
ಬೆಂಗಳೂರು : ಉಪ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದ ದಿಕ್ಕು ಬದಲಾಗುತ್ತದೆ. ರಾಜ್ಯಕ್ಕೆ ಹೊಸ ಸೂತ್ರದಾರ ಸಿಗುತ್ತಾನೆ ಎಂಬ ಮಾತು ರಾಜಕಾರಣದ ವಲಯದಲ್ಲಿ ಆರಂಭವಾಗಿದೆ.
ಸಿಎಂ ರೇಸ್ ನಲ್ಲಿ ಡಿ.ಕೆ. ಶಿವಕುಮಾರ್ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಕಾಂಗ್ರೆಸ್ ಮೇಲೆ ಪ್ರಭುತ್ವ ಸಾಧಿಸಿದ್ದ ಸಿದ್ದರಾಮಯ್ಯ ಅವರನ್ನು ಮೀರಿ ಬೆಳೆಯುತ್ತಿದ್ದಾರೆ. ಇದಕ್ಕೆ ಅನೇಕ ಕಾರಣ ಮತ್ತು ಉದಾಹರಣೆಗಳನ್ನು ಲೆಕ್ಕಕ್ಕೆ ಹಾಕಬಹದು.
ಗುಜರಾತ್ ಶಾಸಕರ ಪ್ರಕರಣ : ರಾಜ್ಯ ಸಭಾ ಚುನಾವಣೆ ವೇಳೆ ಆಪರೇಷನ್ ಕಮಲಕ್ಕೆ ಹೆದರಿ ಗುಜರಾತ್ ನಿಂದ ರಾಜ್ಯಕ್ಕೆ ಅಥವಾ ಕರ್ನಾಟಕಕ್ಕೆ ಆಗಮಿಸಿದ್ದ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆಶ್ರಯ ನೀಡಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮುಖಭಂಗ ಆಗುವುದನ್ನು ತಪ್ಪಿಸಿದ್ದು ಇದೇ ಡಿ.ಕೆ ಶಿವಕುಮಾರ್. ಈ ಸಂದರ್ಭದಲ್ಲಿ ಇದೇ ಡಿಕೆ ಶಿವಕುಮಾರ್ ಕಾಂಗ್ರೆಸ್ ಹೈ ಕಮಾಂಡ್ ವಿಶ್ವಾಸ ಗಳಿಸಿಕೊಂಡರು
ಮೈತ್ರಿ ಸರ್ಕಾರ ಸ್ಥಾಪನೆ : ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡುವ ವೇಳೆ ಸಾಕಷ್ಟು ಸಮಸ್ಯೆ ಎದುರಾಗಿದ್ದು, ಈ ವೇಳೆ ಬಿಜೆಪಿ ತೆರಳುತ್ತಾರೆ ಎನ್ನುವ ಗುಮಾನಿಯಲ್ಲಿದ್ದ ಆನಂದ್ ಸಿಂಗ್ ಅವರನ್ನು ರಕ್ಷಿಸಿ ಮರಳಿ ಕರೆತರುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಪ್ರತಾಪ್ ಗೌಡ ಪಾಟೀಲ್ ರನ್ನೂ ಕೂಡ ಜೊತೆಯಲ್ಲಿ ಸೇರಿಸಿಕೊಂಡು ಕರೆತಂದಿದ್ದು ಇದೇ ಡಿ.ಕೆ ಶಿವಕುಮಾರ್.
ರಾಮನಗರ ಉಪ ಚುನಾವಣೆ : ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದಲೇ ನಿವೃತ್ತಿಯಾಗುವಲ್ಲಿ ಪಾತ್ರವಹಿಸಿದ್ದನ್ನು ಅಲ್ಲಗಳೆಯುವಂತಿಲ್ಲ.
ಬದಲಾದರೆ ಡಿಕೆಶಿ ಸಿಎಂ : ಕಾಂಗ್ರೆಸ್ ಬೇಷರತ್ತಾಗಿ ಬೆಂಬಲ ನೀಡಿದ್ದರೂ ಮೈತ್ರಿ ಸರ್ಕಾರದ ಮೇಲೆ ತನ್ನದೇ ಆದ ಹಿಡಿತ ಹೊಂದಿದೆ. ಮೈತ್ರಿ ಸರ್ಕಾರಕ್ಕೆ ಯಾವ ಅಡಚಣೆ ಇಲ್ಲದೇ ಇದ್ದರೂ ಸಹ ಉಪ ಚುನಾವಣಾ ಫಲಿತಾಂಶ ಡಿಕೆಶಿ ಮತ್ತು ಕಾಂಗ್ರೆಸ್ ಗೆ ಹೊಸ ಚೈತನ್ಯ ನೀಡಿದ್ದು ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಸಂಭವಿಸಿದ್ದೇ ಆದಲ್ಲಿ ಕಾಂಗ್ರೆಸ್ ಕಡೆಯಿಂದ ಸಿಎಂ ರೇಸ್ ನಲ್ಲಿ ಡಿಕೆಶಿ ಹೆಸರು ಮೊದಲಿರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.