ಪ್ರಮಾಣವಚನ ಸ್ವೀಕಾರಕ್ಕಾಗಿ ರಾಜಭವನದತ್ತ ಸಚಿವರು, ಸಿದ್ದು ಆಪ್ತರನ್ನೇ ಒಳಬಿಡದ ಪೊಲೀಸ್

By Suvarna NewsFirst Published May 27, 2023, 10:51 AM IST
Highlights

ಪ್ರಮಾಣವಚನ ಸ್ವೀಕಾರ ಸಮಾರಂಭ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಸಂಪುಟ ಸೇರಿಕೊಳ್ಳುತ್ತಿರುವ ನೂತನ ಸಚಿವರು ಇದೀಗ ರಾಜಭವನದತ್ತ ಆಗಮಿಸತ್ತಿದ್ದಾರೆ. ಇವರ ಜೊತೆಗೆ ಆಪ್ತರು, ಕುಟುಂಬಸ್ಥರು,ಬೆಂಬಲಿಗರ ಪಡೆ ಆಗಮಿಸುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ಆಪ್ತರನ್ನು ಪೊಲೀಸರು ಒಳಬಿಡದೆ ರಂಪಾಟವಾಗಿದೆ.
 

ಬೆಂಗಳೂರು(ಮೇ.27): ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂಪುಟ ವಿಸ್ತರಣೆ ಸರ್ಕಸ್ ಅಂತ್ಯಗೊಂಡಿದೆ. ಇದೀಗ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್, ಆರ್‌ವಿ ದೇಶಪಾಂಡೆ ಸೇರಿದಂತೆ ನೂತನ ಸಚಿವರು ರಾಜಭವನಕ್ಕೆ ಆಗಮಿಸಿದ್ದಾರೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜಭವನದತ್ತ ಆಗಮಿಸುತ್ತಿದ್ದಾರೆ. ಇತ್ತ ನೂತನ ಶಾಸಕರ ಕುಟುಂಬಸ್ಥರು, ಆಪ್ತರು, ಬೆಂಬಲಿಗರು ರಾಜಭವನದತ್ತ ದೌಡಾಯಿಸುತ್ತಿದ್ದಾರೆ. ಆದರೆ ರಾಜಭವನಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರನ್ನು ಪೊಲೀಸರು ತಡೆದು ಹೊರಕ್ಕೆ ಕಳುಹಿಸಿದ ಘಟನೆ ನಡೆದಿದೆ.

ಸಿದ್ದರಾಮಯ್ಯನ ಬಲಗೈ ಬಂಟ ಮರೀ ಗೌಡ ವಿಐಪಿ ಗೇಟ್ ಮೂಲಕ ಪ್ರವೇಶ ಮಾಡಲು ಮುಂದಾಗಿದ್ದ. ಆದರೆ ಪೊಲೀಸರು ಮರೀಗೌಡನ ತಡೆದೆ ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ. ವಿಐಪಿ ಗೇಟ್ ಮೂಲಕ ಪ್ರವೇಶಕ್ಕೆ ಮುಂದಾಗಿದ್ದ ಮರೀಗೌಡನ ತಡೆದ ಪೊಲೀಸರು ಸಾರ್ವಜನಿಕ ಪ್ರವೇಶದ ಮೂಲಕ ಒಳಗೆ ಹೋಗಲು ಸೂಚಿಸಿದ್ದಾರೆ. ಇದರಂತೆ ಸಾರ್ವಜನಿಕ ಪ್ರವೇಶ ದ್ವಾರದ ಮೂಲಕ ಒಳ ಹೋಗಲು ಮುಂದಾಗ ಮರೀಗೌಡನನ್ನು ಮತ್ತೆ ಪೊಲೀಸರು ತಡೆದಿದ್ದಾರೆ. 

Latest Videos

ಕಾಂಗ್ರೆಸ್‌ ಸರ್ಕಾರದ ಆಯಸ್ಸು ಲೋಕಸಭಾ ಚುನಾವಣೆವರೆಗೆ ಮಾತ್ರ: ಬೊಮ್ಮಾಯಿ, ಎಚ್‌ಡಿಕೆ

ಇದರಿಂದ ಆಕ್ರೋಶಗೊಂಡ ಮರೀಗೌಡ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರವಾಣಿ ಕರೆ ಮಾಡಿದ ಮರೀಗೌಡ, ಒಳ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಸಿದ್ದರಾಮಯ್ಯ ಮರೀಗೌಡನ ಒಳ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಪೊಲೀಸರ ನಡೆಯಿಂದ ಮರೀಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ರಾಜಭವನ ನೂತನ ಸಚಿವರು, ಕುಟುಂಬಸ್ಥರು, ಆಪ್ತರು, ಬೆಂಬಲಿಗರು, ಸಾರ್ವಜನಿಕರಿಂದ ತುಂಬಿ ತುಳುಕುತ್ತಿದೆ. ಇಂದು ಪ್ರಮಾಣವಚನ ಸ್ವೀಕರಿಸಲಿರುವ ನೂತನ ಸಚಿವರ ಪಟ್ಟಿ ಇಲ್ಲಿದೆ. 

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಡಬಲ್ ಖುಷಿ: ಒಂದೆಡೆ ಮಂತ್ರಿ, ಮತ್ತೊಂದೆಡೆ ಅಜ್ಜಿ ಆದ ಸಂಭ್ರಮ!

1- ಈಶ್ವರ್‌ ಖಂಡ್ರೆ
2- ಲಕ್ಷ್ಮೇ ಹೆಬ್ಬಾಳ್ಕರ್‌
3- ಶಿವಾನಂದ ಪಾಟೀಲ…
4- ಬಿ.ಎಸ್‌.(ಬೈರತಿ) ಸುರೇಶ್‌
5- ಡಾ.ಎಚ್‌.ಸಿ.ಮಹಾದೇವಪ್ಪ
6- ಪಿರಿಯಾಪಟ್ಟಣ ಕೆ.ವೆಂಕಟೇಶ್‌
7- ಎಸ್‌.ಎಸ್‌.ಮಲ್ಲಿಕಾರ್ಜುನ
8- ದಿನೇಶ್‌ ಗುಂಡೂರಾವ್‌
9- ಕೃಷ್ಣ ಬೈರೇಗೌಡ
10- ರಹೀಂ ಖಾನ್‌
11- ಡಿ.ಸುಧಾಕರ್‌
12- ಡಾ.ಎಂ.ಸಿ.ಸುಧಾಕರ್‌
13- ಎಚ್‌.ಕೆ.ಪಾಟೀಲ…
14- ಚೆಲುವರಾಯಸ್ವಾಮಿ
15- ಕೆ.ಎನ್‌.ರಾಜಣ್ಣ
16- ಸಂತೋಷ್‌ ಲಾಡ್‌
17- ಮಧು ಬಂಗಾರಪ್ಪ
18- ಮಂಕಾಳ ಸುಬ್ಬಾ ವೈದ್ಯ
19- ಶಿವರಾಜ ತಂಗಡಗಿ
20- ಆರ್‌.ಬಿ.ತಿಮ್ಮಾಪುರ
21- ಶರಣಬಸಪ್ಪ ದರ್ಶನಾಪುರ
22- ಶರಣ ಪ್ರಕಾಶ್‌ ಪಾಟೀಲ್‌
23- ಎನ್‌.ಎಸ್‌.ಬೋಸರಾಜು
24- ಬಿ.ನಾಗೇಂದ್ರ

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಆಪ್ತರಿಗೆ ಸಚಿವ ಸ್ಥಾನ ನೀಡುವ ವೇಳೆಯೂ ಸಮುದಾಯವಾರು ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಲಿಂಗಾಯಿತ ಸಮುದಾಯಕ್ಕೆ ಒಟ್ಟು 7 ಸಚಿವ ಸ್ಥಾನ ದಕ್ಕಿದೆ. ಇನ್ನು ಒಕ್ಕಲಿಗ ಸಮುದಾಯಕ್ಕೆ 4 ಸಚಿವ ಸ್ಥಾನ ಲಭ್ಯವಾಗಿದ್ದರೆ, ದಲಿತ ಸಮುದಾಯಕ್ಕೆ ಬರೋಬ್ಬರಿ 9  ಸಚಿವ ಸ್ಥಾನ ಲಭ್ಯವಾಗಿದೆ.  ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದ ಹಲವು ನಾಯಕರು ಗರಂ ಆಗಿದ್ದಾರೆ. ಹಿರಿಯರು ಹೈಕಮಾಂಡ್ ನಿರ್ಧಾರ ಸ್ವಾಗತಿಸುತ್ತೇನೆ ಎಂದಿದ್ದರೆ, ಮತ್ತೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

click me!