* ಮಂಡ್ಯದಲ್ಲಿ ಸಂಸದೆ ಸುಮಲತಾ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ
* ಮಂಡ್ಯ-ಮದ್ದೂರು ನಡುವಿನ ಹನಕೆರೆ ಗ್ರಾಮದಲ್ಲಿ ಸ್ವಂತ ಮನೆ ನಿರ್ಮಾಣ
* ಇದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ
ಮಂಡ್ಯ, (ಸೆ.01): ಜನರಿಗೆ ಮಾತು ಕೊಟ್ಟಂತೆ ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯ ಜಿಲ್ಲೆಯಲ್ಲಿ ಸ್ವತಃ ಮನೆ ನಿರ್ಮಿಸಲು ಇಂದು(ಸೆ.01) ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಇದೇ ವೇಳೆ ಸುಮಲತಾ ಅವರು ಸ್ವತಃ ನಿವಾಸ ನಿರ್ಮಿಸುವುದರ ಹಿಂದೆ ಪುತ್ರ ಅಭಿಷೇಕ್ ಅವರ ರಾಜಕೀಯ ಭವಿಷ್ಯದ ಚಿಂತನೆ ದೂರದೃಷ್ಟಿ ಇದೆ ಎಂಬ ಮಾತು ಮಂಡ್ಯ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.
ಮಂಡ್ಯದಲ್ಲಿ ಸಂಸದೆ ಸುಮಲತಾ ನೂತನ ಮನೆ ನಿರ್ಮಾಣ
ಇನ್ನು ಈ ಬಗ್ಗೆ ಮೈಸೂರಿನಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸುಮಲತಾ ಮನೆ ನಿರ್ಮಾಣ ವಿಚಾರ ಕೇಳಿ ಸಂತೋಷ ಆಗಿದೆ. ಮಂಡ್ಯದಲ್ಲಿ ನಮ್ಮ ಮೇಲಿನ ಒತ್ತಡ ಕಡಿಮೆ ಆಗಿದೆ. ಜನರ ಸಂಪರ್ಕದಲ್ಲಿದ್ದು ಅಭಿವೃದ್ಧಿ ಮಾಡಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮನೆ ನಿರ್ಮಿಸುವ ವಿಚಾರದ ಬಗ್ಗೆ ಮಾತನಾಡಿದ ಹೆಚ್ಡಿಕೆ, ಜನಪ್ರತಿನಿಧಿಗಳು ಕ್ಷೇತ್ರದಲ್ಲಿ ಮನೆ ಮಾಡುವುದು ಮುಖ್ಯವಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವುದು ಬಹಳ ಮುಖ್ಯವಾಗಿರುತ್ತದೆ. ನಾನು ರಾಮನಗರದಲ್ಲಿ ಮನೆ ನಿರ್ಮಾಣ ಮಾಡಿಲ್ಲ. ಸಾ.ರಾ.ಮಹೇಶ ಕೆ.ಆರ್.ನಗರದಲ್ಲಿ ಮನೆ ನಿರ್ಮಾಣ ಮಾಡಿಲ್ಲ. ಮನೆ ನಿರ್ಮಾಣ ಮಾಡದಿದ್ದರೂ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ ಎಂದು ಹೇಳಿದರು.