ಮಹತ್ವದ ಕೆಲಸಕ್ಕಾಗಿ ಪುತ್ರನೊಂದಗೆ ನಿತಿನ್ ಗಡ್ಕರಿ ಭೇಟಿಯಾದ ದೇವೇಗೌಡ್ರು

By Suvarna NewsFirst Published Aug 3, 2021, 9:35 PM IST
Highlights

* ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನ ಭೇಟಿಯಾದ ದೇವೇಗೌಡ
* ಜೆಡಿಎಸ್ ಶಾಸಕರೊಂದಿಗೆ ಸಚಿವ ನಿತಿನ್ ಗಡ್ಕರಿ ಭೇಟಿ
* ಮಹತ್ವದ ಕೆಲಸಕ್ಕಾಗಿ ನಿತಿನ್ ಗಡ್ಕರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ ದೊಡ್ಡಗೌಡ್ರು

ನವದೆಹಲಿ, (ಆ.03): ಮಾಜಿ ಪ್ರಧಾನಿ ಎಚ್‌ಡಿ ದೇವೇಗವಡ ಅವರು ಕೇಂದ್ರ  ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದರು.

ದೆಹಲಿಯಲ್ಲಿ ಇಂದು (ಮಂಗಳವಾರ) ಜೆಡಿಎಸ್ ಶಾಸಕರಾದ ಪುಟ್ಟರಾಜು, ಎಚ್‌ಡಿ ರೇವಣ್ಣ ಸೇರಿದಂಕೊಂಡು ದೇವೇಗೌಡ್ರು ನಿತಿನ್ ಗಡ್ಕರಿಯವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದರು.

ರೇವಣ್ಣ ಹಾಗೂ ಪುಟ್ಟರಾಜು ಕ್ಷೇತ್ರಗಳ ಅಭಿವೃದ್ಧಿ ಕಾಮಾರಿಗಳ ಸಲುವಾಗಿ ನಿತಿನ್ ಗಡ್ಕರಿ ಅವರನ್ನ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. 

ಚಿತ್ರಗಳು: ಗುರು ಶಿಷ್ಯ ಭೇಟಿ ಮಧ್ಯೆ ಸೋಮಣ್ಣ-ರೇವಣ್ಣ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಾಜು, ಬೆಂಗಳೂರು- ಮೈಸೂರು ದಶಪಥ ರಸ್ತೆ ಕಾಮಗಾರಿಯಡಿ ಪಾಂಡವಪುರ ತಾಲೂಕಿನ ತೂಬಿನಕೆರೆ ಗೇಟ್ ಬಳಿ ತಾಲೂಕಿನ ರಸ್ತೆ ಸಂಪರ್ಕಿಸಲು ಬೈಪಾಸ್ ರಸ್ತೆ ನೀಡುವುದಾಗಿ ಕೇಂದ್ರ ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ ಹೇಳಿದರು.

ಬೆಂಗಳೂರು- ಮೈಸೂರು ಹೆದ್ದಾರಿ ಯೋಜನೆಯಲ್ಲಿ ತೂಬಿನಕೆರೆ ಗ್ರಾಮದ ಬಳಿ‌ ಈ ಹಿಂದೆ ಇದ್ದಂತಹ ಬೈಪಾಸ್ ಯೋಜನೆಯನ್ನು ಸ್ಥಗಿತಗೊಳಿಸಿ ಗಣಂಗೂರು ಗ್ರಾಮದ ಬಳಿ ಪಾಂಡವಪುರಕ್ಕೆ ಬೈಪಾಸ್ ನೀಡಲು ಯೋಜನೆ ರೂಪಿಸಿಕೊಂಡಿದ್ದರು. ಇದರಿಂದ ಮಂಡ್ಯದಿಂದ ಪಾಂಡವಪುರಕ್ಕೆ ಸಂಪರ್ಕಿಸುವವರು ಹಾಗೂ ಪಾಂಡವಪುರದಿಂದ ಮಂಡ್ಯಕ್ಕೆ ಹೋಗುವ ಪ್ರಯಾಣಿಕರು ಸುಮಾರು ಒಂದರಿಂದ ಎರಡು‌ಕಿಮೀ ನಷ್ಟು ಬಳಸಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. 

ತೂಬಿನಕೆರೆ ಗ್ರಾಮದ ಬಳಿ ಬೈಪಾಸ್ ನೀಡುತ್ತಿಲ್ಲ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಶಾಸಕ ಸಿ.ಎಸ್.ಪುಟ್ಟರಾಜು ಅವರ ನೇತೃತ್ವದಲ್ಲಿ ಪಾಂಡವಪುರ ತಾಲ್ಲೂಕಿನ ಜನತೆ ಹೆದ್ದಾರೆ ತಡೆದು ಪ್ರತಿಭಟನೆ ನಡೆಸಿದ್ದರು.‌ 

ಜತೆಗೆ ರಸ್ತೆ ಅಭಿವೃದ್ಧಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಮನವಿಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರದ ಲೋಕೋಪಯೋಗಿ ಸಚಿವರಿಗೆ ಮನವಿಸಲ್ಲಿಸಿ ತೂಬಿನಕೆರೆ ಬಳಿ ಪಾಂಡವಪುರ ತಾಲ್ಲೂಕಿಗೆ ಸಂಪರ್ಕಿಸುವ ಬೈಪಾಸ್ ಯೋಜನೆ ನಿರ್ಮಿಸುವಂತೆ ಮನವಿ ಸಲ್ಲಿಸಿದರು.

ಮಾಜಿ‌ ಪ್ರಧಾನಿ ಎಚ್.ಡಿ.ದೇವೇಗೌಡರ‌ ನೇತೃತ್ವದ ನಿಯೋಗದ ಮನವಿಗೆ ಸ್ಪಂದಿಸಿದ್ದು, ಬೈಪಾಸ್ ರಸ್ತೆ ನೀಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.

click me!