ಬಿಜೆಪಿ ಭದ್ರಕೋಟೆಯನ್ನ ಕಾಂಗ್ರೆಸ್ ಛಿದ್ರಗೊಳಿಸಿದ್ದು, ಕಾಂಗ್ರೆಸ್ ನ ವಿ.ಎಸ್ ಉಗ್ರಪ್ಪ ದಾಖಲೆ ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ. ಆದ್ರೆ, ತನ್ನ ಕೋಟೆಯಲ್ಲಿಯೇ ಬಿಜೆಪಿಗೆ ಹೀನಾಯ ಸೋಲಾಗಿದ್ದು, ಇದಕ್ಕೆ ಕಾರಣಗಳಿ ಇಲ್ಲಿವೆ.
ಬಳ್ಳಾರಿ, (ನ. 06): ಬಿಜೆಪಿ ಭದ್ರಕೋಟೆ ಎನಿಸಿರುವ ಗಣಿನಾಡು ಬಳ್ಳಾರಿ ಕೋಟೆಗೆ ಹಂತ-ಹಂತವಾಗಿ ಕಾಂಗ್ರೆಸ್ ಲಗ್ಗೆ ಇಡುತ್ತಿದೆ.
2018ರ ವಿಧಾನಸಭೆಯಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಪಾರಮ್ಯ ಮೆರೆದಿದ್ದ ಕಾಂಗ್ರೆಸ್, ಇದೀಗ ಲೋಕಸಭಾ ಉಪಚುನಾವಣೆಯಲ್ಲೂ ತನ್ನ ಅಧಿಪತ್ಯವನ್ನ ಮುಂದುವರೆಸಿದೆ.
ಜಮಖಂಡಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾದ 10 ಅಂಶಗಳು..!
ಬಿಜೆಪಿಯ ಮಾಸ್ ಲೀಡರ್ ಎಂದೇ ಬಿಂಬಿತರಾಗಿರುವ ಶ್ರೀರಾಮುಲು ಅವರ ರಾಜೀನಾಮೆಯಿಂದಾಗಿ ತೆರವಾಗಿದ್ದ ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ, ಕಾಂಗ್ರೆಸ್ ನ ವಿ.ಎಸ್ ಉಗ್ರಪ್ಪ ದಾಖಲೆಯ ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಸ್ವಾತಂತ್ರ್ಯ ಬಂದಾಗಿನಿಂದ 2000ದ ವರೆಗೆ ಬಳ್ಳಾರಿ ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ಆದರೆ ಕಳೆದ ಮೂರು ಚುನಾವಣೆಯಲ್ಲಿ ಬಿಜೆಪಿ ಕೈ ಸೇರಿತ್ತು. ಹಾಗಾಗಿ, ಮತ್ತೆ ಈ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಹಾಗೂ ರಾಮುಲುಗೆ ಬ್ರೇಕ್ ಹಾಕಲು ಕಾಂಗ್ರೆಸ್‌ನ ದಿಗ್ಗಜರು ಚುನಾವಣಾ ಅಖಾಡಕ್ಕೆ ಇಳಿದಿದ್ದರು.
ಅದರಲ್ಲಿ ಡಿ.ಕೆ.ಶಿವಕುಮಾರ್ ತಂತ್ರಗಾರಿಕೆಗಳು ವರ್ಕೌಟ್ ಆಗಿವೆ. ಈ ಮೂಲಕ ಬಿಜೆಪಿ ಕೋಟೆಯನ್ನ ಛಿದ್ರ-ಛಿದ್ರ ಮಾಡಿದ್ದಾರೆ. ಇನ್ನು ಸ್ವ ಕ್ಷೇತ್ರದ ಈ ಸೋಲಿನ ಹೊಣೆಯನ್ನು ಸ್ವಯಃ ಮೊಳಕಾಲ್ಮೂರು ಶಾಸಕ ಬಿ ಶ್ರೀರಾಮುಲು ಹೊತ್ತುಕೊಂಡಿದ್ದಾರೆ.
ಆದರೆ, ಬಳ್ಳಾರಿಯಲ್ಲಿ ಬಿಜೆಪಿ ಮಕಾಡೆ ಮಲಗಿದ್ದೇಕೆ ಎನ್ನುವುದಕ್ಕೆ ಕಾರಣಗಳು ಹುಡುಕುತ್ತಾ ಹೋದರೆ ಇಂತಿವೆ.
1) 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕಾಂಗ್ರೆಸ್ ಶಾಸಕರು ಇರುವುದು ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಿಯೂ ಎಡವದೇ ಪರಿಸ್ಥಿತಿ ನಿಭಾಯಿಸಿದ್ದು.
2) ಬಿಜೆಪಿಯಲ್ಲಿ ಒಗ್ಗಟ್ಟಿನಲ್ಲಿ ಬಲವಿಲ್ಲ. ಶ್ರೀರಾಮುಲು ಏಕಾಂಗಿ ಹೋರಾಟ.
3) ಮೈತ್ರಿ ಸರ್ಕಾರದ ಟ್ರಬಲ್ ಶೂಟರ್ ಎಂದೇ ಬಿಂಬಿತರಾಗಿರುವ ಸಚಿವ ಡಿ. ಕೆ ಶಿವಕುಮಾರ್ ತಂತ್ರಗಾರಿಕೆಗಳು.
4) ಬಳ್ಳಾರಿ ನಮ್ಮದು, ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಬಿಜೆಪಿಯ ಅತಿಯಾದ ನಂಬಿಕೆ.
4) ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜನಾರ್ಧನ ರೆಡ್ಡಿಯ ಅಸಂಬದ್ಧ ಹೇಳಿಕೆ.
5) ಶ್ರೀರಾಮುಲುಗೆ ನೇರವಾಗಿ ಟಾಂಗ್ ಕೊಡಲು ವಾಲ್ಮೀಕಿ ಸಮುದಾಯದ ವಿ.ಎಸ್.ಉಗ್ರಪ್ಪರನ್ನ ಅಭ್ಯರ್ಥಿಯಾಗಿಸಿದ್ದು ಬಿಜೆಪಿಯ ಗೇಮ್ ಪ್ಲ್ಯಾನ್ ಉಲ್ಟಾಪಲ್ಟಾ ಮಾಡಿದೆ.
6) ಆಯಾ ಜಾತಿಯ ಸಮುದಾಯಕ್ಕೆ ಅನುಗುಣವಾಗಿ ಕಾಂಗ್ರೆಸ್ ಉಸ್ತುವಾರಿಗಳ ನೇಮಕ.
7) ಕಾಂಗ್ರೆಸ್ ಗೆ ಅಭ್ಯರ್ಥಿಗೆ ಜೆಡಿಎಸ್ ಸಂಪೋರ್ಟ್