ಸಿದ್ದರಾಮಯ್ಯ ಸಾಹೇಬರು ತಮ್ಮ ಭ್ರಷ್ಟಾಚಾರದ ಸರ್ಮರ್ಥನೆ ಮಾಡಿಕೊಳ್ಳಲು ಹೋಗಿ ಅಧಿವೇಶನದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಅವರ ಸವಾಲಿಗೆ ಸೋತು ಮಂಕಾಗಿದ್ದಾರೆ: ಬಿಜೆಪಿ
ಬೆಂಗಳೂರು(ಜು.19): ರಾಜ್ಯದ ಜನರಿಗೆ 40 ಪರ್ಸೆಂಟ್ ಸುಳ್ಳು ಹೇಳಿ ಅಧಿಕಾರ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಪರ್ಸೆಂಟ್ ಭ್ರಷ್ಟರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಬಿಜೆಪಿ, ಸಿದ್ದರಾಮಯ್ಯ ಸಾಹೇಬರು ತಮ್ಮ ಭ್ರಷ್ಟಾಚಾರದ ಸರ್ಮರ್ಥನೆ ಮಾಡಿಕೊಳ್ಳಲು ಹೋಗಿ ಅಧಿವೇಶನದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಅವರ ಸವಾಲಿಗೆ ಸೋತು ಮಂಕಾಗಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಖತಂ ಎಂದ ಯೋಗೇಶ್ವರ್ : ಡಿ.ಕೆ. ಶಿವಕುಮಾರ್ ಹೇಳಿದ್ದಿಷ್ಟು
ಕಾಂಗ್ರೆಸ್ಸಿಗರು ಕುಂಬಳಕಾಯಿ ಕಳ್ಳ ಎಂದರೆ ನಾನೇ ಎಂದು ಹೆಗಲು ಮುಟ್ಟಿಕೊಂಡು ನೋಡಿದ್ದಾರೆ. ರಾಜೀನಾಮೆ ನೀಡುವುದು ಬಿಟ್ಟು ಭಂಡತನದಿಂದ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿರುವುದು ಅವರು ಭ್ರಷ್ಟರಾಗಿರುವುದಕ್ಕೆ ಸಾಕ್ಷಿ. ನಿಷ್ಠರಾಗಿದ್ದರೆ ರಾಜೀನಾಮೆ ಕೊಟ್ಟು ನಾಡಿನ ಜನತೆ ಮುಂದೆ ಸಾಬೀತುಪಡಿಸುತ್ತಿದ್ದರು ಎಂದು ಬರೆದಕೊಂಡಿದೆ.