ಅವರು ಹಿಂದೆ ಕಿತ್ತಾಡಿದ್ದರು, ನಂತರ ಒಂದಾದರು. ಈಗ ಕಿತ್ತಾಡುತ್ತಿದ್ದಾರೆ, ಮತ್ತೆ ಒಂದಾಗಲ್ಲ ಎಂಬುದು ಯಾವ ಗ್ಯಾರಂಟಿ ಎಂದು ಹೇಳುವ ಮೂಲಕ ಹೆಚ್ಡಿಕೆ - ಯೋಗೇಶ್ವರ್ ನಡುವಿನ ಅಸಮಾಧಾನಕ್ಕೆ ವ್ಯಂಗ್ಯವಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಚನ್ನಪಟ್ಟಣ(ಜು.19): ಮೈತ್ರಿ ಖತಂ ಎಂದು ಯೋಗೇಶ್ವರ್ ಬೆಂಬಲಿಗರ ಮೂಲಕ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನಾನು ಅವರ ಪಾರ್ಟಿ ವಿಚಾರಕ್ಕೆ ಎಂಟ್ರಿ ಆಗಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಅದು ಅವರ ಮಧ್ಯೆ ಇತ್ಯರ್ಥ ಆಗಬೇಕಿದೆ ಎಂದು ತಿಳಿಸಿದ್ದಾರೆ.
ನಾನು ಅಭಿವೃದ್ಧಿ ಮಾಡಲು ಬಂದಿದ್ದೇನೆ. ಈಗ ಚನ್ನಪಟ್ಟಣದಲ್ಲಿ 50 ಎಕರೆಯಷ್ಟು ಭೂಮಿ ಹುಡುಕಲಾಗಿದೆ. ಬಡವರಿಗೆ ಸೈಟ್ ಕೊಡಲು ಸರ್ವೇ ಮಾಡಿಸಲಾಗ್ತಿದೆ. ಈಗ ಅಧಿಕಾರ ಇದೇ, ಜನರಿಗೆ ಒಳ್ಳೆಯದನ್ನ ಮಾಡೋಣ ಎಂದು ಹೇಳಿದ್ದಾರೆ.
undefined
ದಮ್ಮಿದ್ದರೆ ಸಿಎಂ ವಾಲ್ಮೀಕಿ ಪ್ರಕರಣ ಸಿಬಿಐಗೆ ನೀಡಲಿ : ಸಂಸದ ರಮೇಶ ಜಿಗಜಿಣಗಿ ಸವಾಲು
ಅವರು ಹಿಂದೆ ಕಿತ್ತಾಡಿದ್ದರು, ನಂತರ ಒಂದಾದರು. ಈಗ ಕಿತ್ತಾಡುತ್ತಿದ್ದಾರೆ, ಮತ್ತೆ ಒಂದಾಗಲ್ಲ ಎಂಬುದು ಯಾವ ಗ್ಯಾರಂಟಿ ಎಂದು ಹೇಳುವ ಮೂಲಕ ಹೆಚ್ಡಿಕೆ - ಯೋಗೇಶ್ವರ್ ನಡುವಿನ ಅಸಮಾಧಾನಕ್ಕೆ ಡಿಕೆಶಿ ವ್ಯಂಗ್ಯವಾಡಿದ್ದಾರೆ.