ಬ್ರೇಕಿಂಗ್: ಅನರ್ಹರ ತೀರ್ಪಿಗೂ ಡೇಟ್ ಫಿಕ್ಸ್, ಅಲ್ಲೋಲ-ಕಲ್ಲೋಲವಾದ್ರೆ ಅಚ್ಚರಿ ಏನಿಲ್ಲ

By Web Desk  |  First Published Nov 9, 2019, 5:43 PM IST

ಅನರ್ಹ ಶಾಸಕರ ತೀರ್ಪಿಗೂ ಡೇಟ್ ಫಿಕ್ಸ್/  17 ಜನರ ಭವಿಷ್ಯ ನಿರ್ಧಾರ/ ರಾಜ್ಯ ರಾಜಕಾರಣದ ಮೇಲೆ ಪ್ರಭಾವ ಬೀರಲಿರುವ ಮಹಾತೀರ್ಪು/ ಅನರ್ಹರ ಎದೆಯಲ್ಲಿ ಢವ ಢವ


ನವದೆಹಲಿ/ಬೆಂಗಳೂರು[ನ. 09]: 17 ಜನ ಅನರ್ಹ ಶಾಸಕರ ಹಣೆಬರಹ ನಿರ್ಧಾರಕ್ಕೆ ದಿನಾಂಕ ಫಿಕ್ಸ್ ಆಗಿದ್ದು ಬುಧವಾರ ನವೆಂಬರ್ 13 ರಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟವಾಗಲಿದೆ.  ಸಹಜವಾಗಿಯೇ ಅನರ್ಹ ಶಾಸಕರಿಗೆ ಢವ-ಢವ ಶುರುವಾಗಿದೆ.

ಪಕ್ಷಾಂತರಿಗಳ ಸೋಲು : ಅನರ್ಹರಿಗೆ ತಳಮಳ

Latest Videos

undefined

ಕಾಂಗ್ರೆಸ್ ನ 14 ಹಾಗೂ ಜೆಡಿಎಸ್‌ನ 3 ಶಾಸಕರನ್ನು ಹಿಂದಿನ ಮೈತ್ರಿ ಸರ್ಕಾರದ ಸ್ಫೀಕರ್ ಆಗಿದ್ದ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ 17 ಅನರ್ಹ ಶಾಸಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಅನರ್ಹರ ಅರ್ಜಿ ವಿಚಾರಣೆ ಮುಗಿದಿದ್ದು ತೀರ್ಪಿಗೆ ದಿನಾಂಕ ಫಿಕ್ಸ್ ಆಗಿದೆ. ಕಾಂಗ್ರೆಸ್ ಪರ ಕಪಿಲ್ ಸಿಬಲ್  ವಾದ ಮಂಡಿಸಿದ್ದರು.

ರಾಜ್ಯದ ಉಪಚುನಾವಣೆ ಅನುಮಾನ: ರಾಜಕೀಯ ವಲಯದಲ್ಲಿ ಗುಸುಗುಸು

ಈಗಾಗಲೇ ಉಪಚುನಾವಣೆ ದಿನಾಂಕ ಘೋಷಣೆಯಗಿದ್ದರಿಂದ ಯಾವುದೇ ಕಾರಣಕ್ಕೂ ವಿಚಾರಣೆಯನ್ನು ಪದೇ-ಪದೇ ಮುಂದೂಡಬಾರದು. ಅನರ್ಹರು ಉಪಚುನಾವಣೆಗೆ ಸ್ಪರ್ಧಿಸಬಹುದು. ಇದಕ್ಕೆ ಯಾವುದೇ ತಕರಾರು ಇಲ್ಲ ಎಂದು ಕೇಂದ್ರ ಚುನಾವಣೆ ಆಯೋಗದ ಪರ ವಕೀಲ ವಾದ ಮಂಡಿಸಿದ್ದರು.

17 ರಲ್ಲಿ ರಾಜರಾಜೇಶ್ವರಿ ನಗರ, ಮಸ್ಕಿ ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲು ಆಯೋಗ ದಿನಾಂಕ ಫಿಕ್ಸ್ ಮಾಡಿದೆ. ಡಿಸೆಂಬರ್ 5 ಕ್ಕೆ ಚುನಾವಣೆ ನಡೆಯಲಿದೆ. ರಾಜೀನಾಮೆ ನೀಡಿದ್ದಕ್ಕೆ ಸ್ಪೀಕರ್ ಕೈನಿಂದ ಅನರ್ಹಗೊಂಡ ಶಾಸಕರು ಈಗ ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದೇ? ಇಲ್ಲವೇ? ಎಂಬುದು ನವೆಂಬರ್ 13 ರಂದು ಗೊತ್ತಾಗಲಿದೆ.

 

 

 

click me!