ಶಿರಾದಲ್ಲಿ ಸಿದ್ದರಾಮಯ್ಯ ಹೇಳಿಕೆ/ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ/ ಜೆಡಿಎಸ್ ನವರು ನನ್ನನ್ನು ಡಿಸಿಎಂ ಮಾಡಲಿಲ್ಲ/ ನಾಣು ಪಕ್ಷೇತರನಾಗಿ ಗೆದ್ದಾಗ ದೇವೇಗೌಢರು ಬೆಂಬಲಿಸಿದ್ದರೆ?
ತುಮಕೂರು(ಅ. 23) ಶಿರಾದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅನೇಕ ಹಳೆಯ ವಿಚಾರಗಳನ್ನು ಎತ್ತಿದ್ದಾರೆ. ಶಿರಾ ಪ್ರಚಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ ರಾಜ್ಯ ಸರ್ಕಾರ ಕಾಲೇಕು ಆರಂಭಕ್ಕೆ ಮುಂದಾಗಿರುವುದನ್ನು ಮೂರ್ಖತನ ಎಂದರು.
ಆತೂರದ ನಿರ್ಧಾರ ತೆಗೆದುಕೊಳ್ಳಬೇಡಿ. ಒಂದು ವರ್ಷ ಶಾಲೆ ಮುಂದಕ್ಕೆ ಹಾಕಿದ್ರೆ ಆಕಾಶ ಬೀಳಲ್ಲ. ಯಾವುದೇ ಕಾರಣಕ್ಕೂ ಶಾಲೆ ಕಾಲೇಜು ತೆಗೆಯಬೇಡಿ. ಮೂರ್ಖತನದ ನಿರ್ಧಾರ ಮಾಡಬೇಡಿ ಎಂಧು ಕೇಳಿಕೊಂಡರು.
'ಮಗಳ ಬಾಳಲ್ಲಿ ನಡೆಯಬಾರದ್ದು ನಡೆದು ಹೋಗಿದೆ' ಮುಂದಿನ ಸಿಎಂ ಡಿಕೆಶಿಯೇ!
ನಾನು ಇನ್ನೊಮ್ಮೆ ಮುಖ್ಯಮಂತ್ರಿ ಆಗುವುದು ಬಿಡುವುದು ಕೇಂದ್ರ ಹೈಕಮಾಂಡ್ ಗೆ ಬಿಟ್ಟಿದ್ದು. ಜಮೀರ್ ದು ಅವರ ವೈಯಕ್ತಿಕ ಅಭಿಪ್ರಾಯ. ಅಭಿಮಾನದಿಂದ ಎಲ್ಲಾರು ಹೇಳುತ್ತಾರೆ. ಅದು ಪಕ್ಷದ ನಿರ್ಧಾರವಲ್ಲ ಎಂದು ಹೇಳಿದರು.
ಡಿಸಿಎಂ ಮಾಡಿದ್ದು ಅವರಲ್ಲ(ಜೆಡಿಎಸ್) ಆಗಲೇ ಸಿಎಂ ಆಗಬೇಕಿತ್ತು. ಇವರೇನು ಮಾಡಿದ್ರು? ನಾನು 1983 ನಾನು ಪಕ್ಷೇತ್ರರವಾಗಿ ಗೆದ್ದಿದ್ದು ಆಗ ದೇವೇಗೌಡರು ಬೆಂಬಲಿಸಿದ್ರಾ? ಎಂದು ಜೆಡಿಎಸ್ ಮತ್ತು ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡರು.
ಕಟೀಲ್ ಯಕಶ್ಚಿತ್ ರಾಜಕಾರಣಿ , ಅವರಿಗೆ ರಾಜಕೀಯ ಪ್ರೌಢಮೆ ಬಂದಿಲ್ಲ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎಂದು ಸವದಿ ಹೇಳಿದ್ದು ಯಡಿಯೂರಪ್ಪನ್ನು ಕೇಳಗಿಳಿಸಲು ಯಾರು ಪ್ರಯತ್ನ ಮಾಡಿದ್ದಾರೆ ಎಂದು ಅವರನ್ನೇ ಕೇಳಿ ಎಂದು ಸವಾಲು ಹಾಕಿದರು.