ಬಿಎಸ್‌ವೈ ಅವಧಿಯಲ್ಲಿ ನೇಮಕಗೊಂಡಿದ್ದ 10 ಹುದ್ದೆಗಳು ರದ್ದು, ರೇಣುಕಾಚಾರ್ಯ, ಸಂತೋಷ್‌ಗೆ ಶಾಕ್

By Suvarna NewsFirst Published Aug 3, 2021, 5:39 PM IST
Highlights

* ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ 10 ಹುದ್ದೆಗಳು ರದ್ದು
*ರೇಣುಕಾಚಾರ್ಯ, ಡಿ ಎನ್ ಜೀವರಾಜ್ ಹಾಗೂ ಎನ್ ಆರ್ ಸಂತೋಷ್‌ಗೆ ಬಿಗ್ ಶಾಕ್
* ಸಿಎಂ ಬೊಮ್ಮಯಿ ನಡೆ ಬಗ್ಗೆ ಬಿಜೆಪಿಯೊಳಗೆ ಗಂಭೀರ ಚರ್ಚೆ

ಬೆಂಗಳೂರು, (ಅ.03): ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗುತ್ತಿದ್ದಂತೆಯೇ ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸೇರಿ 10 ಹುದ್ದೆಗಳನ್ನು ರದ್ದುಪಡಿಸಲಾಗಿದೆ.

ಸಿಎಂ‌ ಕಾನೂನು ಸಲಹೆಗಾರರು,  ಸಿಎಂ ರಾಜಕೀಯ ಕಾರ್ಯದರ್ಶಿ, ಆಡಳಿತ ಸಲಹೆಗಾರರು ಮತ್ತು ನೀತಿ ನಿರೂಪಣೆ ಸಲಹೆಗಾರರನ್ನು ಸಹ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

ಸಿಎಂಗೆ 4ನೇ ರಾಜಕೀಯ ಕಾರ್ಯದರ್ಶಿ ನೇಮಕ: ಪಿಎ ಆಗಿದ್ದವರಿಗೆ ಈಗ ಸಂಪುದ ದರ್ಜೆ ಸ್ಥಾನಮಾನ..!

ಪ್ರಮುಖವಾಗಿ  ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿಗಳಾಗಿದ್ದ ಎಂಪಿ ರೇಣುಕಾಚಾರ್ಯ, ಡಿ ಎನ್ ಜೀವರಾಜ್ ಹಾಗೂ ಎನ್ ಆರ್ ಸಂತೋಷ್ ಅವರನ್ನ ಬೊಮ್ಮಾಯಿ ಸರ್ಕಾರ ಸೇವೆಯಿಂದ ಬಿಡುಗಡೆ ಮಾಡಿ ಇಂದು (ಮಂಗಳವಾರ) ಆದೇಶ ಹೊರಡಿಸಿದೆ.

 ಶಿಕ್ಷಣ ಸುಧಾರಣಾ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ಯಡಿಯೂರಪ್ಪ ಕಾನೂನು ಸಲಹೆಗಾರರಾಗಿದ್ದ ಮೋಹನ್ ಲಿಂಬಿಕಾಯಿ, ಮಾಧ್ಯಮ ಸಲಹೆಗಾರ ಎನ್. ಭೃಂಗೇಶ್, ಸಿಎಂ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ್, ಮಾಧ್ಯಮ ಸಂಯೋಜಕ ಜಿ.ಎಸ್. ಸುನೀಲ್, ಸಿಎಂ ನೀತಿ ನಿರೂಪಣೆ ಕಾರ್ಯತಂತ್ರ ಸಲಹೆಗಾರ ಪ್ರಶಾಂತ್ ಅವರ ಹುದ್ದೆಗಳನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. 

ಮೊನ್ನೇ ಅಷ್ಟೇ ಕೆಲ ಐಎಎಸ್ ಅಧಿಕಾರಿಗಳನ್ನ ಬದಲಾವಣೆ ಮಾಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಈ ನಡೆ ಬಗ್ಗೆ ಬಿಜೆಪಿಯೊಳಗೆ ಗಂಭೀರ ಚರ್ಚೆ ಶುರುವಾಗಿದೆ.

click me!