ಸಿ.ಪಿ.ಯೋಗೇಶ್ವರ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.
ಧಾರವಾಡ (ಅ.22): ಸಿ.ಪಿ.ಯೋಗೇಶ್ವರ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.
ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಪಕ್ಷದ ಹೈಕಮಾಂಡ್ ಇದೆ, ಅದ್ಯಕ್ಷರು, ಸಿಎಂ ಅವರು ಒಪ್ಪಿಗೆ ಮೇಲೆ ಬಂದ್ರೆ ಸ್ವಾಗತಿಸುತ್ತೇವೆ ಎಂದರು.
undefined
ಇನ್ನು ಸಂಡೂರು ವಿಧಾನಸಭಾ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಸಚಿವರು, ಸಂಡೂರು ಉಪಚುನಾವಣೆಗೆ ಯಾರು ಸ್ಪರ್ಧಿಸಬೇಕು, ಯಾರಿಗೆ ಟಿಕೆಟ್ ಎಂಬುದು ಸದ್ಯ ಬಗೆಹರಿದಿದೆ. ಯಾರಿಗೆ ಫೈನಲ್ ಆಗಬೇಕು ಎಂಬುದು ಕಾದು ನೋಡಬೇಕು. ತುಕಾರಾಂ ಪತ್ನಿ ಹೆಸರು ಇದೆ, ಆದರೆ ಇನ್ನು ಅಧಿಕೃತವಾಗಿ ಹೆಸರು ಹೊರಬಂದಿಲ್ಲ. ನಮ್ಮ ತೀರ್ಮಾನವನ್ನ ನಾವು ಹೇಳಿದ್ದೇವೆ ಎಂದರು.
ಆರ್‌ಎಸ್‌ಎಸ್ ಮಾತು ಕೇಳದ ನರೇಂದ್ರ ಮೊದಿ ಪಿಎಂ ಸ್ಥಾನದಿಂದ ವಜಾ ಆಗ್ತಾರೆ: ಸಚಿವ ಸಂತೋಷ್ ಲಾಡ್
ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಗೆ ನಮ್ಮ ಪಕ್ಷದಲ್ಲಿ ಮುಸ್ಲಿಂ ಮತ್ತು ಲಿಂಗಾಯತ ಅಂತಾ ಏನೂ ಇಲ್ಲ. ಯಾರೇ ನಿಂತರೂ ಗೆಲ್ಲುತ್ತಾರೆ. ನಮ್ಮದು ಸೆಕ್ಯುಲರ್ ಪಕ್ಷ ನಾವು ಎಲ್ಲರನ್ನೂ ಒಂದೇ ಸಮಾನ ನೋಡುತ್ತೇವೆ. ಹೀಗಾಗಿ ಟಿಕೆಟ್ ಯಾರಿಗೆ ಕೊಟ್ಟರೂ ಕಾಂಗ್ರೆಸ್ ಅಭ್ಯರ್ಥಿ ಆಗಿರುತ್ತಾರೆ. ನಮ್ಮಸಜೇಶನ ಗಳನ್ನ ಬಹಿರಂಗವಾಗಿ ಹೇಳಲು ಬರೋದಿಲ್ಲ. ಎಲ್ಲವನ್ನು ಪಕ್ಷದಲ್ಲಿ ಆಂತರಿಕವಾಗಿ ಹೇಳಿ ನಮ್ಮ ನಮ್ಮ ಹೇಳಿಕೆಗಳನ್ನು ಹೇಳಿರುತ್ತೇವೆ ಎಂದರು