ಕರ್ನಾಟಕ ಬಿಜೆಪಿಯ ಯುವ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಅವರು ಟಾಲಿವುಡ್ ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ರನ್ನು ಭೇಟಿ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಈ ಭೇಟಿ ಯಾಕೆ..? ಇದರ ಹಿಂದಿನ ಉದ್ದೇಶವೇನಿರಬಹುದು?
ಬೆಂಗಳೂರು/ಹೈದರಾಬಾದ್, [ಜ.05]: ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಟಾಲಿವುಡ್ ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ರನ್ನು ಭೇಟಿ ಮಾಡಿದ್ದಾರೆ.
ಇದು ವೈಯಕ್ತಿಕ ಭೇಟಿಯೋ? ಅಥವಾ ರಾಜಕೀಯ ಭೇಟಿಯೋ ಎಂಬುದು ಮಾತ್ರ ತಿಳಿದುಬಂದಿಲ್ಲ. ಅಲ್ಲದೆ, ಭೇಟಿ ಮಾಡಿದ ಸ್ಥಳದ ಬಗ್ಗೆಯು ಮಾಹಿತಿ ನೀಡಿಲ್ಲ. ಆದರೆ, ಭೇಟಿಯಾಗಿರುವುದನ್ನು ಮಾತ್ರ ಸಂಸದ ಪ್ರತಾಪ್ ಸಿಂಹ ಟ್ವಿಟರ್ನಲ್ಲಿ ಖಚಿತ ಪಡಿಸಿದ್ದು, ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
ಕಾಲಭೈರವನ ಭಕ್ತರ ಬಗ್ಗೆ ನಿಮಗ್ಯಾಕೆ ಉರಿ, ಮೋದಿ ಗೇಲಿ ಮಾಡಿದ ಸಿದ್ದುಗೆ ಪ್ರತಾಪ್ ಡಿಚ್ಚಿ
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿಗಳ ಮೂಡಿಸಲು ಬಿಜೆಪಿ ಸೆಲಬ್ರೆಟಿಗಳನ್ನು ಬಳಸಿಕೊಳ್ಳು ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದಲ್ಲಿ ಸಿಎಎ ಬಗ್ಗೆ ಅರಿವು ಮೂಡಿಸಲು ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ರಾ ಎನ್ನುವ ಪ್ರಶ್ನೆಗಳು ಸಹ ಉದ್ಭವಿಸಿವೆ.
ಅಷ್ಟೇ ಅಲ್ಲದೇ ಪವನ್ ಕಲ್ಯಾಣ್ ಹಾಗೂ ಕರ್ನಾಟಕ ರಾಜಕೀಯಕ್ಕೂ ನಂಟಿದೆ.ಆಂಧ್ರ ಪ್ರದೇಶದ ಗಡಿ ಭಾಗವಾದ ಕೋಲಾರ ಜಿಲ್ಲೆಗೆ ಆಗಾಗ ಬಂದು ಹೋಗುತ್ತಾರೆ. ಮತ್ತು ಚುನಾವಣೆ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
ಕೋಲಾರ: ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ತೆಲುಗಿನ ಖ್ಯಾತ ನಟ
ಪವನ್ ಕಲ್ಯಾಣ್ ಜತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಪ್ರತಾಪ್ ಸಿಂಹ, ನನ್ನು ಕಾಲೇಜು ದಿನಗಳಲ್ಲಿ ಪವನ್ ಕಲ್ಯಾಣ್ ಅವರ ಸಿನಿಮಾಗಳನ್ನು ವೀಕ್ಷಿಸುತ್ತಿದ್ದೆ. ಅಲ್ಲದೆ, ಅವರನ್ನು ತುಂಬಾ ಇಷ್ಟಪಡುತ್ತಿದ್ದೆ. ಇಂದು ನನಗೆ ಮತ್ತು ತೇಜಸ್ವಿ ಸೂರ್ಯರಿಗೆ ಪವನ್ ಕಲ್ಯಾಣ್ರನ್ನು ಭೇಟಿ ಮಾಡಿ ಮಾತನಾಡುವ ಅವಕಾಶ ಲಭಿಸಿತು. ಧನ್ಯವಾದಗಳು ಪವನ್ ಕಲ್ಯಾಣ್ ಮತ್ತು ವಿಶ್ವ ಗಾರು ಎಂದು ಬರೆದುಕೊಂಡಿದ್ದಾರೆ.
I used to watch his movies n adore him when i was in college. Today myself n had the opportunity to meet n talk to him. Thank u Sir n Vishwa Gaaru! pic.twitter.com/BHJ41hLfZ4
— Pratap Simha (@mepratap)