ಕಾರ್ಯಕರ್ತನಿಗೆ ಹೊಡೆದ ಡಿಕೆಶಿ: ಇದೆಲ್ಲ ರೌಡಿ ಲಕ್ಷಣ ಅಲ್ಲದೆ ಮತ್ತೇನು? ಎಂದ ಬಿಜೆಪಿ

Published : Jul 10, 2021, 11:57 AM ISTUpdated : Jul 10, 2021, 01:22 PM IST
ಕಾರ್ಯಕರ್ತನಿಗೆ ಹೊಡೆದ ಡಿಕೆಶಿ: ಇದೆಲ್ಲ ರೌಡಿ ಲಕ್ಷಣ ಅಲ್ಲದೆ ಮತ್ತೇನು? ಎಂದ ಬಿಜೆಪಿ

ಸಾರಾಂಶ

* ಡಿಕೆಶಿ ಅವರೇ ನೀವು ಹೊಡಿ, ಬಡಿ ರಾಜಕಾರಣದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಹೊರಟಿದ್ದೀರಾ? * ಸಾರ್ವಜನಿಕವಾಗಿ ಹಲ್ಲೆ ಮಾಡುವ ಡಿಕೆಶಿ ಬಳಿ ಜನಸಾಮಾನ್ಯರು ಹೋದರೆ ಗತಿಯೇನು? * ಕಾರ್ಯಕರ್ತನೋರ್ವ ಹೆಗಲ ಮೇಲೆ ಕೈ ಹಾಕಿದಕ್ಕೆ ರಪಾರನೆ ತಲೆಗೆ ಬಾರಿಸಿದ್ದ ಡಿಕೆಶಿ   

ಬೆಂಗಳೂರು(ಜು.10): ಕೆಪಿಸಿಸಿ ಅಧ್ಯಕ್ಷರ ಹದ್ದು ಮೀರಿದ ವರ್ತನೆಗಳು ಇತ್ತೀಚೆಗೆ ಮಿತಿ ಮೀರುತ್ತಿದೆ. ನಾನು ಮಾತಾಡುವಾಗ ಮಧ್ಯ ಮಾತಾಡಿದ್ರೆ ಒದ್ದು ಹೊರಹಾಕುವೆ ಎಂದು ಇತ್ತೀಚೆಗೆ ಡಿ.ಕೆ. ಶಿವಕುಮಾರ್‌ ಗದರಿಸಿದ್ದರು. ಸಾರ್ವಜನಿಕವಾಗಿ ಹೊಡೆಯುವುದು, ಒದೆಯೋದು, ಕಾರ್ಯಕರ್ತರ ಮೊಬೈಲ್‌ ಕಿತ್ತೆಸೆಯುವುದು ಇದೆಲ್ಲ ರೌಡಿ ಲಕ್ಷಣ ಅಲ್ಲದೆ ಮತ್ತೇನು? ಎಂದು ಬಿಜೆಪಿ ಖಾರವಾಗಿ ಪ್ರತಿಕ್ರಿಯೆಸಿದೆ.

"

 

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ ಎಂ ದೊಡ್ಡಿಗೆ ಡಿಕೆ ಶಿವಕುಮಾರ್ ಭೇಟಿ ಕೊಟ್ಟಾಗ, ಕಾಂಗ್ರೆಸ್ ಕಾರ್ಯಕರ್ತನೊಬ್ಬ ಡಿಕೆಶಿ ಹಿಂದೆ ಬರುತ್ತಿದ್ದರು. ಡಿಕೆಶಿ ಹೆಗಲ ಮೇಲೆ ಕೈ ಹಾಕಿದ ಎಂದು ಸಿಟ್ಟಿಗೆದ್ದ ಡಿಕೆಶಿ, ರಪಾರನೆ ತಲೆಗೆ ಬಾರಿಸಿದ್ದಾರೆ. ತಬ್ಬಿಬ್ಬಾದ ಕಾರ್ಯಕರ್ತ ಅಲ್ಲಿಂದ ಹೊರಟು ಹೋಗಿದ್ದರು. 

ಮಂಡ್ಯ: ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಬೆಂಬಲಿಗನಿಗೆ ಡಿಕೆಶಿ ಏಟು

 

ಈ ಘಟನೆಗೆ ಸಂಬಂಧಿಸಿದಂತೆ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಘಟಕ  ಕಾರ್ಯಕರ್ತ ಹತ್ತಿರ ಬಂದ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಹಲ್ಲೆ ಮಾಡುವ ಡಿಕೆಶಿ ಅವರ ಬಳಿ ಜನಸಾಮಾನ್ಯರು ಹೋದರೆ ಗತಿಯೇನು?. ಕೆಪಿಸಿಸಿ ಅಧ್ಯಕ್ಷರೇ, ನೀವು ಹೊಡಿ, ಬಡಿ ರಾಜಕಾರಣದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಹೊರಟಿದ್ದೀರಾ? ಎಂದು ಪ್ರಶ್ನಿಸಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿವೃತ್ತಿ ಹೊಂದುವುದು ಇಷ್ಟವಿರಲಿಲ್ಲ, ಆದರೆ.. ರಾಷ್ಟ್ರಪತಿ ಸಹಾಯಕ National Crush ರಿಷಬ್​ ಸಿಂಗ್​ ಹೇಳಿದ್ದೇನು
ನಾಗೇಂದ್ರ ಅಷ್ಟೇ ಅಲ್ಲ; ಸದ್ಯದಲ್ಲೇ ಇನ್ನಷ್ಟು ಭ್ರಷ್ಟ ಸಚಿವರು ರಾಜೀನಾಮೆ? BSY ಹೇಳಿಕೆ ಸಂಚಲನ!