Minister Eshwarappa Controversy: ಕಾಡು ಪ್ರಾಣಿಗಳಿಗೆ ಸಿಂಹ ಕಂಡ್ರೆ ಭಯ, ಕೈ ನಾಯಕರಿಗೆ ಟಾಂಗ್ ಕೊಟ್ಟ ಈಶ್ವರಪ್ಪ

By Suvarna NewsFirst Published Feb 22, 2022, 5:38 PM IST
Highlights

 ಡಿಕೆಶಿ, ಸಿದ್ದರಾಮಯ್ಯ ಪದೇ ಪದೇ ತನ್ನ ಹೆಸರು ಉಲ್ಲೇಖಿಸಿ ವಾಗ್ದಾಳಿ ನಡೆಸುವ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು ಕಾಡು ಪ್ರಾಣಿಗಳಿಗೆ ಸಿಂಹ ಕಂಡ್ರೆ ಭಯ. ಹಾಗಾಗಿ, ಕಾಡು ಪ್ರಾಣಿಗಳು ಸಿಂಹ ಕಂಡು ಹೆದರಿವೆ ಎಂದು ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರು (ಫೆ.22): ಕಾಡು ಪ್ರಾಣಿಗಳಿಗೆ ಸಿಂಹ ಕಂಡ್ರೆ ಭಯ. ಹಾಗಾಗಿ, ಕಾಡು ಪ್ರಾಣಿಗಳು ಸಿಂಹ ಕಂಡು ಹೆದರಿವೆ ಎಂದು ಡಿಕೆಶಿ, ಸಿದ್ದರಾಮಯ್ಯ ಪದೇ ಪದೇ ತನ್ನ ಹೆಸರು ಉಲ್ಲೇಖಿಸಿ ವಾಗ್ದಾಳಿ ನಡೆಸುವ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪ  (KS Eshwarappa) ಕಾಂಗ್ರೆಸ್​ ಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ. ಈ ಹೇಳಿಕೆ ಮೂಲಕ ತನ್ನನ್ನು ತಾನು ಸಿಂಹ ಎಂದು ಸಮರ್ಥಿಸಿಕೊಂಡಿರುವ ಈಶ್ವರಪ್ಪ, ಯಾರಿಗೂ ಹೆದರಲ್ಲ ಎಂಬ ಸಂದೇಶ ನೀಡಿದಂತಾಗಿದೆ. ರಾಷ್ಟ್ರಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ  ಕಾಂಗ್ರೆಸ್ (Congress) ಅಹೋರಾತ್ರಿ ಧರಣಿ ನಡೆಸಿತ್ತು. ವಿಧಾನಸೌಧದಲ್ಲಿ ಮಾತನಾಡಿದ ಈಶ್ವರಪ್ಪ ಕಾಂಗ್ರೆಸ್ ನವರು ಪದೇ ಪದೇ ನನ್ನ ಹೆಸರು ಹೇಳಿ ಜಪ ಮಾಡ್ತಿದ್ದಾರೆ ಎಂದಿದ್ದಾರೆ.

ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರು ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿದ ವಿಚಾರಕ್ಕೆ ಸಂಬಂಧಿಸಿದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ. ರಾಷ್ಟ್ರ ಧ್ವಜದ ಬಗ್ಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಡಿಕೆಶಿ ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜ ಇಳಿಸಿ, ಭಗವಾಧ್ವಜ ಏರಿಸಿದ್ದರೆಂದು ಹೇಳಿದ್ರು, ಹಾರಿಸ್ತೇನೆ ಅಂತ ಹೇಳಿದ್ದೀನಾ? ಮುಂದೆ ಹಾರಿಸಬಹುದು ಅಂತ ಹೇಳಿದ್ದೇನೆ. ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ತಕ್ಷಣ ರಾಷ್ಟ್ರ ದ್ರೋಹಿ ಅಂತ ಅಂದೂ ಹೇಳಿದ್ದೆ, ಇಂದೂ ಹೇಳಿದ್ದೇನೆ ಎಂದು  ತಮ್ಮ ಹೇಳಿಕೆಯನ್ನು ಈಶ್ವರಪ್ಪ ಸಮರ್ಥಿಸಿಕೊಂಡರು.

Latest Videos

ಬುಲಾವ್ ನೀಡಿಲ್ಲ: ಇನ್ನು ಇದೇ ವೇಳೆ ಕುವೆಂಪು ವಿವಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ರಾಜಭವನಕ್ಕೆ ಹೋಗ್ತಿದ್ದೇನೆ ಅಷ್ಟೇ ಬಿಟ್ಟು ಬುಲಾವ್ ನೀಡಿಲ್ಲ ಎಂದು ಇದೇ ವೇಳೆ ಹೇಳಿದರು.

Shivamogga ಮುಸಲ್ಮಾನ ಗೂಂಡಾಗಳು ಹಿಂದೂ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ, ಈಶ್ವರಪ್ಪ ಗಂಭೀರ ಆರೋಪ 

ನಡ್ಡಾರಿಂದ ಈಶ್ವರಪ್ಪಗೆ ಛೀಮಾರಿ: ದೆಹಲಿಯ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ತುತ್ತಾಗಿದ್ದ ಕರ್ನಾಟಕ ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಛೀಮಾರಿ ಹಾಕಿದ್ದರು.

ಈಶ್ವರಪ್ಪ ಹೇಳಿಕೆ ಖಂಡಿಸಿ ಅವರನ್ನು ಸಂಪುಟದಿಂದಲೇ ವಜಾ ಮಾಡುವಂತೆ ಒತ್ತಾಯಿಸಿ ಉಭಯ ಸದನಗಳಲ್ಲೂ ಪ್ರತಿಪಕ್ಷ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿರುವ ಬೆನ್ನಲ್ಲೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನಡ್ಡಾ ಮೌನ ಮುರಿದು ಈಶ್ವರಪ್ಪರವರ ಹೇಳಿಕೆ ಒಪ್ಪುವಂತಹದ್ದಲ್ಲ ಎಂದಿದ್ದರು.

ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ಅವರು, ಸಚಿವ ಈಶ್ವರಪ್ಪರವಿಗೆ ದೂರವಾಣಿ ಕರೆ ಮಾಡಿ ಛೀಮಾರಿ ಹಾಕಿದ್ದೇನೆ. ಅಲ್ಲದೆ ಕರ್ನಾಟಕದಲ್ಲಿ ಹಿಜಾಬ್ ವಿವಾದವನ್ನು ಪ್ರತಿಪಕ್ಷಗಳೇ ಹೆಚ್ಚಿಸುತ್ತಿವೆ. ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನಿಟ್ಟುಕೊಂಡು ಚುನಾವಣೆಯಲ್ಲಿ ಹೋರಾಟ ಮಾಡುತ್ತಿದ್ದೇವೆ. ಆದರೆ, ಪ್ರತಿಪಕ್ಷಗಳು ಹಿಜಾಬ್ ವಿವಾದ ದೊಡ್ಡದು ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದ್ದರು.

Karnataka Assembly Session: ಮಾಧುಸ್ವಾಮಿ ಹೇಳಿಕೆಯಿಂದ ಸದನದಲ್ಲಿ ಕೋಲಾಹಲ

ಈಶ್ವರಪ್ಪಗೆ ಜೆಪಿ ನಡ್ಡಾ ಎಚ್ಚರಿಕೆ ನೀಡಿದ್ದಾರೆ, ಆದರೂ ಬಿಜೆಪಿ ಭಂಡತನ ಎಂದ ಡಿಕೆ ಶಿವಕುಮಾರ್!: ನಮಗೆ ರಾಷ್ಟ್ರಧ್ವಜ ಮುಖ್ಯ. ಸುಖಾಸುಮ್ಮನೆ ಹೇಳಿಕೆ ನೀಡಿ ಮರ್ಯಾದೆ ತೆಗೆಯಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇರವಾಗಿ ಈಶ್ವರಪ್ಪಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹಕಲು ಬಾಯಿ ಈಶ್ವರಪ್ಪ ಮಾತಿಗೆ ಅವರ ಪಕ್ಷದವರೇ ತಿರುಗಿಬಿದ್ದಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

 

click me!