ಶಿರಾದಲ್ಲಿ ಉಪಚುನಾವಣೆ ಕಾವು/ ಸಂಸದ ತೇಜಸ್ವಿ ಸೂರ್ಯ ಪ್ರಚಾರ/ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ/ ಶಿರಾ ಜನ ಅಭಿವೃದ್ಧಿ ಪರವಾಗಿದ್ದಾರೆ
ತುಮಕೂರು(ಅ. 22) ಶಿರಾದಲ್ಲಿ ಬದಲಾವಣೆಯ ಪರ್ವ ಎಲ್ಲಾ ಕಡೆ ಇದೆ. ಶಿರಾದ ಯುವಕರು ಕಳೆದ ಇಷ್ಟು ವರ್ಷಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದಿಂದ ಬೇಸತ್ತಿದ್ದಾರೆ. ನೇರವಾಗಿ ಸರ್ಕಾರದ ಶಾಸಕ ಇಲ್ಲಿ ಆಯ್ಕೆ ಆಗಬೇಕು ಎಂದು ಸಂಸದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಶಿರಾ ಉಪಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಸೂರ್ಯ, ಶಿರಾದ ಅಭಿವೃದ್ಧಿ ಕಾರ್ಯಗಳನ್ನ ಮತ್ತಷ್ಟು ವೇಗದಲ್ಲಿ ತಗೊಂಡೋಗ್ಬೇಕು ಅಂತ ಸಂಕಲ್ಪ ಮಾಡಿದ್ದಾರೆ. ಇಷ್ಟು ವರ್ಷಗಳಲ್ಲಿ ಕಾಣದಂತಹ ಅಭಿವೃದ್ಧಿಯನ್ನ ಬರುವ ಎರಡೂವರೆ ಅವರ್ಷದಲ್ಲಿ ಕಾಣೋರಿದ್ದಾರೆ. ಶಿರಾದ ಇತಿಹಾಸದಲ್ಲಿ ಇದೊಂದು ಬದಲಾವಣೆಯ ಚುನಾವಣೆಯಾಗುತ್ತೆ. ಯುವಕರು ಅತ್ಯಂತ ಉತ್ಸಾಹದಿಂದ ಬಿಜೆಪಿ ಅಭ್ಯರ್ಥಿಯ ಪರವಾಗಿ ನಿಂತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹತ್ತು ಜನ ಮಾಡುವ ಕೆಲ್ಸ ಒಬ್ಬ ಮಾಡ್ತಾರೆ, ಮುನಿರತ್ನ ಗೆದ್ದರೆ ಮಿನಿಸ್ಟರ್ ಫಿಕ್ಸ್!
ಯುವಮೋರ್ಚಾದ ನೇತೃತ್ವದಲ್ಲಿ ಶಿರಾದ ಚುನಾವಣೆಯನ್ನ ನಾವು ಗೆದ್ದೇಗೆಲ್ತೀವಿ ಎಂಬ ಸಂಕಲ್ಪ ತೊಟ್ಟಿದ್ದಾರೆ. ಬಿಜೆಪಿ ಗೆ ಇತಿಹಾಸದಿಂದಲೂ ಯಾವುದೂ ಸುಲಭವಾಗಿ ಬಂದಿಲ್ಲ. ಎಲ್ಲದ್ದನ್ನೂ ಸಂಘರ್ಷ ಮಾಡಿಯೇ ಗೆದ್ದುಕೊಂಡಿದ್ದೀವಿ. ಇಡೀ ದೇಶದಲ್ಲಿ ಮೋದಿಯವರು ಪ್ರಧಾನಿಯಾದ ನಂತರ ಕಳೆದ ಆರು ವರ್ಷಗಳಲ್ಲಿ ಅತಿ ವೇಗವಾಗಿ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದಿದ್ದಾರೆ.
ಅವರು ಪ್ರಧಾನಿ ಆದ ನಂತರ ನಿರುದ್ಯೋಗಳು ಆಗಿರುವವರು ಯಾರು ಅಂತಾದ್ರೆ, ಯಾರು ಅವರಪ್ಪನ ಹೆಸರು, ತಾತನ ಹೆಸರು ಹೇಳಿಕೊಂಡು ಯುವರಾಜರಾಗಿದ್ದಾರೋ ಅವರೇ ನಿರುದ್ಯೋಗಿಗಳು ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಅವರನ್ನು ವ್ಯಂಗ್ಯವಾಡಿದರು.