ಹಾಲುಮತ ಪವಿತ್ರ ಸಮಾಜ; ಅದನ್ನೇ ಬಿಟ್ಟು ಸಾಬರು ಆಗ್ತೀನಿ ಅಂದ್ರೆ ನಿಂತು ಹೊಯ್ಕೊಬೇಕಾ? ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ವಾಗ್ದಾಳಿ

By Suvarna News  |  First Published Nov 9, 2024, 8:34 PM IST

ಮುಡಾದಲ್ಲಿ ತಿಂದು ಸಿಲುಕಿ‌ ಒದ್ದಾಡ್ತಿದಿರಿ. ಮೈಮೇಲೆ ಒಂದು ಕಲೆ ಇಲ್ಲ ಅಂತಾ ಹೇಳೋದು ರಾಜಕಾರಣದಲ್ಲಿ ಬರೀ ತಿನ್ನೋದೇ ಆಯ್ತಲ್ಲ? ಎಲ್ಲಿ ಇಡ್ತೀರಿ ರೊಕ್ಕ? ಸಿಎಂ ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ವಾಗ್ದಾಳಿ


ಹಾವೇರಿ (ನ.9): ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಡಲು ಸಿದ್ದರಾಮಯ್ಯಗೆ ಇಷ್ಟ ಇಲ್ಲ. ನಮ್ಮ ಸರ್ಕಾರ ಇದ್ದಾಗ  ಎಲ್ಲರೂ ಮೀಸಲಾತಿಗಾಗಿ ಹೋರಾಟಕ್ಕೆ ಬರುತ್ತಿದ್ದರು. ಈಗ ಸುಮ್ಮನೆ ಕುಳಿತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಮಾತಾಡ್ತಿಲ್ಲ, ಡಿಕೆ ಶಿವಕುಮಾರ್ ಸುಮ್ಮನೆ ಇದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆ ಇಂದು ತಾಲ್ಲೂಕಿನ ಕುಂದೂರಿನಲ್ಲಿ  ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಯತ್ನಾಳ್ ಅವರು,  ಅಧಿವೇಶನದ ಪ್ರಾರಂಭದಲ್ಲಿಯೇ ಮೀಸಲಾತಿ ಘೋಷಣೆ ಮಾಡಬೇಕು. ಉಪಚುನಾವಣೆ ಹಿನ್ನೆಲೆ ಸುಳ್ಳು ಭರವಸೆ ನೀಡುತ್ತಾರೆ. ಆದರೆ ಮೀಸಲಾತಿ ನೀಡಲು ಸಿದ್ದರಾಮಯ್ಯ ನಿಜಕ್ಕೂ ಬೇಕಿಲ್ಲ. ನಮ್ಮ ಸರ್ಕಾರ ಇದ್ದಾಗ ಮೀಸಲಾತಿ ಹೋರಾಟ ಮಾಡಿದವರು ಈಗ್ಯಾಕೆ ಸುಮ್ಮನಿದ್ದಾರೆ? ಎಂದು ಪ್ರಶ್ನಿಸಿದರು.

Latest Videos

ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ನಡೆದಿದೆ ಆದರೆ ದ್ದರಾಮಯ್ಯ 187 ಕೋಟಿ‌ ಅಲ್ಲ 82 ಕೋಟಿ ಅಂತಾರೆ. ಸಿಎಂ ಅವರೇ ಇಷ್ಟು ತಿಂದರೂ ಅದೇ ಅಷ್ಟು ತಿಂದರೂ ಅದೇ ತಾನೇ? ಈ ದುಡ್ಡದಲ್ಲಿ 18,700 ಕುಟುಂಬಗಳಿಗೆ ತಲಾ ಒಂದೊಂದು ಲಕ್ಷ ರೂಪಾಯಿ ಕೊಡಬಹುದಿತ್ತು. ಹಾಲುಮತ ಸಮಾಜ‌ ಪವಿತ್ರ ಸಮಾಜ. ಅದನ್ನು ಬಿಟ್ಟು ಸಾಬರ ಆಗ್ತೀನಿ ಅಂದರೆ ನಿಂತ‌ ಹೊಯ್ಕೊಬೇಕಾ? ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಏನಾಗಬೇಕು ಅಂತಾ ಅವರೇ ಹೇಳಿದ್ದಾರೆ. ನಾನು‌ ದೇವರಲ್ಲಿ ಕೇಳಿದ್ರೆ ದಲಿತ ಕುಟುಂಬದಲ್ಲಿ ಹುಟ್ಟಿಸು, ಹಿಂದುಳಿದ ವರ್ಗದಲ್ಲಾದರೂ ಹುಟ್ಟಿಸು ಒಟ್ಟು ಹಿಂದೂ ಆಗಿ‌ ಹುಟ್ಟಿಸು ಅಂತ ಕೇಳ್ಕೊಳ್ತೀನಿ. ಧರ್ಮದ ಬಗ್ಗೆ ಅಭಿಮಾನ‌ ಇಲ್ಲ, ದೇಶದ ಬಗ್ಗೆ ಅಭಿಮಾನ‌ ಇಲ್ಲ ಅಂದರೆ ರಾಜ್ಯ ಹೆಂಗ ಆಳ್ತೀರಿ? ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಕ್ಫ್ ಆಸ್ತಿ ವಿವಾದ: ರೈತಪರ ಹೋರಾಡಬೇಕಾದ ರಾಕೇಶ್ ಟಿಕಾಯತ್ ಯಾಕೆ ಮೌನ? ರೈತ ಸಂಘಟನೆಗಳು ಎಲ್ಲಿ ಅಡಗಿವೆ? ಯತ್ನಾಳ್ ಕಿಡಿ

ಮುಡಾದಲ್ಲಿ ತಿಂದು ಸಿಲುಕಿ‌ ಒದ್ದಾಡ್ತಿದಿರಿ. ಮೈಮೇಲೆ ಒಂದು ಕಲೆ ಇಲ್ಲ ಅಂತಾ ಹೇಳೋದು ರಾಜಕಾರಣದಲ್ಲಿ ಬರೀ ತಿನ್ನೋದೇ ಆಯ್ತಲ್ಲ? ಎಲ್ಲಿ ಇಡ್ತೀರಿ ರೊಕ್ಕ? ರಾಜ್ಯದಲ್ಲಿ ಏನೂ ಅಭಿವೃದ್ಧಿ ಇಲ್ಲ. ಮೊಟ್ಟೆ ಕೊಡಿ ಅಂತಾ ದುಡ್ಡು ಕೊಟ್ಟರೆ ಅದನ್ನೂ ಕೊಟ್ಟಿಲ್ಲ. ಇಂಥ ಸರ್ಕಾರ ರಾಜ್ಯದಲ್ಲಿ ಬೇಕಾ? ಸಿಎಂ ಸಿದ್ದರಾಮಯ್ಯ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿ ಹೇಳ್ಕೊಳ್ತಾರೆ. ಆದರೆ ಸಿದ್ದರಾಮಯ್ಯರನ್ನು ಇಳಿಸೋದು ಗ್ಯಾರಂಟಿ, ಈ ಸರ್ಕಾರ ಬೀಳೋದು ಗ್ಯಾರಂಟಿ.  ಶಿಗ್ಗಾಂವಿ ಉಪಚುನಾವಣೆಯಲ್ಲಿ ವಿಭೂತಿ ಕುಂಕುಮ ಭಂಡಾರದವರು ಗಟ್ಟಿಯಾದ್ರೆ ಭರತ್ ಖಂಡಿತವಾಗಿ 80 ಸಾವಿರ ಲೀಡ್‌ನಲ್ಲಿ ಬರ್ತಾರೆ ಎಂದು ಭವಿಷ್ಯ ನುಡಿದರು.

ನಮ್ಮ ದೇಶದಲ್ಲಿ 18 ಲಕ್ಷ ಎಕರೆ ಭಾರತೀಯ ಸೇನೆ ಕೈಯಲ್ಲಿದೆ. ಎರಡನೆಯದ್ದು ಭಾರತೀಯ ರೈಲ್ವೆಯಲ್ಲಿ 15 ಲಕ್ಷ ಎಕರೆ ಇದ್ರೆ, ಮೂರನೇ ಸ್ಥಾನದಲ್ಲಿ ವಕ್ಫ್ ಇದೆ ಎಂದರೆ ನಂಬುತ್ತೀರಾ? ಹೌದು ನಂಬಲೇಬೇಕು. ಈ ದೇಶದಲ್ಲಿ ಈಗಾಗಲೇ ಇನ್ನೊಂದು ಪಾಕಿಸ್ತಾನ ನಿರ್ಮಾಣ ಆಗಿದೆ. ಮುಡಾ ಬಿಡಿ ಹಾಳಾಗಿ ಹೋಗ್ಲಿ, ಆದರೆ ವಕ್ಫ್ ಬಗ್ಗೆ ಚಿಂತೆ ಮಾಡಿ. ರೈತರ ಹೊಲದಲ್ಲಿ ವಕ್ಪ್ ಇದೆ ಇಲ್ಲವೋ ಅಂತ ಮುಂಜಾನೆ ಎದ್ದು ಮೊಬೈಲ್ ನಲ್ಲಿ ನೋಡೋ ಪರಿಸ್ಥಿತಿ ಬಂದಿದೆ. ಈಗಲಾದ್ರೂ ಹಿಂದೂಗಳು ಒಗ್ಗಟ್ಟಾಗಬೇಕಿದೆ. ಕಾಂಗ್ರೆಸ್‌ ಪಕ್ಷವನ್ನು ನಂಬಿದ ಹಿಂದೂಗಳಿಗೆ ಭವಿಷ್ಯದಲ್ಲಿ ಉಳಿಗಾಲವಿಲ್ಲ. ನಮ್ಮ ದೇಶ, ಧರ್ಮ ಉಳಿಯಲು ಬಿಜೆಪಿ ಅನಿವಾರ್ಯ. ಹೀಗಾಗಿ ಹಿಂದೂಗಳು ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಪಕ್ಷ ಬೆಂಬಲಿಸುವಂತೆ ಕರೆ ನೀಡಿದರು.

ಕಾಂಗ್ರೆಸ್‌ನೊಂದಿಗೆ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳದ ಬಿಜೆಪಿ ನಾಯಕರ ಮೇಲೆ ಸರ್ಕಾರ ಕೇಸ್ ಹಾಕಿದೆ; ಯತ್ನಾಳ್!

ಎರಡು ದೇಶ ಇರಲೇಬಾರದು ಎಂದು ಶ್ಯಾಮ್ ಪ್ರಸಾದ್ ಮುಖರ್ಜಿ ಹೋರಾಟ ಮಾಡಿದ್ರು.  ಅವರಿಗೆ ಶೇಖ್ ಅಬ್ದುಲ್ಲಾ ವಿಷ ಕೊಟ್ಟು ಸಾಯಿಸಿದರು. ಇಂತಹ ವಿಷ ಜಂತುಗಳ ಜಮ್ಮು ಕಾಶ್ಮೀರದಲ್ಲಿ ಇರೋವರೆಗೂ ಶಾಂತಿಯಿಲ್ಲ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಅಲ್ಲಿನ ಜನರಿಗೆ ನೆಮ್ಮದಿ ಸಿಕ್ಕಿದೆ. ಸಂವಿಧಾನ ಉಳಿಸಿದವರು ಕಾಂಗ್ರೆಸ್ ನಾಯಕರಲ್ಲ, ಪ್ರಧಾನಿ ಮೋದಿಯವರೇ ನಿಜವಾಗಲೂ ಸಂವಿಧಾನ ಉಳಿಸಿದವರು. ಆದರೆ ಈ ಕಾಂಗ್ರೆಸ್ ದೇಶದಲ್ಲಿ ಇದೀಗ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಮುಸ್ಲಿಮರು ಯಾವ ಊರಲ್ಲಿಯೂ ಶಾಂತಿಯಿಂದ ಇರೋದಿಲ್ಲ. ಅವರು ಮಾತ್ರ ತಮ್ಮ ಧರ್ಮ ಬಿಡೋದಿಲ್ಲ. ವರ್ಷ ವರ್ಷ ಮುಸ್ಲಿಮರ ಜನಸಂಖ್ಯೆ ಏರುತ್ತಿದೆ. ನೀವು(ಹಿಂದೂಗಳು) ಎರಡಕ್ಕೆ ಆಪರೇಶನ್ ಮಾಡಿಸಿಕೊಳ್ತೀರಿ ಎಂದು ತಿವಿದರು.

click me!