ಗೋಕಾಕ್ ಕಾಂಗ್ರೆಸ್ ಟಿಕೆಟ್ ಇವರಿಗೆ ಪಕ್ಕಾ, ಅಭಯ ನೀಡಿದ ಹಿರಿಯಣ್ಣ!

By Web DeskFirst Published Nov 10, 2019, 7:38 PM IST
Highlights

ಬೆಳಗಾವಿಯಲ್ಲಿ ಮುಂದುವರಿದ ಸಹೋದರರ ಸವಾಲ್/ ರಮೇಶ್ ಜಾರಕಿಹೊಳಿ ಮೇಲೆ ಸತೀಶ್ ವಾಗ್ದಾಳಿ/ ನರೆ ಬಂದಾಗ ಊರಿನಲ್ಲಿ ಇದ್ರಾ ಎಂದು ಪ್ರಶ್ನೆ

ಬೆಳಗಾವಿ[ನ. 10]  ಬೆಳಗಾವಿಯಲ್ಲಿ ಸಹೋದರರ ಸವಾಲ್ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ.  ಗೋಕಾಕ್ ನಲ್ಲಿ ಲಖನ್ ಜಾರಕಿಹೊಳಿ‌ ಸಮರ್ಥ ಅಂತಾ ಟಿಕೆಟ್ ಕೊಡಲಾಗುತ್ತಿದೆ . ಹೊರಗಿನವರು ಚುನಾವಣೆ ಮಾಡುವುದು ಗೋಕಾಕ್ ನಲ್ಲಿ ಬಹಳ ಕಷ್ಟ ಎಂದು ಹೇಳುತ್ತಲೇ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅನರ್ಹ ಶಾಸಕ ಸಹೋದರ ರಮೇಶ್ ಜಾರಕಿಹೊಳಿ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಅಶೋಕ ಪೂಜಾರಿ ಮೂರು ಬಾರಿ ಪ್ರಯತ್ನ ಮಾಡಿ ಸೋತಿದ್ದಾರೆ. ರಮೇಶ್ ದೆಹಲ್ಲಿಯಲ್ಲಿರುವ ಕೆಲವು ಕಾಂಗ್ರೆಸ್ ಗರು ಗೊತ್ತಿದ್ದಾರೆ ಅಂತಾ ದುರ್ಬಲ ಇದ್ದವರಿಗೆ ಟಿಕೆಟ್ ಕೊಡಿಸಲು ಓಡಾಡುತ್ತಿದ್ದಾನೆ. ರಮೇಶ್ ಜಾರಕಿಹೊಳಿ‌ ಅಶೋಕ ಪೂಜಾರಿ ಕಾಂಗ್ರೆಸ್ ಬರುವುದಕ್ಕೆ ಸಪೋರ್ಟ್ ಮಾಡುವುದಿಲ್ಲ.

ಸಂಚಲನ ತಂದ ಶರತ್ ಬಚ್ಚೇಗೌಡ ಒಂದು ಹೇಳಿಕೆ

ರಮೇಶ್ ಜಾರಕಿಹೊಳಿ‌ ಅವರ ಪ್ರಯತ್ನ ಸಕ್ಸಸ್ ಆಗಲ್ಲ. ಕೊನೆಯಲ್ಲಿ ಲಖನ್‌ ಜಾರಕಿಹೊಳಿ‌ಗೆ ಟಿಕೆಟ್ ಪಕ್ಕಾ. ಇನ್ನೆರಡು ದಿನಗಳಲ್ಲಿ ಟಿಕೆಟ್ ಘೋಷಣೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸತೀಶ್ ಜಾರಕಿಹೊಳಿ‌ಗೆ ಜನ ಪಾಠ ಕಲಿಸುತ್ತಾರೆ ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆಗೆ ಸತೀಶ್ ತಿರುಗೇಟ  ನೀಡಿದ ಮಾಜಿ ಸಚಿವ, ಪ್ರವಾಹದಲ್ಲಿ ಊರಲ್ಲಿ ಇರದ ರಮೇಶ್ ಹೇಳಿಕೆಗೆ ನಾನೇನು ಉತ್ತರ ಕೊಡಲಿ. ಐದು ವರ್ಷಕ್ಕೊಮ್ಮೆ ಊರಿಗೆ ಹೋಗುತ್ತಾನೆ ಶಾಸಕ ಅಂತಾ ಟ್ರಿಟ್ ಮಾಡೋಕೆ ಆಗಲ್ಲ. ಅನರ್ಹ ಶಾಸಕರೆಲ್ಲರಿಗೆ ಹೆಚ್ಚು ಅನುದಾನ ಈ ಸರ್ಕಾರ ಕೊಡುತ್ತಿದೆ. ಅನರ್ಹರಿಂದ ಸರ್ಕಾರ ಬಂದಿದ್ದಕ್ಕೆ ಅವರಿಗೆ ಹೆಚ್ಚು ಅನುದಾನ ಸಿಗುತ್ತಿದೆ ಎಂದರು.

ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನ ನಾವು ಸ್ವಾಗತ ಮಾಡಿದ್ದೇವೆ. ಬಹಳ ದಿನಗಳಿಂದ ಚುನಾವಣೆ ಬಂದಾಗ ಇದನ್ನ ಬಳಸಿಕೊಳ್ಳುತ್ತಿದ್ದರು. ಬಿಜೆಪಿಯವರು ಎನೂ ಮಾಡಿಲ್ಲ ಕೋರ್ಟ್ ಅವರ ಕಡೆಯಿಲ್ಲ. ಇದು ಜನರ ತೀರ್ಪು ಇದು, ಯಾರಿಗೂ ಇದರಲ್ಲಿ ಅನ್ಯಾಯ ಆಗಿಲ್ಲ ಎಂದು ವಿಶ್ಲೇಷಣೆ ಮಾಡಿದರು.

click me!