ಪರಮೇಶ್ವರ್‌ಗೆ ಗೃಹ ಖಾತೆ, ಜಾರ್ಜ್‌ಗೆ ಇಂಧನ, ಸಿದ್ದರಾಮಯ್ಯ ಸಂಪುಟದ ಎಲ್ಲಾ ಸಚಿವರಿಗೆ ಖಾತೆ ಹಂಚಿಕೆ!

By Suvarna News  |  First Published May 27, 2023, 2:56 PM IST

24 ಸಚಿವರು ಸಿದ್ದರಾಮಯ್ಯ ಸೇರಿಕೊಂಡ ಬೆನ್ನಲ್ಲೇ ಖಾತೆ ಹಂಚಿಕೆ ಮಾಡಲಾಗಿದೆ. ಹಣಕಾಸು ಖಾತೆ ಸಿಎಂ ಸಿದ್ದರಾಮಯ್ಯ ಉಳಿಸಿಕೊಂಡಿದ್ದರೆ, ನಗರಾಭಿವೃದ್ದಿ ಹಾಗೂ ಜಲಸಂಪನ್ಮೂಲ ಖಾತೆಯನ್ನು ಡಿಕೆ ಶಿವಕುಮಾರ್‌ಗೆ ನೀಡಲಾಗಿದೆ. ಗೃಹ ಖಾತೆ ಡಾ.ಜಿ ಪರಮೇಶ್ವರ್ ಪಾಲಾಗಿದೆ. ಸಿದ್ದು ಸಂಪುಟ ಸೇರಿದ ನೂತನ ಸಚಿವರ ಸಂಭಾವ್ಯ ಖಾತೆಗಳ ವಿವರ ಇಲ್ಲಿದೆ. 


ಬೆಂಗಳೂರು(ಮೇ.27): ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಇದೀಗ ಖಾತೆ ಹಂಚಿಕೆ ಮಾಡಲಾಗಿದೆ. ಇಂದು 24 ನೂತನ ಸಚಿವರು ಸಿದ್ದರಾಮಯ್ಯ ಕ್ಯಾಬಿನೆಟ್ ಸೇರಿಕೊಂಡಿದ್ದಾರೆ. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಬಳಿಕ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಇದೀಗ ಖಾತೆ ಹಂಚಿಕೆ ಮಾಡಿ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ನೂತನ ಸರ್ಕಾರದ ಸಂಭಾವ್ಯ ಪಟ್ಟಿ ಲಭ್ಯವಾಗಿದೆ. ಈ ಪಟ್ಟಿ ಪ್ರಕಾರ ಸಿಎಂ ಸಿದ್ದರಾಮಯ್ಯ ಹಣಕಾಸು ಖಾತೆಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌‌ಗೆ ಬೆಂಗಳೂರು ನಗರಾಭಿವೃದ್ದಿ ಹಾಗೂ ಜಲಸಂಪನ್ಮೂಲ ಖಾತೆ ನೀಡಲಾಗಿದೆ. 

ಖಾತೆ ಹಂಚಿಕೆ ವಿವರ:
ಸಿದ್ದರಾಮಯ್ಯ: ಹಣಕಾಸು, ಗುಪ್ತಚರ, ಸುಧಾರಣೆ
ಡಿಕೆ ಶಿವಕುಮಾರ್: ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ
ಭೈರತಿ ಸುರೇಶ್: ನಗರಾಭಿವೃದ್ಧಿ
ಎಂಸಿ ಸುಧಾಕರ್: ವೈದ್ಯಕೀಯ ಶಿಕ್ಷಣ
ಪ್ರಿಯಾಂಕ್ ಖರ್ಗೆ: ಗ್ರಾಮೀಣಾಭಿವೃದ್ದಿ
ಕೃಷ್ಣಬೈರೇಗೌಡ : ಕಂದಾಯ
ದಿನೇಶ್ ಗುಂಡೂರಾವ್: ಆರೋಗ್ಯ
ರಹೀಂ ಖಾನ್:ಪೌರಾಡಳಿತ, ಹಜ್
ಸಂತೋಷ್ ಲಾಡ್: ಕಾರ್ಮಿಕ  ಕೌಶಲ್ಯಾಭಿವೃದ್ದಿ
ಹೆಚ್‌ಕೆ ಪಾಟೀಲ್: ಸಣ್ಣ ನೀರಾವರಿ, ಕಾನೂನು
ಶಿವರಾಜ್ ತಂಗಡಗಿ: ಹಿಂದುಳಿದ ಕಲ್ಯಾಣ
ಶರಣ ಪ್ರಕಾಶ್ ಪಾಟೀಲ್: ಉನ್ನತ ಶಿಕ್ಷಣ
ಲಕ್ಷ್ಮೀ ಹೆಬ್ಬಾಳ್ಕರ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಹೆಚ್‌ಸಿ ಮಹಾದೇವಪ್ಪ: ಸಮಾಜ ಕಲ್ಯಾಣ
ಚೆಲುವರಾಯಸ್ವಾಮಿ: ಕೃಷಿ
ಕೆಎನ್ ರಾಜಣ್ಣ: ಸಹಕಾರ ಖಾತೆ
ಈಶ್ವರ ಖಂಡ್ರೆ:ಅರಣ್ಯ ಮತ್ತು ಪರಿಸರ
ಶಿವಾನಂದ ಪಾಟೀಲ್: ಜವಳಿ ಮತ್ತು ಸಕ್ಕರೆ
ಶರಣಬಸಪ್ಪ ದರ್ಶನಾಪುರ:ಸಣ್ಣ ಕೈಗಾರಿಕೆ
ಆರ್‌ಬಿ ತಿಮ್ಮಾಪುರ: ಅಬಕಾರಿ, ಮುಜರಾಯಿ
ಮಂಕಾಳು ವೈದ್ಯ:ಮೀನುಗಾರಿಕೆ, ಬಂದರು, ಒಳನಾಡು
ಡಿ ಸುಧಾಕರ್: ಯೋಜನೆ, ಸಾಂಖ್ಯಿಕ
ಬೋಸರಾಜು: ಪ್ರವಾಸೋದ್ಯಮ, ವಿಜ್ಞಾನ-ತಂತ್ರಜ್ಞಾನ
ಮಧು ಬಂಗಾರಪ್ಪ: ಪ್ರಾಥಮಿಕ ಶಿಕ್ಷಣ
ರಾಮಲಿಂಗಾರೆಡ್ಡಿ: ಸಾರಿಗೆ
ಜಮೀರ್ ಅಹಮ್ಮದ್ : ವಸತಿ ಮತ್ತು ವಕ್ಫ್
ಕೆ ವಂಕಟೇಶ್: ಪಶುಸಂಗೋಪನೆ
ಮನಿಯಪ್ಪ: ಆಹಾರ ಮತ್ತು ನಾಗರೀಕ ಸರಬರಾಜು
ಎಸ್ಎಸ್ ಮಲ್ಲಿಕಾರ್ಜುನ : ತೋಟಗಾರಿಕೆ'
ಕೆಜೆ ಜಾರ್ಜ್: ಇಂಧನ

Tap to resize

Latest Videos

ಮುಂದಿನ ದಿನದಲ್ಲಿ ಕಾದು ನೋಡಿ, ಕಾಂಗ್ರೆಸ್‌ಗೆ ಸಚಿವ ಸ್ಥಾನ ಸಿಗದ ಸಲೀಂ ಅಹಮ್ಮದ್ ವಾರ್ನಿಂಗ್!

ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ನಾಯಕರಿಗೆ ಪ್ರಮುಖ ಖಾತೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಜಿ ಪರಮೇಶ್ವರ್ ಗೃಹ ಖಾತೆ ಪಡೆದುಕೊಂಡಿದ್ದಾರೆ.ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿರುವ ಏಕೈಕ ಮಹಿಳಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನೀಡಲಾಗಿದೆ. ದಿನೇಶ್ ಗುಂಡುರಾವ್ ತಾವು ಬಯಸಿದ ಆರೋಗ್ಯ ಖಾತೆಯನ್ನು ನೀಡಲಾಗಿದೆ.

ಮುನಿಯಪ್ಪ, ಜಿ.ಪರಮೇಶ್ವರ್, ಹೆಸ್.ಸಿ.ಮಹದೇವಪ್ಪ, ತಿಮ್ಮಾಪುರ ಮತ್ತು ಪ್ರಿಯಾಂಕ್ ಖರ್ಗೆ ಅವರುಗಳು ಪರಿಶಿಷ್ಟ ಜಾತಿ ಖೋಟಾದಲ್ಲಿ ಸಚಿವರಾಗಿದ್ದಾರೆ. ಎಡಗೈ ಮತ್ತು ಬಲಗೈ ಸಮುದಾಯಗಳನ್ನು ಸರಿದೂಗಿಸಲಾಗಿದೆ.  ಪರಿಶಿಷ್ಟ ಪಂಗಡದ ಪ್ರತಿನಿಧಿಗಳಾಗಿ ನಾಗೇಂದ್ರ, ಮಧುಗಿರಿ ರಾಜಣ್ಣ, ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ದೊರೆತಿದೆ.  ವಿಧಾನ ಪರಿಷತ್ ಮುಖ್ಯ ಸಚೇತಕರಾಗಿರುವ ಪ್ರಕಾಶ್ ರಾಥೋಡ್ ಕೂಡ ಬಂಜಾರ ಸಮುದಾಯದವರು. 

ಹಿಂದುಳಿದ ಜಾತಿಗಳಲ್ಲಿ ಅತ್ಯಂತ ಸಣ್ಣ ಸಮುದಾಯ ರಜಪೂತರಾದ ಅಜಯ್‌ಸಿಂಗ್, ರಾಜು ಕ್ಷತ್ರಿಯ ಸಮುದಾಯದ ಬೋಸರಾಜು, ಅತ್ಯಂತ ಸಣ್ಣ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಬೆಸ್ತ ಸಮುದಾಯದ ಮಾಂಕಾಳ ವೈದ್ಯ, ಮರಾಠ ಸಮಾಜದಿಂದ ಸಂತೋಷ್ ಲಾಡ್  ಇದ್ದಾರೆ. ಕುರುಬ ಸಮುದಾಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೈರತಿ ಸುರೇಶ್ ಅವರಿಗೆ ಮಾತ್ರ ಸಂಪುಟದೊಳಗೆ ಪ್ರವೇಶ ದೊರೆತಿದೆ. ಬಿಲ್ಲವ ಸಮುದಾಯದಿಂದ ಮಧು ಬಂಗಾರಪ್ಪ ಇದ್ದಾರೆ.

click me!