ಪ್ರಾಸಿಕ್ಯೂಶನ್‌ಗೆ ಸಿದ್ದು ಸರ್ಕಾರ ಶಿಫಾರಸು: ಇಂತಹ ಬೆದರಿಕೆಗೆ ಬಗ್ಗಲ್ಲ, ಜಗ್ಗಲ್ಲ ಎಂದ ಯಡಿಯೂರಪ್ಪ!

By Kannadaprabha News  |  First Published Nov 9, 2024, 1:29 PM IST

ಸೋಲಿನ ಭಯದಿಂದ ಮುಖ್ಯಮಂತ್ರಿಗಳು ನಿನ್ನೆ ಬಳ್ಳಾರಿಯಿಂದ ಹೋಗಬೇಕಾದವ್ರು ಇಲ್ಲಿಯೇ ಉಳಿದಿದ್ದಾರೆ. ಇದನ್ನೆಲ್ಲ ನೋಡಿದ್ರೆ ಅವರಿಗೆ ಸೋಲಿನ ಭಯ ಕಾಡ್ತಿದೆ ಅನ್ನೋದು ಸ್ಪಷ್ಟ ಆಗ್ತಿದೆ ಎಂದ ಯಡಿಯೂರಪ್ಪ 


ಬಳ್ಳಾರಿ(ನ.09):  ಹಳೆಯದನ್ನ ಪ್ರಾಮಾಣಿಕವಾಗಿ ನಾವು ಮಾಡಿದ್ದನ್ನ ಈಗ ಕೆದಕುವಂತ ಪ್ರಯತ್ನ ಮಾಡಲಾಗುತ್ತಿದೆ. ಬೇರೆ ದಾರಿಯಿಲ್ಲದೇ ಸಿದ್ದರಾಮಯ್ಯನವರು ಮಾಡೋಕೆ ಹೊರಟಿದ್ದಾರೆ. ಇದರಿಂದ ಯಾವುದೇ ಲಾಭ ಅವರಿಗೆ ಆಗಲ್ಲ, ಕುತಂತ್ರ ರಾಜಕಾರಣವನ್ನ ಬಿಟ್ಟು, ನಿಮ್ಮ ಮೇಲೆ ಇರುವಂತಹ ಆರೋಪದಿಂದ ಮುಕ್ತವಾಗಿ ಹೊರಬಂದು ಒಳ್ಳೆಯ ಕೆಲಸ ಮಾಡಲಿ ಅಂತ ಹಾರೈಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ. 

ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ರಾಜ್ಯ ಸರ್ಕಾರ ಪ್ರಾಸಿಕ್ಯೂಶನ್ ಗೆ ಶಿಫಾರಸು ವಿಚಾರದ ಬಗ್ಗೆ ಬಳ್ಳಾರಿ ಜಿಲ್ಲೆಯ ಸಂಡೂರಿನ ತಾಲೂಕಿನ ತಾರಾ ನಗರ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಈ ಬೆದರಿಕೆಗೆ ಯಡಿಯೂರಪ್ಪ ಬಗ್ಗಲ್ಲ, ಜಗ್ಗಲ್ಲ ಎಂದು ತಿಳಿಸಿದ್ದಾರೆ. 

Tap to resize

Latest Videos

undefined

ಮುಡಾ ಕೇಸ್‌ ಸಿಬಿಐಗೆ ವಹಿಸಿದ್ರೆ ಸಿಎಂ ಸಿದ್ದರಾಮಯ್ಯ ಜೈಲಿಗೆ: ಯಡಿಯೂರಪ್ಪ

ಶ್ರೀರಾಮುಲು ಮೇಲೂ ಪ್ರಾಸಿಕ್ಯೂಶನ್ ಗೆ ಶಿಫಾರಸು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯಡಿಯೂರಪ್ಪ ಅವರು, ಏನು ಪರಿಣಾಮ ಆಗೋದಿಲ್ಲ. ಅದನ್ನು ಎದುರಿಸುವಂತಹ ಶಕ್ತಿ ಕಾನೂನು ಕೋರ್ಟ್, ಕಚೇರಿಗಳಿದ್ದಾವೆ. ಸೋಲಿನ ಭಯದಿಂದ ಮುಖ್ಯಮಂತ್ರಿಗಳು ನಿನ್ನೆ ಬಳ್ಳಾರಿಯಿಂದ ಹೋಗಬೇಕಾದವ್ರು ಇಲ್ಲಿಯೇ ಉಳಿದಿದ್ದಾರೆ. ಇದನ್ನೆಲ್ಲ ನೋಡಿದ್ರೆ ಅವರಿಗೆ ಸೋಲಿನ ಭಯ ಕಾಡ್ತಿದೆ ಅನ್ನೋದು ಸ್ಪಷ್ಟ ಆಗ್ತಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

click me!