
ಹಾಸನ, (ಸೆ.01): ದುಡ್ ವಸೂಲಿ ಮಾಡೋಕ್ ಇಲ್ಲಿಗೆ ಬಂದೋರು ಎಂದಿದ್ದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿರುಗೇಟು ಕೊಟ್ಟಿದ್ದಾರೆ.
ಹಾಸನದಲ್ಲಿ ಇಂದು (ಸೆ.01) ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಕುಮಾರಸ್ವಾಮಿ ಬಗ್ಗೆ ನಾನೇನು ಮಾತನಾಡಲ್ಲ. ಕುಮಾರಸ್ವಾಮಿ ದೇವೇಗೌಡರ ಮಗ ಹೇಗೆ ಇರಬೇಕೆಂದು ಅವರ ತಂದೆಯಿಂದ ತಿಳಿದುಕೊಳ್ಳಲಿ. ಈ ರೀತಿ ಹಗುರವಾಗಿ ಮಾತನಾಡಬಾರದು ಎಂದು ಟಾಂಗ್ ಕೊಟ್ಟರು.
ದುಡ್ ವಸೂಲಿ ಮಾಡೋಕ್ ಇಲ್ಲಿಗೆ ಬಂದೋರು : ಅರುಣ್ ಸಿಂಗ್ ವಿರುದ್ಧ HDK ಗರಂ
ಜನರು ಹೀಗೆ ಹಗುರವಾಗಿ ಮಾತನಾಡೋರನ್ನ ಇಷ್ಟಪಡಲ್ಲ. ಸಾರ್ವಜನಿಕ ಜೀವನದಲ್ಲಿ ಮರ್ಯಾದೆ ಇರಬೇಕಾದ್ರೆ ಹಾಗೇಯೇ ನಡೆದುಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿಕೆಗೆ ಅರುಣ್ ಸಿಂಗ್ ಖಾರವಾಗೇ ತಿರುಗೆಟು ನೀಡಿದರು.
ಅವನು ಬಂದಿರೋದು ದುಡ್ಡು ವಸೂಲಿ ಮಾಡೋಕೆ. ನಾವೇನ್ ಅವರ ಮನೆ ಬಾಗಿಲಿಗೆ ಹೋಗಿದ್ದೆವಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ರಾಜ್ಯದಲ್ಲಿದ್ದು, ವಾಸ್ತವ ಸ್ಥಿತಿ ಅವರಿಗೆ ಗೊತ್ತಿಲ್ಲ. ಕಲೆಕ್ಷನ್‌ಗೆ ಬರೋ ಗಿರಾಕಿ ಅವರು ಎಂದು ಅಸಮಾದಾನ ಹೊರಹಾಕಿದರು.
ಈ ಮೊದಲು ಅರುಣ್ ಸಿಂಗ್ ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಅವನು ಬಂದಿರೋದು ದುಡ್ಡು ವಸೂಲಿ ಮಾಡೋಕೆ. ನಾವೇನ್ ಅವರ ಮನೆ ಬಾಗಿಲಿಗೆ ಹೋಗಿದ್ದೆವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ರಾಜ್ಯದಲ್ಲಿದ್ದು, ವಾಸ್ತವ ಸ್ಥಿತಿ ಅವರಿಗೆ ಗೊತ್ತಿಲ್ಲ. ಕಲೆಕ್ಷನ್‌ಗೆ ಬರೋ ಗಿರಾಕಿ ಅವರು ಎಂದು ಅಸಮಾದಾನ ಹೊರಹಾಕಿದರು. ಸಾರಾ ಮಹೇಶ್ ಮನೆಗೆ ಅರ್ಧ ರಾತ್ರಿ ಬಂದೋರ್ ಯಾರು ಎಂದು ಪ್ರಶ್ನೆ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.