
ರಾಯಚೂರು, [ಡಿ.04]: ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹಾಗು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ನಡುವಿನ ಮಾತಿನ ಭರಾಟೆ ಮುಂದುವರೆದಿದೆ.
ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ಅವರ ಪರಸ್ಪರ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದ್ದು, ರಾಯಚೂರಿನಲ್ಲಿ ಇಂದು [ಮಂಗಳವಾರ] ಮತ್ತೆ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.
'ಅವಕಾಶ ಸಿಕ್ರೆ ಸಿದ್ದರಾಮಯ್ಯ ಬಿಜೆಪಿಗೆ ಬರಲು ರೆಡಿ'
ಸಿದ್ದರಾಮಯ್ಯ ದಿನಕ್ಕೊಂದು ಮಾತಾಡ್ತಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸತ್ತೋಗಿದ್ದು, ಸಮನ್ವಯ ಸಮಿತಿ ಅಧ್ಯಕ್ಷ ಅಂದ್ರೆ ಅಮ್ಮವರ ಗಂಡನಾ? ಈ ಸರ್ಕಾರದಲ್ಲಿ ನಿಮ್ಮದೇನು ನಡಿಯಲ್ವಾ? ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಅವರು ಬಿಜೆಪಿ ಸಿದ್ದಾಂತಗಳನ್ನು ಒಪ್ಪಿಕೊಂಡು ಬಿಜೆಪಿಗೆ ಬಂದ್ರೆ ಸ್ವಾಗತ ಮಾಡ್ತೇವೆ. ಸಿದ್ದರಾಮಯ್ಯ ಇನ್ನೂ ಕನಸಿನಲ್ಲಿ ನಾನು ಮಂಖ್ಯಮಂತ್ರಿ ಅಂದುಕೊಳ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಬಗ್ಗೆ ಕಾಂಗ್ರೇಸ್ ನವರು ಏನಾದ್ರು ಹೇಳಿಕೊಳ್ಳಲಿ. ಬಿಜೆಪಿ ಬೆಳೆಯುತ್ತಿದ್ದು, ಕಾಂಗ್ರೇಸ್ ನಿರ್ನಾಮ ಆಗ್ತಾ ಇದೆ. ಸತೀಶ್ ಜಾರಕಿಹೊಳಿಯವರಿಗೆ ಸರ್ಕಾರದ ಬಗ್ಗೆ ಅಸಮಾಧಾನ ಇದೆ.
ಕಾಂಗ್ರೇಸ್, ಜೆಡಿಎಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಶಾಸಕರು ಬಂದರೆ ಬಿಜೆಪಿ ಕರೆದುಕೊಳ್ಳುತ್ತೇವೆ ಎಂದು ಅಪರೇಷನ್ ಕಮಲದ ಮುನ್ಸೂಚನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.