ಬೆಂಗಳೂರು ಪ್ರಯಾಣ ರದ್ದು: ನೂತನ ಸಚಿವರ ಪಟ್ಟಿ ಹಿಡಿದು ಬರಲಿರುವ ಬೊಮ್ಮಾಯಿ

By Suvarna NewsFirst Published Aug 3, 2021, 10:32 PM IST
Highlights

* ಬೆಂಗಳೂರು ಪ್ರಯಾಣ ರದ್ದು ಮಾಡಿದ ಬೊಮ್ಮಾಯಿ
* ಆ.02ರ ರಾತ್ರಿ 9.15ಕ್ಕೆ ಕಾಯ್ದಿರಿಸಿದ್ದ ವಿಮಾನದ ಟಿಕೆಟ್ ​ ಕ್ಯಾನ್ಸಲ್​
* ಸಚಿವರ ಪಟ್ಟಿ ತೆಗೆದುಕೊಂಡು ಬರಲು ಮನಸ್ಸು ಮಾಡಿದ ಬೊಮ್ಮಾಯಿ

ಬೆಂಗಳೂರು, (ಆ.03): ದೆಹಲಿಯಲ್ಲಿ ನಡೆಯುತ್ತಿರು ಕರ್ನಾಟಕ ಕ್ಯಾಬಿನೆಟ್ ರಚನೆ ಕಸರತ್ತು ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ  ಬೆಂಗಳೂರು ಪ್ರವಾಸ ರದ್ದಾಗಿದೆ. 

ಹೌದು...ಇಂದು (ಆ.02) ರಾತ್ರಿ 9.15ಕ್ಕೆ ಕಾಯ್ದಿರಿಸಿದ್ದ ವಿಮಾನದ ಟಿಕೆಟ್ ಅನ್ನು ಬೊಮ್ಮಾಯಿ​ ಕ್ಯಾನ್ಸಲ್​ ಮಾಡಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿವಾಸದ ಸಭೆಯಲ್ಲಿ ಭಾಗಿಯಾಗಿದ್ದಾರೆ. 

ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿ ಶಾಸಕರು: ಯಾರಿಗೆ ಕಹಿ? ಯಾರಿಗೆ ಸಿಹಿ?

ದೆಹಲಿಯಿಂದ ಬೆಂಗಳೂರಿಗೆ ತೆರಳಲು ಏರ್​ಇಂಡಿಯಾ ವಿಮಾನದ ಟಿಕೆಟ್​ ಕಾಯ್ದಿರಿಸಿದ್ದರು. ಆದರೆ, ಸಚಿವ ಪಟ್ಟಿಯ ಇನ್ನೂ ಫೈನಲ್ ಆಗದ ಕಾರಣ ಬೆಂಗಳೂರು ಪ್ರಯಾಣ ರದ್ದು ಮಾಡಿದ್ದು, ಸಚಿವರ ಪಟ್ಟಿಗಾಗಿ ದೆಹಲಿಯಲ್ಲಿಯೇ ನಿದ್ದೆ ಮಾಡಲಿದ್ದಾರೆ.

 2023ರ ಚುನಾವಣೆಗಾಗಿ ಹೈಕಮಾಂಡ್ ಅಳೆದು ತೂಗಿ ಸಚಿವರ ಪಟ್ಟಿ ಮಾಡುತ್ತಿದೆ. ಇದರಿಂದ ಜೆಪಿ ನಡ್ಡಾ ಅವರು ರಾಜ್ಯದ ನಾಯಕರಾದ ಪ್ರಲ್ಹಾದ್ ಜೋಶಿ, ಬಿಲ್ ಸಂತೋಷ್ ಜೊತೆ ಚರ್ಚೆ ನಡೆಸಿದ್ದು, ಬಳಿಕ ಅಂತಿಮ ಪಟ್ಟಿಯನ್ನು ಬೊಮ್ಮಾಯಿ ಅವರಿಗೆ ಕೊಡಲಿದ್ದಾರೆ.

ಬಳಿಕ ನೂತನ ಸಚಿವ ಪಟ್ಟಿಯನ್ನು ಹಿಡಿದುಕೊಂಡೇ ಬಸವರಾಜ ಬೊಮ್ಮಾಯಿ ಅವರು ನಾಳೆ (ಆ.04) ಬೆಳಗ್ಗೆ 6.10ರ ಬೆಂಗಳೂರು ವಿಮಾನ ಹತ್ತಲಿದ್ದು, ಯಾರು ಸಚಿವರಾಗುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಬುಧವಾರವೇ ಸಂಜೆ ನೂತನ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ಸೂಚನೆ ಹೋಗಿದ್ದು, ಈಗಾಗಲೇ ಸಕಲ ಸಿದ್ಧತೆಗಳು ಸಹ ರಾಜಭವನದಲ್ಲಿ ನಡೆದಿವೆ.

click me!