JDSನಲ್ಲಿಯೂ ಗರಿಗೆದರಿದ ರಾಜಕೀಯ: 2 ಮಂತ್ರಿ ಸ್ಥಾನಕ್ಕೆ ಪೈಪೋಟಿ

By Web DeskFirst Published Dec 22, 2018, 10:53 AM IST
Highlights

ಕಾಂಗ್ರೆಸ್ ಸರದಿ ಮುಕ್ತಾಯದ ಬೆನ್ನಲ್ಲೇ ಇದೀಗ ಜೆಡಿಎಸ್ ನಲ್ಲಿಯೂ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಜೆಡಿಎಸ್ ನಲ್ಲಿ ಖಾಲಿಯಿರುವ ಎರಡು ಸಚಿವ ಸ್ಥಾನಗಳಿಗೆ ಭಾರೀ ಪೈಪೋಟಿ ನಡೆದಿದೆ. ಹಾಗಾದ್ರೆ ಯಾರೆಲ್ಲ ರೇಸ್ ನಲ್ಲಿದ್ದಾರೆ? ಇಲ್ಲಿದೆ ಲೀಸ್ಟ್

ಬೆಂಗಳೂರು, (ಡಿ.22): ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಕ್ಲೈಮಾಕ್ಸ್ ತಲುಪಿದ್ದು, ಇಂದು (ಶನಿವಾರ) ಸಂಜೆ ನೂತನ ಸಚಿವರು ಪ್ರಮಾಣ ವಷನ ಸ್ವೀಕರಿಸಲಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಇಬ್ಬರು ಹಾಲಿ ಶಾಸಕರಿಗೆ ಕೊಕ್ ಕೊಟ್ಟ ಎಂಟು ಜನರಿಗೆ ಮಂತ್ರಿಭಾಗ್ಯ ಕಲ್ಪಿಸಿಕೊಟ್ಟಿದ್ದು, ಇದೀಗ ಜೆಡಿಎಸ್ ಸರದಿ.

8 ಜನರಿಗೆ ಮಂತ್ರಿ, ನಿಗಮ ಮಂಡಳಿಗೆ 20 ಶಾಸಕರು: ಇಲ್ಲಿದೆ ಪಟ್ಟಿ

ಜೆಡಿಎಸ್ ನಲ್ಲಿಯೂ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಜೆಡಿಎಸ್ ನಲ್ಲಿ ಖಾಲಿಯಿರುವ ಎರಡು ಸಚಿವ ಸ್ಥಾನಗಳನ್ನು ತುಂಬಲು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮತ್ತು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಮ್ಮತಿಸಿದ್ದಾರೆ.

ಆದ್ರೆ ಎರಡು ಸ್ಥಾನಗಳಿಗೆ ಜೆಡಿಎಸ್ ನಲ್ಲಿ ಭಾರೀ ಪೈಪೋಟಿ ನಡೆದಿದ್ದು, ಯಾರಿಗೆ ನೀಡಬೇಕು ಎನ್ನುವ ಚಿಂತೆಯಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡ ಚಿಂತನೆ ನಡೆಸಿದ್ದಾರೆ.

ಜೆಡಿಎಸ್ ನಲ್ಲಿ ಯಾರು ಸಚಿವರಾಗ್ತಾರೆ?

ಈಗಾಗಲೇ ಎನ್.ಮಹೇಶ್‌ರಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೆಸರು ಅಂತಿಮ ಎಂದು ಹೇಳಲಾಗುತ್ತಿದೆ.

ಖಾಲಿಯಿರುವ ಎರಡು ಸ್ಥಾನಕ್ಕೆ ಮೂವರ ಮಧ್ಯೆ ಪೈಪೋಟಿ ನಡೆಯುತ್ತಿದೆ. ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಮಹಾಲಕ್ಷ್ಮೀಪುರಂನ ಶಾಸಕ ಕೆ.ಗೋಪಾಲಯ್ಯ ಹಾಗೂ ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್.ಕೆ.ಕುಮಾರಸ್ವಾಮಿ ನಡುವೆ ಸಚಿವ ಸ್ಥಾನಕ್ಕಾಗಿ ಫೈಟ್ ಆರಂಭಗೊಂಡಿದೆ.

ಆದರೆ, ಬಿ.ಎಂ.ಫಾರೂಕ್ ಪರ ಹೆಚ್.ಡಿ‌.ದೇವೇಗೌಡ ಬ್ಯಾಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೆಚ್.ಕೆ. ಕುಮಾರಸ್ವಾಮಿ ಪರ ಸಿಎಂ ಕುಮಾರಸ್ವಾಮಿ ಒಲವು ತೋರಿಸುತ್ತಿದ್ದಾರೆ.

ಸಚಿವ ಸ್ಥಾನದ ಅಕಾಂಕ್ಷಿಗಳಲ್ಲಿ ಮೂವರಲ್ಲಿ ಕೊನೆ ಕ್ಷಣದಲ್ಲಿ ಯಾರು ಸಂಪುಟಕ್ಕೆ ಸೇರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

 

click me!