Karnataka cabinet: ಬಸವನಾಡಿನ ಶಾಸಕ ಪಾಟೀಲಗೆ ಎರಡನೇ ಬಾರಿಗೆ ಒಲಿದ ಸಚಿವ ಸ್ಥಾನ

By Kannadaprabha News  |  First Published May 28, 2023, 6:42 AM IST

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲರಿಗೆ ಎರಡನೇ ಬಾರಿಗೆ ಸಚಿವ ಸ್ಥಾನ ಒಲಿದು ಬಂದಿದ್ದರಿಂದ ಬಸವನಾಡಿನ ಜನರಲ್ಲಿ ಹರ್ಷ ಇಮ್ಮಡಿಸಿದೆ. ಚುನಾವಣೆ ಸಂದರ್ಭದಲ್ಲಿ ಇವರು ಆಯ್ಕೆಯಾದರೆ ಖಂಡಿತ ಇವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ನಿರೀಕ್ಷೆಯಂತೆ ಇವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಮತಕ್ಷೇತ್ರ, ಜಿಲ್ಲೆಯ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.


ಬಸವರಾಜ ಎಸ್‌.ನಂದಿಹಾಳ

 ಬಸವನಬಾಗೇವಾಡಿ (ಮೇ.28) : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲರಿಗೆ ಎರಡನೇ ಬಾರಿಗೆ ಸಚಿವ ಸ್ಥಾನ ಒಲಿದು ಬಂದಿದ್ದರಿಂದ ಬಸವನಾಡಿನ ಜನರಲ್ಲಿ ಹರ್ಷ ಇಮ್ಮಡಿಸಿದೆ. ಚುನಾವಣೆ ಸಂದರ್ಭದಲ್ಲಿ ಇವರು ಆಯ್ಕೆಯಾದರೆ ಖಂಡಿತ ಇವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ನಿರೀಕ್ಷೆಯಂತೆ ಇವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಮತಕ್ಷೇತ್ರ, ಜಿಲ್ಲೆಯ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.

Latest Videos

undefined

ಶಾಸಕ ಶಿವಾನಂದ ಪಾಟೀಲರು(Shivananda patil minister) ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. 2018ರಲ್ಲಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ ಶಿವಾನಂದ ಪಾಟೀಲರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ 08.06.2018 ರಿಂದ 23.07.2019ರವರೆಗೆ ಕಾರ್ಯನಿರ್ವಹಿಸುವ ಮೂಲಕ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಗಮನಾರ್ಹ ಕಾರ್ಯಗಳನ್ನು ಮಾಡುವ ಮೂಲಕ ರಾಜ್ಯದ ಜನರ ಮನಸೂರೆಗೊಂಡಿದ್ದರು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ 14.11.2016 ರಿಂದ 12.04.2018 ರವರೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಆಗ ಇವರು ಬಸವನಬಾಗೇವಾಡಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮಂಜೂರು, ಬೆಳಗಾವಿ ಜಿಲ್ಲೆಯಲ್ಲಿ ನಗರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲು ಇದ್ದ ಜಮೀನುಗಳ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ.

Karnataka Cabinet: ರನ್ನ ನಾಡಿನ ತಿಮ್ಮಾಪುರಗೆ ಒಲಿದ ಮಂತ್ರಿಗಿರಿ...

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಸಂದರ್ಭದಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸುವುದಕ್ಕಾಗಿ ವಿಜಯಪುರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಪರ ನಿರ್ದೇಶಕರ ಹುದ್ದೆಯನ್ನು ಒಳಗೊಂಡ ಕಚೇರಿ ಮಂಜೂರಾತಿ, ಬಸವನಬಾಗೇವಾಡಿ ತಾಲೂಕು ಆಸ್ಪತ್ರೆ ಸುಧಾರಣೆ ಮತ್ತು ಹೊಸ ಕಟ್ಟಡಗಳ ನಿರ್ಮಾಣ, ವಿಜಯಪುರ ಜಿಲ್ಲಾ ಆಸ್ಪತ್ರೆ ಸುಧಾರಣೆ, ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 500 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮತ್ತು ಕಟ್ಟಡ ನಿರ್ಮಾಣ, ವಿಜಯಪುರ ಜಿಲ್ಲೆಗೆ ಕ್ಯಾನ್ಸರ್‌ ಆಸ್ಪತ್ರೆ, ಟ್ರಾಮಾ ಸೆಂಟರ್‌, ಹೃದಯ ಚಿಕಿತ್ಸಾಲಯ ಮಂಜೂರು ಮತ್ತು ಕಟ್ಟಡ ನಿರ್ಮಾಣ, ಜಮಖಂಡಿಯಲ್ಲಿ 250 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾತಿ, ಮತಕ್ಷೇತ್ರದ ಕೊಲ್ಹಾರದಲ್ಲಿ 30 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು, ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳ ನಿರ್ಮಾಣ, ಶಿವಮೊಗ್ಗ ಜಿಲ್ಲೆಯಲ್ಲಿ ಪದೇಪದೇ ಕಂಡುಬರುತ್ತಿದ್ದ ಮಂಗನ ಕಾಯಿಲೆಯನ್ನು ಹತೋಟಿಗೆ ತರಲು ಕ್ರಮ ಕೈಗೊಂಡಿರುವುದು ಸೇರಿದಂತೆ ಅನೇಕ ಗಮನಾರ್ಹ ಕೆಲಸಗಳನ್ನು ಮಾಡಿದ್ದು ಇವರ ಹೆಗ್ಗಳಿಕೆ.

ಕಳೆದ ಒಂದು ದಶಕದ ಅವಧಿಯಲ್ಲಿ ಮತಕ್ಷೇತ್ರದ ಶಾಸಕರಾಗಿ ಇವರು ರಸ್ತೆಗಳ ಸುಧಾರಣೆ, ಕುಡಿಯುವ ನೀರು ಯೋಜನೆ, ಆರೋಗ್ಯ, ಶಿಕ್ಷಣ, ನೀರಾವರಿ ಕ್ಷೇತ್ರದ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟುಅಭಿವೃದ್ಧಿ ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿಯೇ ಮುಂದುವರಿದ ಮತಕ್ಷೇತ್ರವನ್ನಾಗಿ ಮಾಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಇವರ ಅಭಿವೃದ್ಧಿ ಕಾರ್ಯಗಳು, ವಿಶ್ವಗುರು ಬಸವೇಶ್ವರರ ಕೃಪಾಶೀರ್ವಾದದಿಂದ ಸತತ ಮೂರನೇ ಬಾರಿಗೆ ಮತಕ್ಷೇತ್ರದಿಂದ ಶಾಸಕರಾಗಿ ಹ್ಯಾಟ್ರಿಕ್‌ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜಿಲ್ಲೆ ಮತ್ತು ಮತಕ್ಷೇತ್ರದ ನಿರೀಕ್ಷೆಗಳು

ಬಸವನಬಾಗೇವಾಡಿ ಪಟ್ಟಣಕ್ಕೆ ರಿಂಗ್‌ ರಸ್ತೆ, ಬಹುದಿನಗಳ ಬೇಡಿಕೆಯಾಗಿರುವ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಸ್ಥಾಪನೆ, ವೈದ್ಯಕೀಯ ಕಾಲೇಜು ಮಂಜೂರಾತಿ, ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಗೆ ಪ್ರತ್ಯೇಕ ಅಭಿವೃದ್ದಿ ಮಂಡಳಿ, ಬಸವ ಜಯಂತಿಯಂದು ಬಸವೇಶ್ವರ ಜನಿಸಿದ ಬಸವನಬಾಗೇವಾಡಿಯಲ್ಲಿಯೇ ರಾಜ್ಯ ಮಟ್ಟದ ಬಸವ ಜಯಂತಿ ಆಚರಣೆ ಮಾಡುವ ಜೊತೆಗೆ ಬಸವ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ, ರಾತ್ರಿ ಸಮಯದಲ್ಲಿಯೂ ಬಸವನಬಾಗೇವಾಡಿಗೆ ರಾಜ್ಯದ ವಿವಿಧೆಡೆಗಳಿಂದ ಬಸ್‌ ಸೌಲಭ್ಯ, ಮತಕ್ಷೇತ್ರದ ನೂತನ ತಾಲೂಕು ಕೇಂದ್ರಗಳಾದ ನಿಡಗುಂದಿ, ಕೊಲ್ಹಾರದಲ್ಲಿ ಎಲ್ಲ ಇಲಾಖೆಗಳ ಕಚೇರಿಗಳ ಆರಂಭ ಮತ್ತು ಕಟ್ಟಡಗಳ ನಿರ್ಮಾಣ, ಜಿಲ್ಲೆಯ ಸಮಗ್ರ ನೀರಾವರಿ ಯೋಜನೆ ಜಾರಿ, ರೈತ ಬಾಂಧವರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತೆ ಮಾಡುವುದು, ಕ್ರೀಡಾಂಗಣ ಸೇರಿದಂತೆ ಹಲವಾರು ಬೇಡಿಕೆಗಳನ್ನು ಇವರು ಈಡೇರಿಸುತ್ತಾರೆ ಎಂಬ ನಿರೀಕ್ಷೆಯಿದೆ.

ಬೀದ​ರ್‌ನ ಜೋಡೆ​ತ್ತುಗಳಿಗೊಲಿದ ಸಚಿ​ವ​ ಸ್ಥಾನ: ಖಂಡ್ರೆಗೆ ಅರಣ್ಯ, ರಹೀಮ್ ಖಾನ್‌ಗೆ ಪೌರಾಡಳಿತ ಖಾತೆ ಸಾಧ್ಯತೆ

click me!