ಹಿಜಾಬ್, ಕಾಶ್ಮೀರಿ ಫೈಲ್ ಆಯ್ತು ಈಗ ಭಗವದ್ಗೀತೆ ಪ್ರಲಾಪ, ರಾಜ್ಯ ರಾಜಕಾರಣದಲ್ಲಿ ಮತ್ತೆ ಕಿಡಿ

Published : Mar 18, 2022, 04:58 PM ISTUpdated : Mar 18, 2022, 05:18 PM IST
ಹಿಜಾಬ್, ಕಾಶ್ಮೀರಿ ಫೈಲ್ ಆಯ್ತು ಈಗ ಭಗವದ್ಗೀತೆ  ಪ್ರಲಾಪ, ರಾಜ್ಯ ರಾಜಕಾರಣದಲ್ಲಿ ಮತ್ತೆ ಕಿಡಿ

ಸಾರಾಂಶ

* ಹಿಜಾಬ್, ಕಾಶ್ಮೀರಿ ಫೈಲ್ ಆಯ್ತು ಈಗ ಭಗವದ್ಗೀತೆ  ಪ್ರಲಾಪ * ಭಗವದ್ಗೀತೆ ವಿಚಾರ ಮತ್ತೆ ರಾಜ್ಯ ರಾಜಕಾರಣದಲ್ಲಿ ಕಿಡಿ * ಸಚಿವ ನಾಗೇಶ್ ಪ್ರಸ್ತಾಪಕ್ಕೆ ಡಿಕೆಶಿ ಡಿಚ್ಚಿ

ಬೆಂಗಳೂರು, (ಮಾ.19): ಕರ್ನಾಟಕದಲ್ಲಿ ಒಂದಲ್ಲ ಒಂದು ರಾಜಕೀಯ ಕಿತ್ತಾಟಗಳು ನಡೆಯುತ್ತಲೇ ಇವೆ. ಒಂದು ಮುಗಿಯುವುದರೊಳಗೆ ಮತ್ತೊಂದು ಶುರುವಾಗುತ್ತೆ.

ಹೌದು...ಹಿಜಾಬ್ (Hijab Row), ಕಾಶ್ಮೀರಿ ಫೈಲ್ ಪರ-ವಿರೋಧ ಮುಗಿಯುತ್ತಿದ್ದಂತೆಯೇ ಈಗ  ಭಗವದ್ಗೀತೆ(Bhagavad Gita)  ಪ್ರಲಾಪ ಶುರುವಾಗಿದೆ. ಪಠ್ಯದಲ್ಲಿ ಭಗವದ್ಗೀತೆ ವಿಚಾರಗಳನ್ನು ಅಳವಡಿಸುವ ಬಗ್ಗೆ ರಾಜಕೀಯ ನಾಯಕರ ಪರ-ವಿರೋಧಗಳು ವ್ಯಕ್ತವಾಗುತ್ತಿವೆ.

'ರಾಮಾಯಣ, ಭಗವದ್ಗೀತೆ ವಿಚಾರಗಳು ಪಠ್ಯದಲ್ಲಿ ಇವೆ,ಈಗ ಹೊಸದಾಗಿ ಕ್ರೆಡಿಟ್ ತೆಗೆದುಕೊಳ್ಳವ ಅವಶ್ಕಕತೆ ಇಲ್ಲ

ಗುಜರಾತ್ ನಲ್ಲಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿರುವ ಮಾದರಿಯಲ್ಲೇ ಕರ್ನಾಟಕ ರಾಜ್ಯದಲ್ಲೂ  ಅಳವಡಿಸಲು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುವುದಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ. 

ಮಕ್ಕಳ ಸಂಸ್ಕಾರದ ಮೇಲೆ ಭಾರಿ ದೊಡ್ಡ ಪರಿಣಾಮಗಳು ಆಗ್ತಿವೆ.ಇದಕ್ಕೆ ನೀತಿ ಶಿಕ್ಷಣ ಪ್ರಾರಂಭ ಮಾಡಿ ಎಂಬುದು ಅನೇಕರ ಒತ್ತಾಯ. ಗುಜರಾತ್ ನಲ್ಲಿ ಎರಡು ಮೂರು ಹಂತದಲ್ಲಿ ನೀತಿ ಶಿಕ್ಷಣ ಆರಂಭಿಸಲು ಯೋಜನೆ ಮಾಡಿದ್ದಾರೆ. ಇದರಲ್ಲಿ ಮೊದಲ ಹಂತವಾಗಿ ಭಗವದ್ಗೀತೆ ಆರಂಭಿಸಲು  ಯೋಚಿಸಿದ್ದಾರೆ. ಖಂಡಿತಾ ಮುಂದಿನ ದಿನಗಳಲ್ಲಿ ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ. 

Bhagavad Gita: ರಾಜ್ಯದಲ್ಲೂ ಭಗವದ್ಗೀತೆ ಪಠ್ಯ ಅಳವಡಿಕೆ ಸಾಧ್ಯತೆ.?

ಹಿಂದೆ ನಾವು ಓದುವ ಸಂಧರ್ಭದಲ್ಲಿ ವಾರಕ್ಕೆ ಒಂದು ದಿನ ನೀತಿ ಶಿಕ್ಷಣ ಪಾಠ ಕೇಳ್ತಾ ಇದ್ದೆವು. ಶಿಕ್ಷಣ ತಜ್ಞರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಭಗವದ್ಗೀತೆ ಯನ್ನು ಮಕ್ಕಳಿಗೆ ಹೇಳಿಕೊಡಬಾರದು ಅಂತೇನೂ ಇಲ್ಲ.ಹಿಂದೆ ಎಸ್ ಎಂ ಕೃಷ್ಣ ಭಗವದ್ಗೀತೆ ಓದುತ್ತಿದ್ದೇನೆ ಎಂದು ಹೇಳುತ್ತಿದ್ದರು.ಅದೇ ನನಗೆ ಸ್ಪೂರ್ತಿ ಅಂತಾ ಹೇಳ್ತಾ ಇದ್ರು, ರಾಮಾಯಣ,ಮಹಾಭಾರತ, ಬೈಬಲ್, ಕುರಾನ್ ಎಲ್ಲದರಲ್ಲೂ ಇರುವ ಒಳ್ಳೆಯ ಅಂಶಗಳನ್ನು ಸೇರಿಸಬಹುದು. ಆದರೆ ಇದೆಲ್ಲಾ ಶಿಕ್ಷಣ ತಜ್ಞರು ನಿರ್ಧಾರ ಮಾಡುತ್ತಾರೆ ಎಂದು ನಾಗೇಶ್ ಹೇಳಿದ್ರು. 

ಡಿಕೆ ಶಿವಕುಮಾರ್ ಟಾಂಗ್
ನಾಗೇಶ್ ಈ ಹೇಳಿಕೆ ನೀಡುತ್ತಿದ್ದಂತೆಯೇ ಕಾಂಗ್ರೆಸ್ ನ ಅನೇಕ ನಾಯಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಆರಂಭದಂದಲೇ ನಾನು ಎನ್‌ಇಪಿ ವಿರೋಧ ಮಾಡಿರುವವನು. ಎಲ್ಲಾ ತಿಳಿದವರೇ ಸೇರಿ ಪಠ್ಯ ಕ್ರಮ ರಚನೆ ಮಾಡಿದ್ದಾರೆ. ಹೊಸದಾಗಿ ಏನನ್ನೂ ಸೇರಿಸುವ ಅವಶ್ಯಕತೆ ಇಲ್ಲ ಎಂದು ಸಚಿವ ನಾಗೇಶ್‌ಗೆ ಟಾಂಗ್ ಕೊಟ್ಟರು.

ಎಲ್ಲಾ ಧರ್ಮದ ಆಚಾರ ವಿಚಾರಗಳನ್ನು ಜನ ತಿಳಿದುಕೊಳ್ಳೋದ್ರಲ್ಲಿ ತಪ್ಪಿಲ್ಲ. ಈಗಾಗಲೇ ಭಗವದ್ಗೀತೆ, ರಾಮಾಯಣ, ಇತರ ಧರ್ಮದ ವಿಚಾರಗಳು ಪಠ್ಯದಲ್ಲಿ ಇವೆ. ಹನುಮಂತಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಎರಡು ರುಪಾಯಿ ಗೆ ಭಗವದ್ಗೀತೆ ಪುಸ್ತಕ ಕೊಟ್ಟಿದ್ದರು. ಈಗ ಇವರು ಹೊಸದಾಗಿ ಕ್ರೆಡಿಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಿಯಾಂಕ್ ಖರ್ಗೆ ವಿರೋಧ
ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲೂ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ಮಾಡುವ ವಿಚಾರವಾಗಿ, ಕರ್ನಾಟಕ ಯಾವಾಗಲೂ ಪ್ರಗತಿ ಕಾಣುತ್ತಿರುವ ರಾಜ್ಯ. ಈ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಯಿಸಲು ಹೋಗಬೇಡಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.

ಮಕ್ಕಳು ಈಗಾಗಲೇ ಕೊರೊನಾದ ಪರಿಣಾಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ಕೊಡುವ ಬಗ್ಗೆ ಗಮನ ಹರಿಸಬೇಕು. ಜೊತೆಗೆ ಶಾಲಾ ಕಟ್ಟಡಗಳ ಸುವ್ಯವಸ್ಥೆ ಬಗ್ಗೆ ಗಮನ ಕೊಡಿ ಎಂದು ಒತ್ತಾಯಿಸಿದ ಅವರು, ಅದರ ಹೊರತಾಗಿ, ಹೈಕಮಾಂಡ್ ಮನವೊಲಿಸಲು ಇಂತಹ ಕ್ರಮಗಳನ್ನು ತರಲು ಹೋಗಬೇಡಿ 

ಒಟ್ಟಿನಲ್ಲಿ  ಮತ್ತೆ ಭಗವದ್ಗೀತೆ ವಿಚಾರ ರಾಜ್ಯ ರಾಜಕಾರಣದಲ್ಲಿ ಕಿಡಿ ಹೊತ್ತಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ