ಸದ್ಯ ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿ ನಡೆದಿದ್ದು, ಮಂತ್ರಿ ಸ್ಥಾನಕ್ಕಾಗಿ ಸಚಿವಾಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ಈ ಬಾರಿ ಯಡಿಯೂರಪ್ಪ ಕೈಬಿಡುವುದಿಲ್ಲ ಎಂದು ಮಂತ್ರಿ ಆಕಾಂಕ್ಷಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾವೇರಿ, ಜ.11): ನಿನ್ನನ್ನ ಎಂಎಲ್‌ಸಿ ಮಾಡಿ ನಿನಗೆ ಮಂತ್ರಿ ಸ್ಥಾನ ನೀಡುತ್ತೇನೆ ಎಂದು ಸಿಎಂ ಮಾತುಕೊಟ್ಟಿದ್ದಾರೆ. ಹೀಗಾಗಿ ನನ್ನನ್ನ ಈ ಬಾರಿ ಯಡಿಯೂರಪ್ಪ ಕೈಬಿಡುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ಸಾಕಷ್ಟು ಅಪಪ್ರಚಾರಗಳು ನಡೆದಿದ್ದವು. ಏನೇ ಅಪಪ್ರಚಾರ ಮಾಡಿದರೂ ಸಿಎಂ ಯಡಿಯೂರಪ್ಪ ಈ ಬಾರಿ ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಸ್ಪಷ್ಟಪಡಿಸಿದರು.
ನನ್ನನ್ನು ಸರ್ಕಾರದಿಂದ ಕೈಬಿಡುವಷ್ಟು ಧೈರ್ಯ ಯಾರಿಗಿದೆ ಸ್ವಾಮಿ: ಸಚಿವರ ಖಡಕ್ ಮಾತು
ನಿನ್ನ ಎಂಎಲ್‌ಸಿ ಮಾಡಿ ನಿನಗೆ ಮಂತ್ರಿ ಸ್ಥಾನ ನೀಡುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಅದೇ ರೀತಿ ಅವರು ನಡೆದುಕೊಳ್ಳುತ್ತಾರೆ ಎಂಬ ಭರವಸೆ ನನಗಿದೆ ಎಂದರು.
ನಾನು ಎರಡು ಬಾರಿ ಮಂತ್ರಿಯಾಗಿದ್ದವನು. ಈ ಬಾರಿ ಸಂಪುಟದಲ್ಲಿ ಉತ್ತಮ ಖಾತೆ ಕೊಟ್ಟರೆ ಜನ ಸೇವೆ ಮಾಡಲು ನನಗೆ ಅನುಕೂಲವಾಗುತ್ತದೆ. ಯಡಿಯೂರಪ್ಪ ಸರ್ಕಾರಕ್ಕೆ ಹೆಸರು ತರುವಂಥ ಕೆಲಸವನ್ನು ನಾನು ಮಾಡುತ್ತೇನೆ. ಉತ್ತಮ ಖಾತೆ ನೀಡುವುದು ಸಿಎಂ ಪರಮಾವಧಿ, ನನಗೆ ಉತ್ತಮ ಖಾತೆ ಸಿಗುತ್ತದೆ ಎಂಬ ಭರವಸೆಯಿದೆ ಎಂದು ಹೇಳಿದರು.