ಸರ್ಕಾರದ ವರದಿಗೂ ಮುನ್ನವೇ ಬಿಜೆಪಿಯ ಖಾಸಗಿ ಎಫ್‌ಎಸ್‌ಎಲ್‌ ವರದಿ, ಪ್ರಿಯಾಂಕ್ ಖರ್ಗೆ ಕೆಂಡಾಮಂಡಲ

Published : Mar 04, 2024, 12:38 PM ISTUpdated : Mar 04, 2024, 12:43 PM IST
ಸರ್ಕಾರದ ವರದಿಗೂ ಮುನ್ನವೇ ಬಿಜೆಪಿಯ ಖಾಸಗಿ ಎಫ್‌ಎಸ್‌ಎಲ್‌ ವರದಿ, ಪ್ರಿಯಾಂಕ್ ಖರ್ಗೆ ಕೆಂಡಾಮಂಡಲ

ಸಾರಾಂಶ

ಬಿಜೆಪಿಯವರು ಖಾಸಗಿ ಸಂಸ್ಥೆಗಳನ್ನು ಇಟ್ಟುಕೊಂಡು ಖಾಸಗಿಯಾಗಿ ಫೋರೆನ್ಸಿಕ್ ವರದಿಗಳನ್ನು ತರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡುವುದೇ ಮೊದಲನೇ ದೇಶದ್ರೋಹದ ಕೆಲಸ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಬೆಂಗಳೂರು (ಮಾ.4): ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಎಫ್‌ಎಸ್‌ಎಲ್‌ ವರದಿ ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಸರಕಾರಿ ಲ್ಯಾಬ್ ವರದಿ ಇನ್ನೂ ಬಂದಿಲ್ಲ. ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಸಹಿತ ಸರ್ಕಾರದ ಹಲವು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಆದರೆ ಬಿಜೆಪಿ ಖಾಸಗಿ ವರದಿ ಇಟ್ಟುಕೊಂಡು ಎಕ್ಸ್ ನಲ್ಲಿ ಸರ್ಕಾರದ ವಿರುದ್ಧ ದಾಳಿ ಮಾಡುತ್ತಿದ್ದು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಟ್ವೀಟ್ ಮಾಡಿರುವ ಖಾಸಗಿ ವರದಿಯಲ್ಲಿ  ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಬಿಜೆಪಿ ಟ್ವೀಟ್‌ ವಾರ್‌ ಶುರು ಮಾಡಿದೆ.

ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕುರಿತ ಎಫ್‌ಎಸ್‌ಎಲ್‌ ವರದಿ ಬಂದಿಲ್ಲ: ಪರಮೇಶ್ವರ್‌

ಇನ್ನು ಈ ಬಗ್ಗೆ ಮಾತನಾಡಿರುವ ಸಚಿವ ಪ್ರಿಯಾಂಕ ಖರ್ಗೆ, ಬಿಜೆಪಿಯವರು ಖಾಸಗಿ ಸಂಸ್ಥೆಗಳನ್ನು ಇಟ್ಟುಕೊಂಡು ಖಾಸಗಿಯಾಗಿ ಫೋರೆನ್ಸಿಕ್ ವರದಿಗಳನ್ನು ತರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡುವುದೇ ಮೊದಲನೇ ದೇಶದ್ರೋಹದ ಕೆಲಸ ಎಂದಿದ್ದಾರೆ. ಜೊತೆಗೆ ಬಿಜೆಪಿಯ ಈ ನಡೆಗೆ ಕೆಂಡಾಮಂಡಲವಾಗಿದ್ದು, ಬಿಜೆಪಿ ಅವರು ಕೂಡ ಅವತ್ತು ಮಂಡ್ಯದಲ್ಲಿ  ಪಾಕಿಸ್ತಾನ ಪರ ಘೋಷಣೆ ಕೂಗಿದ್ರು ಅನ್ನು ನಾವು ಕೇಳಿದ್ವಾ ಎಂದು ಪ್ರಶ್ನಿಸಿದ್ದಾರೆ.

ಇದು ಸಾಮಾನ್ಯ ಪ್ರಕರಣ ಅಲ್ಲ. ದೇಶದ್ರೋಹದ ಘೋಷಣೆ ಕೂಗಿದ್ದಾರೆ ಅಂತ ಹೇಳ್ತಾ ಇದ್ದಾರೆ. ಅದಕ್ಕೆ ಸರ್ಕಾರ ಉತ್ತರ ಕೊಡಬೇಕು. ಬಿಜೆಪಿಯವರು ಖಾಸಗಿ ಸಂಸ್ಥೆಗಳ ಹತ್ತಿರ ಹೋಗಿ ಅದನ್ನು ಪಬ್ಲಿಕ್ ಮಾಡ್ತಾ ಇದ್ದಾರಲ್ಲ ಅದು ಮೊದಲನೇ ದೇಶದ್ರೋಹದ ಕೆಲಸ. ಕ್ಲೂ ಫಾರ್ ಎವಿಡೆನ್ಸ್ ಫೋರೆನ್ಸಿಕ್  ಲ್ಯಾಬ್ ಅನ್ನೋ ಸಂಸ್ಥೆಯ ಕ್ರೆಡಿಬಿಲಿಟಿ ಏನು? 

ಇವರು ಖಾಸಗಿಯಾಗಿ ಏನಾದರೂ ಮಾಡಿಕೊಳ್ಳಲಿ. ಆ ಸಂಸ್ಥೆಗೆ ಸರ್ಕಾರದ ಸರ್ಟಿಫಿಕೇಶನ್ ಇದಿಯೋ ತರಬೇತಿ ಇದೆಯೋ ನನಗೆ ಗೊತ್ತಿಲ್ಲ. ಇದ್ದರೂ ಕೂಡ ಆ ಲ್ಯಾಬ್ ಈ ವಿಚಾರದಲ್ಲಿ ಸ್ಥಳೀಯ ಪೊಲೀಸರಿಗೆ ಮತ್ತು ಸರ್ಕಾರದ ಗಮನಕ್ಕೆ ತಂದು ವರದಿ ಕೊಡಬೇಕಿತ್ತು. ಅಷ್ಟು ಮೆಚುರಿಟಿ ಸಂಸ್ಥೆಗೆ ಇರಬೇಕಾಗಿತ್ತು

ಪಾಕ್‌ ಪರ ಘೋಷಣೆ ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢ: ಬಿ.ವೈ.ವಿಜಯೇಂದ್ರ

ಬಿಜೆಪಿಯವರು ಫೋರೆನ್ಸಿಕ್ ಲ್ಯಾಬ್ ಗೆ ಕೊಟ್ಟಿರುವ ಫೂಟೇಜ್ ಯಾವುದು?  ಇಂಟರ್ನೆಟ್ ನಲ್ಲಿ ವಿಡಿಯೋ ಕ್ವಾಲಿಟಿ ಸಪ್ರೆಸ್ ಹೇಗೆ ಆಗುತ್ತದೆ. ಯಾವ ಫೂಟೇಜ್ ಕೊಟ್ಟಿದ್ದಾರೆ. ರಾ ಫೂಟೇಜ್ ಕೊಟ್ಟಿದ್ರೆ ಇವರಿಗೆ ರಾ ಫೂಟೇಜ್ ಎಲ್ಲಿಂದ ಸಿಕ್ತು? ಸಂವಾದ ಫೌಂಡೇಶನ್ ಗೆ ಏನು ಆಸಕ್ತಿ ಹೂ ಆರ್ ದೇ? ಸಂವಾದ ಆರ್ ಎಸ್ ಎಸ್ ನವರು ಭಜನೆ ಆಡುವ ಸಂಸ್ಥೆ. ಇದು ಯಾವ ರೀತಿ ಸಾಮಾಜಿಕ ಜಾಲತಾಣದಲ್ಲಿ ಜಾತಿ ಜಾತಿಗಳ ನಡುವೆ ಜಗಳ ಹಚ್ಚುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ? ಅವರ್ಯಾರು? ಪುಟೇಜ್ ಕೊಡೋದಕ್ಕೆ ಲ್ಯಾಬ್ ಟೆಸ್ಟ್ ಮಾಡುವುದಕ್ಕೆ ಅವರ್ಯಾರು?

ನಾನೂ ಖಾಸಗಿ ಸಂಸ್ಥೆಗಳಿಗೆ ಕೊಟ್ಟು ನಾನೂ ರಿಪೋರ್ಟ್ ತೆಗೆದುಕೊಂಡಿದ್ದೇನೆ. ನಾನೂ ಅದನ್ನು ಸಾರ್ವಜನಿಕವಾಗಿ ಪಬ್ಲಿಷ್ ಮಾಡಬಹುದಲ್ಲ? ನಾನೂ ಹಾಗೆ ಮಾಡಿಲ್ಲ, ನಾನೂ ಯಾವುದೋ ರಿಪೋರ್ಟ್ ತಂದು ಹೇಳಬಹುದಲ್ಲ? ಬಿಜೆಪಿಯವರು ಮಾಡಿದ್ದು ನಿಜವಾದ ದೇಶ ದ್ರೋಹ. ಸಮಾಜದಲ್ಲಿ ಆತಂಕ ಇರಬೇಕು ಅಂತ ಇವರು ಯಾಕೆ ಬಯಸ್ತಾ ಇದ್ದಾರೆ? ಸಂವಾದ ಫೌಂಡೇಷನ್ ರಿಪೋರ್ಟ್ ತೆಗೆದುಕೊಳ್ಳೋದಕ್ಕೆ ಯಾರು ಇವರು? ಅವರಿಗೇನು ಆಸಕ್ತಿ? ಸರ್ಕಾರ ಪದೇ ಪದೇ ಎಫ್ಎಸ್ಎಲ್ ರಿಪೋರ್ಟ್ ನೋಡುವುದಕ್ಕೆ ಕಾರಣ ಯಾವುದೇ ಗೊಂದಲ ಇರಬಾರದು ಅಂತ ಇವರು ಯಾವ ಫೂಟೇಜ್ ಕೊಟ್ಟಿದ್ದಾರೋ? ಮೂರು ತೆಗೆದುಕೊಂಡಿದ್ದಾರೋ ನೂರು ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಗೃಹ ಇಲಾಖೆ ಇದರ ಬಗ್ಗೆ ವರದಿ ಕೊಡಬೇಕೇ ಹೊರತು ಸಂವಾದ ಫೌಂಡೇಶನ್ ಅಲ್ಲ. ಬಿಜೆಪಿಯವರಿಗೆ ಜವಾಬ್ದಾರಿಯುತ ಪಕ್ಷವಾಗಿ ಸಂವಾದ ಹಾಕಿದ ತಾಳಕ್ಕೆ ಕುಣಿತಾರಲ್ಲ ಇವರಿಗೆ ನಾಚಿಕೆ ಬೇಡ್ವಾ? ಎಂದು ಕೆಂಡಾಮಂಡಲವಾಗಿ ಉತ್ತರಿಸಿದ್ದಾರೆ.

ಅವತ್ತು ಮಂಡ್ಯದಲ್ಲಿ ಬಿಜೆಪಿಯವರು ಪಾಕಿಸ್ತಾನ ಪರ ಘೋಷಣೆ ಕೂಗಿದ್ರು. ಅವರ ಮೇಲೆ ನಾವೂ ಕೇಸ್ ಹಾಕಬಹುದು. ಇವರು ಕೊಟ್ಟ ವರದಿಯಲ್ಲಿ ಹೈಲಿ ಪ್ರೊಬ್ಯಾಬಿಲಿಟಿ ಅಂತ ಇದೆ. ರೊಕ್ಕ ಕೊಟ್ಟರೆ ಯಾರು ಬೇಕಾದರೂ ವರದಿ ಕೊಡ್ತಾರೆ. ಸಂವಾದ ರಿಪೋರ್ಟ್ ನಲ್ಲಿ ಗೃಹ ಸಚಿವರು ಹೇಳಿದ್ದು ಸರಿಯಾಗಿ ಇದೆ. ನಮಗೂ ಸೈಬರ್ ಕಂಪನಿ ಗಳು, ಆ್ಯನಿಮೇಷನ್ ಕಂಪನಿಗಳು ಗೊತ್ತಿದೆ. ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು ನಾನು ಮಾಡಿಸಿದ ವರದಿ ಬಹಿರಂಗ ಮಾಡಿದ್ದೀನಾ?

ಖಾಸಗಿ ಸಂಸ್ಥೆ, ಫೌಂಡೇಷನ್ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಿತ್ತು. ಇದೇ ಪ್ರೊಬ್ಯಾಬಲ್ ವರದಿಗೆ ಬಿಜೆಪಿ ಇಷ್ಟೆಲ್ಲ ಕುಣಿಯಬೇಕಾ? ಸಂವಾದ ಫೌಂಡೇಶನ್ ಗೆ ಯಾಕಿಷ್ಟು ಆಸಕ್ತಿ? ಇವರ ಉದ್ದೇಶ ಬಹಳ ಕ್ಲಿಯರ್ ಇದೆ. ಸಮಾಜದಲ್ಲಿ ಆತಂಕ ಇದ್ದಾಗಲೆಲ್ಲ ಬಿಜೆಪಿಗೆ ರಾಜಕೀಯವಾಗಿ ಲಾಭ ಆಗಿದೆ ಎನ್ನೋ ಏಲ್ ಯುನಿವರ್ಸಿಟಿ ರಿಪೋರ್ಟ್ ಇದೆ. ಸಮಾಜದಲ್ಲಿ ಗೊಂದಲ ಇದ್ದಾಗಲೆಲ್ಲ ರಾಜಕೀಯ ಲಾಭ ಬಿಜೆಪಿಗೆ ಆಗುತ್ತದೆ.

ಸಂವಾದ ಯಾವತ್ತೂ ದೀಪ ಹಚ್ಚುವ ಕೆಲಸ ಮಾಡಿಲ್ಲ, ಬರೀ ಬೆಂಕಿ ಹಚ್ಚುವ ಕೆಲಸವನ್ನೇ ಮಾಡಿದೆ. ಆ ರಿಪೋರ್ಟ್ ಇಟ್ಟುಕೊಂಡು ಕುಣಿಯುತ್ತಿದ್ದಾರೆ ಬಿಜೆಪಿ ಯವರು. ಬಿಜೆಪಿಯವರು ಹತಾಶರಾಗಿದ್ದಾರೆ. ಕೇಶವ ಕುಂಜ ಹಾಗೂ ಕೇಶವ ಕೃಪಾಗೆ ತೋರಿಸಬೇಕು ಇವರು ಜೀವಂತವಾಗಿದ್ದೇವೆ ಅಂತ.  ನಾವು ಬದುಕಿದ್ದೇವೆ ಇನ್ನೂ, ಸತ್ತೋಗಿಲ್ಲ ಅಂತ ಬಿಜೆಪಿ ಯವರು ಮೋದಿ ಅಮಿತ್ ಶಾಗೆ ತೋರಿಸಬೇಕಿದೆ. ಅದಕ್ಕೇ ಅವರ ಕಿವಿಗೆ ಏನು ಇಂಪಾಗಿ ಕೇಳಿಸುತ್ತದೆಯೋ ಆರ್ ಎಸ್ ಎಸ್ ಕಿವಿಗೆ ಏನು ಇಂಪಾಗಿ ಕೇಳಿಸುತ್ತದೆಯೋ ಅದನ್ನು ಮಾತ್ರ ಹೇಳೋದು. ಬಜೆಟ್ ಬಗ್ಗೆ ಮಾತನಾಡಿ ಅಂದ್ರೆ ಅವರು ಝಮೀರ್ ಬಜೆಟ್ ಅಂತಾರೆ. ಇವರ ಉದ್ದೇಶ ಅಂಕಿ ಅಂಶದ ಮೇಲೆ ಚರ್ಚೆ ಮಾಡೋದಲ್ಲ. ಸಂವಾದದ ತಾಳಕ್ಕೆ ಅವರು ಕುಣಿಲಿ ಆದರೆ ಸರ್ಕಾರ ಅವರ ಮಾತನ್ನು ಕೇಳುವುದಕ್ಕೆ ರೆಡಿ ಇಲ್ಲ ಎಂದು ಕಿಡಿ ಕಾರಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!