ರಾಜ್ಯ ಕೋರ್ ಕಮಿಟಿ ಸಭೆ ಅಂತ್ಯ: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್

By Suvarna NewsFirst Published Jun 6, 2020, 9:07 PM IST
Highlights

ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಅಂತ್ಯವಾಗಿದ್ದು, ಜೂನ್‌ 19 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಪೈನಲ್ ಆಗಿದೆ.

ಬೆಂಗಳೂರು (ಜೂನ್ 06): ಜೂನ್‌ 19 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ

ಇಂದು (ಶನಿವಾರ) ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಎರಡು ಸ್ಥಾನಗಳಿಗೆ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಪ್ರಭಾಕರ್ ಕೋರೆ, ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರು ಫೈನಲ್ ಮಾಡಲಾಗಿದ್ದು, ಈ ಮೂವರಲ್ಲಿ ಇಬ್ಬರ ಹೆಸರನ್ನು ಪ್ರಕಟಿಸುವಂತೆ ರಾಜ್ಯ ಬಿಜೆಪಿ ಕೋರ್‌ ಕಮಿಟಿ, ಹೈಕಮಾಂಡ್‌ಗೆ ಶಿಫಾರಸು ಮಾಡಿದೆ. ಸಂಖ್ಯಾಬಲದಲ್ಲಿ ಎರಡು ರಾಜ್ಯಸಭಾ ಸ್ಥಾನಗಳಲ್ಲಿ ಬಿಜೆಪಿಯ ಸರಳವಾಗಿ ಗೆಲುವು ಸಾಧಿಸಲಿದೆ. 

ರಾಜ್ಯಸಭೆ ಎಲೆಕ್ಷನ್: ದೇವೇಗೌಡ್ರು ಕಣಕ್ಕಿಳಿಯದಿದ್ರೆ ಬದಲಾಗುತ್ತೆ ರಾಜಕೀಯ ಸೀನ್

ಇನ್ನೂ ಈ ಕುರಿತಂತೆ ಮಾತನಾಡಿರುವ ಅರವಿಂದ್ ಲಿಂಬಾವಳಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡಗೆ ಬೆಂಬಲ ನೀಡುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಆದರೆ ಎರಡು ಅಭ್ಯರ್ಥಿಗೆ ಹಾಕಿ ಉಳಿದ ಮತಗಳನ್ನು ಅದೇ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ ಹಾಕಿಸುತ್ತೇವೆ ಹೊರತು ಬೇರೆ ಯಾರಿಗೂ ಬೆಂಬಲ ಕೊಡುವ ಬಗ್ಗೆ ಯಾವುದೇ ನಿರ್ಣಯ ಮಾಡಿಲ್ಲ ಎಂದು ಸ್ಪಷ್ಟಡಿಸಿದರು.

ಕಾಂಗ್ರೆಸ್‌ನಿಂದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಖಾಡದಲ್ಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡ್ರೆ ಇನ್ನೊಂದು ಅಭ್ಯರ್ಥಿ ಕಣಕ್ಕಿಳಿಯಲಿದೆ. ಅದು ದೇವೇಗೌಡ ಅವರನ್ನ ಕಣಕ್ಕಿಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಚರ್ಚೆ ನಡೆಸಿದ್ದಾರೆ.

ಒಂದು ವೇಳೆ ದೇವೇಗೌಡ ಅವರು ಏನಾದರೂ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದರೆ, ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯನ್ನು ಕಣ್ಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಾಗಿವೆ.

click me!