'ಸಿದ್ದರಾಮಯ್ಯ ನೆಂಟಸ್ಥನ ಏನಿದ್ದರೂ ಜಮೀರ್ ಬಾಂಧವರ ಜೊತೆ ಮಾತ್ರ'

Published : Jul 14, 2022, 05:33 PM IST
'ಸಿದ್ದರಾಮಯ್ಯ ನೆಂಟಸ್ಥನ ಏನಿದ್ದರೂ ಜಮೀರ್ ಬಾಂಧವರ ಜೊತೆ ಮಾತ್ರ'

ಸಾರಾಂಶ

ಕರ್ನಾಟಕ ಬಿಜೆಪಿ ಮತ್ತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ. ಸಿದ್ದರಾಮಯ್ಯ ನೆಂಟಸ್ಥನ ಏನಿದ್ದರೂ ಜಮೀರ್ ಬಾಂಧವರ ಜೊತೆ ಮಾತ್ರ ಟ್ವಟ್ಟರ್‌ನಲ್ಲಿ ಬಿಜೆಪಿ ಟೀಕಿಸಿದೆ.

ಬೆಂಗಳೂರು, (ಜುಲೈ.14): ಕೇಸರಿ ಶಾಲು, ಕುಂಕುಮ‌ ಇಟ್ಟುಕೊಂಡವರನ್ನು ಕಂಡರೆ ಸಿದ್ದರಾಮಯ್ಯ ಅವರಿಗೆ ಭಯ. ಹಿಂದೂ ವಿರೋಧಿ ಸಿದ್ದರಾಮಯ್ಯ ಅವರ ನಿಷ್ಠೆ- ನೆಂಟಸ್ಥನ ಏನಿದ್ದರೂ ಜಮೀರ್ ಅಹ್ಮದ್ ಖಾನ್ ಬಾಂಧವರ ಜೊತೆ ಮಾತ್ರ ಎಂದು ಬಿಜೆಪಿ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಪಕ್ಷ ಪೂಜೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿಲುವು, ಇತರರಿಗೆ ಇಲ್ಲದಂತಿದೆ. ಎಲ್ಲರಿಗೂ ವ್ಯಕ್ತಿ ಪೂಜೆಯೇ ಬೇಕು. ವ್ಯಕ್ತಿ ಪೂಜೆಯ ಪ್ರಸಾದ, ನೈವೇದ್ಯ ಎಲ್ಲವೂ ಬೇಕು. ಕೆಪಿಸಿಸಿ ಅಧ್ಯಕ್ಷರಿಗೆ ಚಿಪ್ಪು ಮಾತ್ರ! ಡಿಕೆಶಿ ಈಗ ತನ್ನ ಮನೆಯಲ್ಲೇ ಅತಂತ್ರರಾಗುತ್ತಿದ್ದಾರೆ!

ಸಿದ್ದರಾಮೋತ್ಸವಕ್ಕೆ ನನನ್ನು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ನಾನು ಅತಿಥಿಯಾಗಿ ಭಾಗವಹಿಸುತ್ತೇನೆ, ಮೂಲ ಕಾಂಗ್ರೆಸ್ಸಿಗರನ್ನು ಪಕ್ಷದ ಮನೆಯಲ್ಲೇ ಅತಿಥಿಯಾಗಿ ಮಾಡುವ ಯೋಜನೆಯೇ ಸಿದ್ದರಾಮೋತ್ಸವ! ಮಾನ್ಯ ಡಿಕೆ ಶಿವಕುಮಾರ್ ಅವರೇ ನಡು ನೆತ್ತಿಯ ಮೇಲೆ ಕಡುಕತ್ತಿಯ ಪ್ರಹಾರದ ಎಚ್ಚರಿಕೆ ಇದು ಎಂದು ಬಿಜೆಪಿ ಟೀಕಿಸಿದೆ.

ಸಿದ್ದು ಅವರನ್ನು ಮನೆಗೆ ಕಳಿಸುವ ಉತ್ಸವ ಸಿದ್ದರಾಮೋತ್ಸವ: ಅಶ್ವತ್ಥ್‌ ನಾರಾಯಣ್‌

ಸಂಸದ ಡಿಕೆ ಸುರೇಶ್ ಅವರು, ಸಿದ್ದರಾಮೋತ್ಸವ ಯಾರಿಗೋ ನಾಯಕತ್ವ ನೀಡಿದಂತೆ ಬಿಂಬಿತವಾಗಬಾರದು ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮೋತ್ಸವ ಕಾಂಗ್ರೆಸ್‌ ನಿರ್ನಾಮಕ್ಕೆ ಮುನ್ನುಡಿ ಬರೆಯಲಿದೆ. ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಅಹಿಂದ ಸಮಾವೇಶಕ್ಕೆ ಹೊರಟಿದ್ದರು. ಎಷ್ಟೇ ನಿರ್ಬಂಧ ವಿಧಿಸಿದ್ದರೂ ಲಕ್ಷ್ಮಣ ರೇಖೆ ದಾಟಿ ಹೊರ ಬಂದರು ಎಂದು ಟೀಕಿಸಿದೆ.

ಈಗ ಕಾಂಗ್ರೆಸ್ ಲಕ್ಷ್ಮಣ ರೇಖೆ ದಾಟಲು ಸಿದ್ದರಾಮೋತ್ಸವ ಆಯೋಜಿಸುತ್ತಿದೆಯೇ? ಕಾಂಗ್ರೆಸ್ ಮುಕ್ತ ಕರ್ನಾಟಕದತ್ತ ಸಿದ್ದರಾಮಯ್ಯ ಹೆಜ್ಜೆ ಇಟ್ಟಿದ್ದಾರೆಯೇ? ಕಾಂಗ್ರೆಸ್ ನಾಯಕರ ಬೌದ್ಧಿಕ ದಾರಿದ್ರ್ಯಕ್ಕೆ ಶೇಮ್ ಶೇಮ್! ದೇಶದ ಸ್ವಾತಂತ್ರ್ಯಕ್ಕಾಗಲಿ, ಯಾವುದೇ ಜನಪರ ಹೋರಾಟದಲ್ಲಾಗಲಿ ಭಾಗಿಯಾಗದ ಶುದ್ಧ ಅಧಿಕಾರದಾಹಿಯ ಜನ್ಮದಿನವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಜೊತೆಗೆ ಸಮೀಕರಿಸಲು ಹೊರಟವರಿಗೆ ಸ್ವಾತಂತ್ರ್ಯದ ಬೆಲೆ ಗೊತ್ತೇ? ಎಂದು ಬಿಜೆಪಿ ಪ್ರಶ್ನಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ
ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌