ರಾಜ್ಯದಲ್ಲಿ ಉಪ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿದೆ. ಸಿದ್ಧತೆಗಳು ಶುರುವಾಗಿದ್ದು ಡಿಸೆಂಬರ್ 5 ರಂದು ಚುನಾವಣೆ ನಡೆಯುತ್ತಿದೆ.
ಬೆಂಗಳೂರು [ನ.11]: ಜೆಡಿಎಸ್-ಕಾಂಗ್ರೆಸ್ ಶಾಸಕರು ಅನರ್ಹ ಗೊಂಡಿರುವ ಹಿನ್ನೆಲೆಯಲ್ಲಿ ತೆರವಾಗಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನ.11ರ ಸೋಮವಾರದಿಂದ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಜೊತೆಗೆ ನೀತಿ ಸಂಹಿತೆ ಸಹ ಜಾರಿಗೊಳ್ಳಲಿದೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹಿಂದೆ ಸಲ್ಲಿಕೆಯಾಗಿರುವ ನಾಮಪತ್ರ ಗಳನ್ನು ಮಾನ್ಯ ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
undefined
ಆಯೋಗದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗ ಲಿದೆ. ನ. 18 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನ.೧೯ರಂದು ನಾಮ ಪತ್ರಗಳ ಪರಿಶೀಲನೆ, ನ.21 ರಂದು ನಾಮ ಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.
ಡಿ.9ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದರು. ಪರಿಷ್ಕೃತ ವೇಳಾಪಟ್ಟಿಗೂ ಮುನ್ನವೇ ನಾಮಪತ್ರ ಸಲ್ಲಿಕೆ ಮಾಡಿದ ಅಭ್ಯರ್ಥಿಗಳು ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡುವ ಅಗತ್ಯ ಇಲ್ಲ. ಈಗಾಗಲೇ ಸಲ್ಲಿಕೆ ಮಾಡಿರುವ ನಾಮಪತ್ರಗಳನ್ನು ಪರಿಗಣಿಸಲಾಗುವುದು. ಸೆ.21 ರಂದು ಅಧಿಸೂಚನೆ ಹೊರಡಿಸಿದ ತರುವಾಯ ಸಲ್ಲಿಕೆಯಾಗಿದ 29 ನಾಮ ಪತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳ ಲಾಗುವುದು.
ರಾಷ್ಟ್ರೀಯ ಪಕ್ಷದ 15 ಅಭ್ಯರ್ಥಿಗಳು, ಮಾನ್ಯತೆ ಪಡೆದ ಪಕ್ಷದ ಮೂವರು ಅಭ್ಯರ್ಥಿಗಳು ಮತ್ತು 11 ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದರು. ನಾಮಪತ್ರ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ಹೆಚ್ಚುವರಿ ದಾಖಲಾತಿ ಅಥವಾ ಮಾಹಿತಿ ನೀಡುವುದಿದ್ದರೆ ಅಥವಾ ಹೆಚ್ಚುವರಿ ಪ್ರತಿ ಸಲ್ಲಿಕೆ ಮಾಡದಿದ್ದರೆ ಮಾತ್ರ ಸಲ್ಲಿಕೆ ಮಾಡಬಹುದು ಎಂದು ಸ್ಪಷ್ಟಪಡಿಸಿದರು.
ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ಗೋಕಾಕ್, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಾವೇರಿ ಜಿಲ್ಲೆಯ ಹಿರೇಕೆರೂರು, ರಾಣೆಬೆನ್ನೂರು, ಬಳ್ಳಾರಿ ಜಿಲ್ಲೆಯ ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೃಷ್ಣರಾಜಪೇಟೆ, ಹುಣಸೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಆಯಾ ಕ್ಷೇತ್ರಗಳಿಗೆ ನೀತಿಸಂಹಿತೆ ಅನ್ವಯವಾಗಲಿದೆ ಎಂದರು.
ಚುನಾವಣೆಗೆ ಸಕಲ ಸಿದ್ಧತೆ: ಉಪಚುನಾವಣೆಗೆ 4185 ಮತಗಟ್ಟೆಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. 19,12,791 ಪುರುಷ ಮತದಾರರು, 1837375 ಮಹಿಳಾ ಮತದಾರರು, 399 ಇತರರು ಸೇರಿ 37,50,565 ಮತದಾರರಿದ್ದಾರೆ. ಇವಿಎಂ, ವಿವಿಪ್ಯಾಟ್, ಎಂ3 ಮತ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ.
ಯಶವಂತಪುರ ಕ್ಷೇತ್ರದಲ್ಲಿ ಅತಿ ಹೆಚ್ಚು 461 ಮತಗಟ್ಟೆಗಳಿದ್ದರೆ, ಶಿವಾಜಿನಗರ ಕ್ಷೇತ್ರದಲ್ಲಿ ಅತಿ ಕಡಿಮೆ 193 ಮತಗಟ್ಟೆಗಳಿವೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಅಗತ್ಯ ಭದ್ರತೆ, ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ದೂರುಗಳ ಮೇಲುಸ್ತುವಾರಿ ಮತ್ತು ಮಾಧ್ಯಮಗಳ ಮೇಲುಸ್ತುವಾರಿ ಕೇಂದ್ರವನ್ನು ಖನಿಜ ಭವನದಲ್ಲಿ ತೆರೆಯಲಾಗಿದೆ. ಪಕ್ಷಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ಸಾರ್ವಜನಿಕರು ಇ-ಮೇಲ್, ಪತ್ರ, ಸಿ- ವಿಜಿಲ್ ಮೊಬೈಲ್ ಆಪ್ ಮೂಲಕ ಸಹ ದೂರುಗಳನ್ನು ದಾಖಲಿಸಬಹು ದಾಗಿದೆ ಎಂದು ಹೇಳಿದರು.
ಚುನಾವಣೆ ಕ್ಷೇತ್ರಗಳು
ಅಥಣಿ
ಕಾಗವಾಡ
ಗೋಕಾಕ್
ಯಲ್ಲಾಪುರ
ಹಿರೇಕೆರೂರು
ರಾಣೆಬೆನ್ನೂರು
ವಿಜಯನಗರ
ಚಿಕ್ಕಬಳ್ಳಾಪುರ
ಕೆ.ಆರ್.ಪುರ
ಮಹಾಲಕ್ಷ್ಮೀ
ಲೇಔಟ್
ಶಿವಾಜಿನಗರ
ಹೊಸಕೋಟೆ
ಕೆ.ಆರ್.ಪೇಟೆ
ಹುಣಸೂರು