ಕೊನೆಗೂ ಬೊಮ್ಮಾಯಿ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್, ಪ್ರಮಾಣ ವಚನಕ್ಕೆ ಸಿದ್ಧತೆ

By Suvarna NewsFirst Published Aug 3, 2021, 7:45 PM IST
Highlights

* ಕೊನೆಗೂ ಬೊಮ್ಮಾಯಿ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್
* ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ 26 ಜನರು 
* ನೂತನ ಸಚಿವ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆ

ಬೆಂಗಳೂರು, (ಆ.03): ಬಹು ನಿರೀಕ್ಷಿತ ಬಸವರಾಜ ಬೊಮ್ಮಾಯಿ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಬುಧವಾರ (ಅ.04) ಸಂಜೆ 5ಕ್ಕೆ ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವ ಪ್ರಮಾಣ ವಚನ ಸಮಾರಂಭ ನಡೆಯಲಿದೆ.

ಅಳೆದು ತೂಗಿ ಹೈಕಮಾಂಡ್ ಸಚಿವರ ಪಟ್ಟಿ ಸಿದ್ಧಪಡಿಸಿದ್ದು, ಒಟ್ಟು  26 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಅವರ ಹೆಸರುಗಳನ್ನು ಮಾತ್ರ ಇನ್ನೂ ಬಹಿರಂಗಪಡಿಸಿಲ್ಲ.

ಯಾರು ಊಹಿಸಲು ಅಸಾಧ್ಯ: ಮಂತ್ರಿ ಸ್ಥಾನಕ್ಕೆ ಅಂತ ಶಾಸಕರ ಹೆಸರು ಪ್ರಸ್ತಾಪಿಸಿದ ಹೈಕಮಾಂಡ್

ಇವರಿಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ಅವರು ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜಭವನದಲ್ಲಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲು ಸೂಚನೆ ಸಹ ಹೋಗಿದೆ.
 
ಕೋವಿಡ್ ಹಿನ್ನೆಲೆಯಲ್ಲಿ ಶಾಸಕರನ್ನು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರನ್ನು ಕರೆತರದಂತೆ ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ಹೊರಡಿಸಲಾಗಿದೆ.

ವ್ಯಕ್ತಿತ್ವ, ಪಕ್ಷ ನಿಷ್ಠೆ, ಸಂಘಟಕ, ಜಾತಿ, ವರ್ಚಸ್ಸು ಸೇರಿದಂತೆ ಹಲವು ಮಾನದಂಡಗಳ ಮೇಲೆ ಅಂತಿಮವಾಗಿ 26 ಸಚಿವರ ಪಟ್ಟಿ ಮಾಡಿ ಸಿಎಂ ಬಸವರಾಜ ಬೊಮ್ಮಾಯಿಗೆ ಕೊಟ್ಟಿದೆ.

click me!