ಕಾಂಗ್ರೆಸ್‌ ಸರ್ಕಾರದ ಮೊದಲ ಸಚಿವ ಸಂಪುಟ ಆರಂಭ: 5 ಗ್ಯಾರಂಟಿಗಳ ಜಾರಿಗೆ ಷರತ್ತುಗಳ ಚರ್ಚೆ

By Sathish Kumar KHFirst Published May 20, 2023, 3:10 PM IST
Highlights

ರ್ನಾಟಕದ 16ನೇ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೊದಲ ಸಚಿವ ಸಂಪುಟ ವಿಧಾನಸೌಧದಲ್ಲಿ ಆರಂಭವಾಗಿದೆ.

ಬೆಂಗಳೂರು (ಮೇ 20): ಕರ್ನಾಟಕದ 16ನೇ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೊದಲ ಸಚಿವ ಸಂಪುಟ ವಿಧಾನಸೌಧದಲ್ಲಿ ಆರಂಭವಾಗಿದೆ. ಈ ವೇಳೆ ಕಾಂಗ್ರೆಸ್‌ ಕೊಟ್ಟ 5 ಗ್ಯಾರಂಟಿಗಳನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮೊದಲ ಸಂಪುಟದಲ್ಲೇ ಗ್ಯಾರಂಟಿ ಈಡೇರಿಕೆ: ರಾಜ್ಯದಲ್ಲಿ ಕಾಂಗ್ರೆಸ್‌ ಭರ್ಜರಿ ಮತಗಳಿಸಲು ತಾನು ಪ್ರಣಾಳಿಕೆಯಲ್ಲಿ ಘೋಷಿಸಿದ 5 ಗ್ಯಾರಂಟಿಗಳನ್ನು ಈಡೇರಿಸುವ ಭರವಸೆ ನೀಡಿದೆ. ಮೊದಲ ಸಂಪುಟ ಸಭೆಯಲ್ಲೇ ಐದೂ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದ್ದರು. ಅದರಂತೆ ಈಗ ಸಚಿವ ಸಂಪುಟ ನಡೆಯುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಗ್ಯಾರಂಟಿ ಜಾರಿಯ ಘೋಷಣೆ ಹೊರಬೀಳಲಿದೆ.

Karnataka CM Oath:ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರಿದ ಸಿದ್ದರಾಮಯ್ಯ: ಗ್ಯಾರಂಟಿಗೆ ಬಂತು ವಾರಂಟಿ

ಗ್ಯಾರಂಟಿಗಳಿಗೆ ಷರತ್ತುಗಳು ಅನ್ವಯ ಸಾಧ್ಯತೆ:  ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಬರೋಬ್ಬರಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ (BJP), ಜೆಡಿಎಸ್ (JDS) ಹಾಗೂ ಇತರರನ್ನು ಮಣಿಸಿದೆ. ಈ ಅವಿಸ್ಮರಣೀಯ ಗೆಲುವಿಗೆ ಕಾಂಗ್ರೆಸ್‌ನ 5 ಗ್ಯಾರಂಟಿ (5 guarantee) ಯೋಜನೆಗಳ ಪಾಲೂ ದೊಡ್ಡದಿದೆ. ಚುನಾವಣೆಗೂ ಮುನ್ನವೇ ರಾಜ್ಯದ ಜನಸಾಮಾನ್ಯರು, ಗೃಹಿಣಿಯರು, ನಿರುದ್ಯೋಗಿಗಳು, ರೈತರು ಸೇರಿದಂತೆ ಹಲವು ವರ್ಗಗಳವನ್ನು ಗುರುಯಾಗಿಸಿಕೊಂಡು 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಅದರಂತೆ ಮೊದಲ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಗ್ಯಾರಂಟಿ ಜಾರಿಗೆ ಕೆಲ ಷರತ್ತುಗಳು ಅನ್ವಯ ಆಗುವ ಸಾಧ್ಯತೆಗಳಿವೆ.

ಕಾಂಗ್ರೆಸ್ 5 ಗ್ಯಾರಂಟಿ ಯೋಜನೆಗಳು: 
ಗೃಹಜ್ಯೋತಿ- ಎಲ್ಲಾ ಮನೆಗಳಿಗೂ 200 ಯೂನಿಟ್‌ ಉಚಿತ ಕರೆಂಟ್
ಗೃಹಲಕ್ಷ್ಮಿ- ಪ್ರತಿ ಮನೆ ಯಜಮಾನಿಗೂ ಮಾಸಿಕ 2000 ರೂ. ಸಹಾಯಧನ
ಅನ್ನಭಾಗ್ಯ - ಬಿಪಿಎಲ್‌ ಕುಟುಂಬಗಳಿಗೆ 10 ಕೆಜಿ ಆಹಾರ ಧಾನ್ಯ
ಯುವನಿಧಿ - ಎರಡು ವರ್ಷಗಳ ಕಾಲಕ್ಕೆ ನಿರುದ್ಯೋಗಿ ಭತ್ಯೆ - ಪದವೀಧರರಿಗೆ ತಿಂಗಳಿಗೆ 3000 ರೂ. ಮತ್ತು ಡಿಪ್ಲೋಮಾ ಮಾಡಿದವರಿಗೆ ತಿಂಗಳಿಗೆ 1500 ರೂ. ನೆರವು
ಸಖಿ - ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಸಾಮಾನ್ಯ ಬಸ್ಸುಗಳಲ್ಲಿ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣ

OATH TAKING CEREMONY: ಮಗಳ ಮದುವೆ ಶರ್ಟ್‌ ಧರಿಸಿ ಬಂದ ಡಿಕೆಶಿ, ಗಂಗಾಧರ ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ

ಕಾಂಗ್ರೆಸ್‌ನ ಇತರೆ ಭರವಸೆಗಳು: ಕಾಂಗ್ರಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 5 ಗ್ಯಾರಮಟಿಗಳು ಮಾತ್ರವಲ್ಲದೇ ಅಂಗನವಾಡಿ ಕಾರ್ಯಕರ್ತೆಯರ ವೇತನ 11,500 ರೂ ದಿಂದ 15,000 ರೂಗೆ ಹೆಚ್ಚಳ. ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ 8,000 ರೂಗೆ ಹೆಚ್ಚಳ. ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 10 ಸಾವಿರ ರೂಪಾಯಿಗೆ ಏರಿಕೆ ಮತ್ತು ವಿಶ್ರಾಂತಿ ವೇತನ 2 ಲಕ್ಷ ರೂ ನೀಡುವುದು. ಬಿಸಿಯೂಟದ ಅಡುಗೆಯವರಿಗೆ ಮಾಸಿಕ ಗೌರವಧನ 6,000 ರೂ.ಗೆ ಏರಿಕೆ. ಪೊಲೀಸ್ ಇಲಾಖೆಯಲ್ಲಿ ಶೇ 33ರಷ್ಟು ಮಹಿಳೆಯರ ನೇಮಕಾತಿ. ರಾತ್ರಿ ಪಾಳಿ ಸಿಬ್ಬಂದಿಗೆ 5 ಸಾವಿರ ರೂ ವಿಶೇಷ ಮಾಸಿಕ ಭತ್ಯೆ ಮತ್ತು ಎಲ್ಲ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ಹೆಚ್ಚುವರಿ ವೇತನ ಸೇರಿ ಹಲವು ಭರವಸೆಗಳನ್ನು ನೀಡಿತ್ತು. ಈಗ 5 ಗ್ಯಾರಂಟಿ ಈಡೇರಿಸಲು ಚರ್ಚೆ ಮಾಡುತ್ತಿದ್ದು, ಹಂತ ಹಂತವಾಗಿ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದಾರೆ ಎಂದು ತಿಳಿದುಬಂದಿದೆ. 

click me!