ಬೆಂಗಳೂರು (ಜು.29): ಈಗಿನ ಹೊಸ ಸಿಎಂಗೆ ಅನುಭವ ಇದೆ. ಅವರು ಜನತಾ ಪರಿವಾರದವರು.ಅವರು ಬಿಜೆಪಿಯಿಂದ ಸಿಎಂ ಆಗಿದ್ದರೂ ಕೂಡ ಜನತಾ ಪರಿವಾರದವರೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಅವರು ನನಗೆ ಒಳ್ಳೆಯ ಸ್ನೇಹಿತರು. ಅವರಿಗೆ ಎಲ್ಲರೂ ಸಹಕಾರ ನೀಡಬೇಕು. ಬಿಎಸ್ ವೈ ಗೆ ಕೇಂದ್ರ ಸಹಕಾರ ನೀಡಲಿಲ್ಲ. ಬಿಎಸ್ ವೈ ಸಿಎಂ ಎಂಬ ಭಾವನೆ ಅನ್ನೋದನ್ನೇ ಕೇಂದ್ರ ನೋಡಲಿಲ್ಲ.ಕೇಂದ್ರ ಸರ್ಕಾರದಲ್ಲಿ ರಾಜ್ಯದ ಹಲವಾರು ಬೇಡಿಕೆ ಇನ್ನೂ ಬಾಕಿ ಇದೆ ಎಂದರು.
undefined
ಜಿಎಸ್ ಟಿ ಸೇರಿದಂತೆ ಎಲ್ಲಾ ರೀತಿಯ ಹಣ ಬಿಡುಗಡೆ ಮಾಡಬೇಕಿದೆ. ಬೊಮ್ಮಾಯಿ ಅವರಿಗೆ ಕೇಂದ್ರ ಸಹಕಾರ ನೀಡಬೇಕು. ಸದ್ಯ ಅವರಿಗೆ ಒತ್ತಡ ಇರುವಂತದ್ದು ಗೊತ್ತಿದೆ. ನಿನ್ನೆಯೂ ಒಂದಿಷ್ಟು ಯೋಜನೆ ಜಾರಿ ಮಾಡಿದ್ದಾರೆ. ಸಂದ್ಯಾ ಸುರಕ್ಷಾ ಯೋಜನೆಗೆ ನಾನು ಸಿಎಂ ಆಗಿದ್ದಾಗಲೇ ಹೆಚ್ಚು ಮಾಡಿದ್ದೆ. ಆರೇಳು ತಿಂಗಳಿಂದ ಅವರಿಗೆ ಹಣವೇ ನೀಡಿಲ್ಲ. ಹಾಗಾಗಿ ನಿನ್ನೆ ಘೋಷಣೆ ಆಗಿರುವ ಯೋಜನೆಗಳು ಘೋಷಣೆಯಾಗಿಯೇ ಉಳಿಯಬಾರದು ಎಂದರು.
ಬೊಮ್ಮಾಯಿ ಮುಖ್ಯಮಂತ್ರಿ ಮಾಡಿದ್ಯಾರು..?
ಬಿಎಸ್ ವೈ ಸಿಎಂ ಆಗಿದ್ದಾಗ ಕೊರೋನಾದಿಂದ ಸತ್ತವರಿಗೆ ಒಂದು ಲಕ್ಷ ಕೊಡುತ್ತೇವೆ ಎಂದಿದ್ದರು. ಆದರೆ ಇಲ್ಲಿಯವರೆಗೆ ಅದು ಆಗಿಲ್ಲ. ನೆರೆ ಹಾವಳಿ ವೀಕ್ಷಣೆ ಮಾಡೋದಷ್ಟೆ ಅಲ್ಲ. 2019 ರ ಬೆಳೆ ಪರಿಹಾರ, ಮಳೆಯಿಂದ ಹಾನಿಯಾದವರಿಗೆ ಪರಿಹಾರ ಶೀಘ್ರವಾಗಿ ನೀಡಬೇಕು. ಬಿಜೆಪಿ ಜನರಿಗೆ ಕೊಟ್ಟ ಆಶ್ವಾಸನೆಯನ್ನು ಈಗಲಾದರೂ ಈಡೇರಿಸಲಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಕಳೆದ ಒಂದು ವಾರದಿಂದ ನಿಮ್ಮ ಗಮನಕ್ಕೆ ತರುತ್ತಲೇ ಇದ್ದೇನೆ. ಅಪ್ಪರ್ ಕೃಷ್ಣ, ಮೇಕೆದಾಟು, ಮಹದಾಯಿ ವಿಚಾರವಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಕೇಂದ್ರ ಸರ್ಕಾರದ ನಮಗೆ ತೋರಿಸುತ್ತಿರುವ ಧೋರಣೆ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದೇವೆ. ಇಂದು 3 ಗಂಟೆಗೆ ರಾಜ್ಯಪಾಲರು ಭೇಟಿಯಾಗೋದಿಕ್ಕೆ ಸಮಯ ಕೊಟ್ಟಿದ್ದಾರೆ. ವಿಧಾನಸೌಧದಿಂದ ರಾಜಭವನಕ್ಕೆ ಕಾಲ್ನಡಿಗೆ ಮೂಲಕ ಹೋಗುತ್ತೇವೆ. ಅಲ್ಲಿ 5 ಜನ ಹೋಗಲಿಕ್ಕೆ ಮಾತ್ರ ಅವಕಾಶ ಕೊಟ್ಟಿದ್ದಾರೆ ಎಂದರು.
ಬೊಮ್ಮಾಯಿಯವರಿಗೆ ನೀರಾವರಿ ಬಗ್ಗೆ ಅರಿವಿದೆ. ಅಪ್ಪರ್ ಕೃಷ್ಣದಲ್ಲಿಯೂ ಸೆಂಟ್ರಲ್ ನಿಂದ ನೋಟಿಫಿಕೇಷನ್ ಆಗಿಲ್ಲ. ಮೇಕೆದಾಟಿನ ವಿಚಾರದಲ್ಲಿಯೂ ಬ್ಯಾಲೆನ್ಸಿಂಗ್ ರಿಸರ್ವ್ ಮಾಡೋದಿಕ್ಕೆ ಸಾಧ್ಯವಾಗಿಲ್ಲ. ಚರ್ಚೆ ಮಾಡುತ್ತಕೇ ಇದ್ದೇವೆ ಆದರೆ ಆಗುತ್ತಿಲ್ಲ. ರಾಜ್ಯದ ಜನತೆಯ ಬಗ್ಗೆ ಕೇಂದ್ರ ಚೆಲ್ಲಾಟವಾಡುತ್ತಿದೆ.
ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮೆಮೋರಂಡಮ್ ಕೊಡುತ್ತೇನೆ. ಪ್ರಧಾನಿಗಳಿಗೂ ಆ ಕಾಪಿ ಕಳಿಸುತ್ತೇವೆ. ಮೊದಲನೇ ಹಂತದಲ್ಲಿ ನಮ್ಮ ಪಕ್ಷದ ವತಿಯಿಂದ ಇಂದು ಪ್ರಸ್ತಾವನೆ ಕೊಡುತ್ತೇವೆ. ಕೇಂದ್ರ ಯಾವ ರೀತಿ ಪ್ರತಿಕ್ರಿಯಿಸುತ್ತದೆ ನೋಡಿಕೊಂಡು ನಂತರ ನಮ್ಮ ನಿಲುವು ಇರುತ್ತದೆ ಎಂದು ಎಚ್‌ಡಿಕೆ ಹೇಳಿದರು.
ಭ್ರಷ್ಟಾಚಾರ ವಿಚಾರ : ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನಾನಷ್ಟೇ ಅಲ್ಲ, ಯತ್ನಾಳ್,ವಿಶ್ವನಾಥ್ ಅವರೇ ಹೇಳುತ್ತಾರೆ. ಯಡಿಯೂರಪ್ಪಗೆ ನಾವು ಹೇಳಿದರೆ ನೋವಾಗುತ್ತದೆ. ವಿಶ್ವನಾಥ್, ಯತ್ನಾಳ್ ಹೇಳಿದರೆ ನೋವಾಗಲ್ಲ. ಯಡಿಯೂರಪ್ಪ ಇದ್ದರೆ ಹೀನಾಯವಾಗಿ ಸೋಲುತ್ತೇವೆ. ದುರಾಡಳಿತ,ಅನಾಚಾರ ಸರ್ಕಾರ ಅಂತ ಜನರು ಬೆಂಬಲಿಸಲ್ಲ ಅನ್ನೋ ಕಾರಣಕ್ಕೆ ಮೋದಿ ಯಡಿಯೂರಪ್ಪ ಬದಲಾಯಿಸಿದ್ದಾರೆ ಎಂದರು.
ಬೊಮ್ಮಾಯಿ ಸಿಎಂ ಮಾಡಿದ್ದೇ ಯಡಿಯೂರಪ್ಪ. ಬೊಮ್ಮಾಯಿ ಯಡಿಯೂರಪ್ಪ ಮರ್ಜಿಯಲ್ಲಿರ್ತಾರೆ. ಪೂರ್ಣಾವಧಿ ಸರ್ಕಾರ ಇರಲಿ ಎಂದು ಹರಸುತ್ತೇನೆ. ಬಿಎಸ್ ವೈ ಮಾರ್ಗದರ್ಶನದಲ್ಲೇ ಆಡಳಿತ ಮಾಡುತ್ತೇನೆ ಎಂದಿದ್ದಾರೆ. ಭ್ರಷ್ಟಾಚಾರ ಮುಚ್ಚಿಹಾಕದೆ ಇನ್ನೇನು. ನೀವೇ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.