ಮೋದಿ, ಬೊಮ್ಮಾಯಿ ಜನಪರ ಆಡಳಿತ ಮೆಚ್ಚಿ ಬಿಜೆಪಿ ಸೇರಿದ ಕಾಂಗ್ರೆಸ್‌ ಕಾರ್ಯಕರ್ತರು

By Kannadaprabha News  |  First Published Jul 14, 2022, 12:16 PM IST

ಪ್ರಧಾನಿ ನರೇಂದ್ರ ಮೋದಿಯವರು ರೈತ, ಕಾರ್ಮಿಕ, ಮಹಿಳೆ, ಬಡ ಜನರ ಪರ ಅನೇಕ ಜನಪರ ಯೋಜನೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಿದ್ದಾರೆ 


ಬೆಳಗಾವಿ(ಜು.14):  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಜನಪರ ಮತ್ತು ಅಭಿವೃದ್ಧಿ ಪರ ಆಡಳಿತ ಮೆಚ್ಚಿ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡಿದ್ದು, ಮುಂದೆ ಇನ್ನಷ್ಟು ಗ್ರಾಪಂ ಸದಸ್ಯರು, ಪದಾಧಿಕಾರಿಗಳು ಕೂಡ ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ರಾಜೇಶ್‌ ನೇರ್ಲಿ ಹೇಳಿದರು.

ಅವರು ಯಮಕನಮರಡಿ ಕ್ಷೇತ್ರದ ಪಾಚ್ಛಾಪುರ ಜಿಪಂ ವ್ಯಾಪ್ತಿಯ ರಾಜಕಟ್ಟಿಗ್ರಾಮ ಮುಖಂಡರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ರೈತ, ಕಾರ್ಮಿಕ, ಮಹಿಳೆ, ಬಡ ಜನರ ಪರ ಅನೇಕ ಜನಪರ ಯೋಜನೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಿದ್ದಾರೆ ಎಂದ ಅವರು, ಕೊರೋನಾದಂತಹ ಸಂಕಷ್ಟದ ಸಮಯದಲ್ಲಿಯೂ ದೇಶವನ್ನು ಅಭಿವೃದ್ಧಿ ಯತ್ತ ಕೊಂಡೊಯ್ದ ಪ್ರಧಾನಿಯವರ ಕಾರ್ಯ ಮೆಚ್ಚಿ ದೇಶಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಬೇರೆ ಬೇರೆ ಪಕ್ಷಗಳಿಂದ ಬಿಜೆಪಿ ಸೇರ್ಪಡೆ ಗೊಳ್ಳುತ್ತಿದ್ದಾರೆ ಎಂದರು.

Tap to resize

Latest Videos

ಪ್ರಭಾವಿ ಲಿಂಗಾಯತ ಲೀಡರ್ ಬಿಜೆಪಿ ಸೇರ್ಪಡೆ?, ಪಕ್ಷಾಂತರ ಪರ್ವ ಬಗ್ಗೆ ಜಾರಕಿಹೊಳಿ ಹೊಸ ಬಾಂಬ್

ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್‌.ಟಿ. ಮೋರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತ ಮೆಚ್ಚಿ ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿತ ಗ್ರಾಪಂ ಸದಸ್ಯರು ಹಾಗೂ ಮುಖಂಡರು ಬಿಜೆಪಿ ಸೇರ್ಪಡೆ ಯಾಗುತ್ತಿದ್ದಾರೆ. ಯಮಕನಮರಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದರು.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದವರು ಅರ್ಜುನ ಹಂಚಿನಮನಿ, ಪರಸಪ್ಪ ಹಂಚಿನಮನಿ, ಪರಸಪ್ಪ ಹಂಚಿನಮನಿ, ಬಸು ಮ್ಯಾಕಳಿ, ಬಸಪ್ಪ ಹಮಾನಿ, ಯಲ್ಲಪ್ಪ ಹಂಚಿನಮನಿ, ಬಸಪ್ಪಾ ರಾ. ಹಂಚಿನಮನಿ, ಅರ್ಜುನ ಹಂಚಿನಮನಿ, ಮಹೇಂದ್ರ, ಯಲ್ಲಪ್ಪ ಹಂಚಿನಮನಿ, ಬಸಪ್ಪ ಹಂಚಿನಮನಿ, ಇವರು ಸೇರ್ಪಡೆಯಾದರು. ಯಮಕನಮರಡಿ ಉತ್ತರ ಮಂಡಳ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಯಮಕನಮರಡಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಿದ್ಧಲಿಂಗ ಸಿದಗೌಡರ ಹಾಗೂ ಬಿಜೆಪಿಯ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.
 

click me!