದಾರೆ. ಈ ಪೈಕಿ 34.50 ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿ ಹಾಗೂ 63 ಕೋಟಿ ರು. ಮೌಲ್ಯದ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ.

ಒಟ್ಟಿನಲ್ಲಿ ಹೊಸಕೋಟೆ ಅಖಾಡದಲ್ಲಿರುವ ಈ ಮೂರು ಅಭ್ಯರ್ಥಿಗಳು ಕೋಟ್ಯಾಧೀಶರಾಗಿದ್ದು, ಕುಬೇರರ ಜಿದ್ದಾಜಿದ್ದಿ ಹೋರಾಟದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

click me!