ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವನ್ನು ಸಿಲ್ಲಿ ಎಂದಿರುವ ಸಿಲ್ಲಿ ಮಂತ್ರಿ ಶರಣ ಪ್ರಕಾಶ್ ಪಾಟೀಲ್ ರಾಜೀನಾಮೆ ಪಡೆಯಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಅವರನ್ನ ಮಂತ್ರಿಮಂಡಲದಿಂದ ಕೈಬಿಡಲಿ ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆಗ್ರಹಿಸಿದರು.
ಶಿವಮೊಗ್ಗ (ಮಾ.4): ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವನ್ನು ಸಿಲ್ಲಿ ಎಂದಿರುವ ಸಿಲ್ಲಿ ಮಂತ್ರಿ ಶರಣ ಪ್ರಕಾಶ್ ಪಾಟೀಲ್ ರಾಜೀನಾಮೆ ಪಡೆಯಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಅವರನ್ನ ಮಂತ್ರಿಮಂಡಲದಿಂದ ಕೈಬಿಡಲಿ ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆಗ್ರಹಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಫೆಯಲ್ಲಿ ಬಾಂಬ್ ಸ್ಫೋಟ ಆಗಿರುವುದು ಸಿಲ್ಲಿ ಅಂತಾ ಕರೆಯುತ್ತಾರೆ, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ ಸಂದರ್ಭದಲ್ಲಿ ಡಿಕೆ ಶಿವಕುಮಾರ, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ ಕೂಗಿಲ್ಲ ಎಂದರು. ಆದರೆ ಎಫ್‌ಎಸ್‌ಎಲ್ ವರದಿಯಲ್ಲಿ ಕೂಗಿರುವುದು ದೃಢವಾಗಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಡಿಕೆ ಶಿವಕುಮಾರ ಭಂಡರು ಅವರು ರಾಜೀನಾಮೆ ಕೊಡಲ್ಲ. ಕೊನೆಪಕ್ಷ ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟಿದ್ದಕ್ಕಾದರೂ ಬಹಿರಂಗ ಕ್ಷಮೆ ಯಾಚಿಸಬೇಕು. ಎಫ್ಎಸ್ಎಲ್ ವರದಿ ಬಂದಿದೆ. ಅದರಲ್ಲಿ ಘೋಷಣೆ ಕೂಗಿರುವುದು ಸತ್ಯವಾಗಿದೆ. ಆದರೆ ಕಾಂಗ್ರೆಸ್ ನಾಯಕರು ದೇಶದ್ರೋಹಿಗಳ ರಕ್ಷಣೆಗೆ ನಿಂತಿದ್ದಾರೆ ಎಂದರೆ ಏನರ್ಥ ಎಂದು ಹರಿಹಾಯ್ದರು.
undefined
ಕಾಂಗ್ರೆಸ್ FSL ವರದಿ ಒಪ್ಪುವ ಸ್ಥಿತಿಯಲ್ಲಿಲ್ಲ: ಕೋಟ ಶ್ರೀನಿವಾಸ ಪೂಜಾರಿ
ಇನ್ನು ಸಚಿವ ಮಂಕಾಳ ವೈದ್ಯ ಹೇಳಿಕೆ ವಿಚಾರಕ್ಕೆ ಪ್ರಕ್ರಿಯಿಸಿದ ಈಶ್ವರಪ್ಪ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಮೆಚ್ಚಿಸಲು ಹೇಳಿಕೆ ಕೊಟ್ಟಿರಬಹುದು. ಆದರೆ ಬಿಜೆಪಿ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ಬಿಜೆಪಿ ಯಾವತ್ತೂ ಭಯೋತ್ಪಾದಕ ಚಟುವಟಿಕೆಗಳಿಗೆ ವಿರುದ್ಧವಾಗಿದೆ. ರಾಷ್ಟ್ರದ್ರೋಹಿ ಚಟುವಟಿಕೆಗಳನ್ನು ನಾವು ಎದುರಿಸುತ್ತೇವೆ. ರಸ್ತೆ, ದೀಪ, ಚರಂಡಿ ಮಾಡಲು ಬಿಜೆಪಿ ಆಡಳಿತಕ್ಕೆ ಬರೊಲ್ಲ. ಧರ್ಮ, ದೇಶ ಉಳಿಸೋಕೆ ಅಧಿಕಾರಕ್ಕೆ ಬಂದಿರೋದು ಎಂದರು.
ಶಿವರಾಮ್ ಹೆಬ್ಬಾರ್, ಸೋಮಶೇಖರ್ ದುಡ್ಡು ತೆಗೆದುಕೊಂಡಿದ್ದಾರೆ ಎಂದು ನಾನು ಹೇಳಿಲ್ಲ. ಬಿಜೆಪಿ ಬಿಟ್ಟು ವೋಟ್ ಮಾಡಿದಕ್ಕೆ ಎಷ್ಟು ಕೊಟ್ಟಿರಬಹುದು ಅಂತ ಕೇಳಿದ್ದೆ. ಕಳ್ಳನ ಮನಸು ಉಳ್ಳುಳ್ಳುಗೆ ಅಂದಹಾಗೆ ಆಗಿದೆ ಎಂದು ತಿರುಗೇಟು ನೀಡಿದರು.
Siddaramaiah: ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ಬಿಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
ಮುಂದಿನ ವಾರದೊಳಗೆ ಲೋಕಸಭಾ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಕರ್ನಾಟಕದ ಪಟ್ಟಿಯೂ ಬಿಡುಗಡೆಯಾಗಲಿದ್ದು, ಮೊದಲ ಪಟ್ಟಿಯಲ್ಲಿ ಮಹಿಳೆಯರಿಗೆ, ಯುವಕರಿಗೆ ಆದ್ಯತೆ ನೀಡಲಾಗ್ತಿದೆ. ರಾಜ್ಯದಲ್ಲಿ ಹೊಸಬರಿಗೂ ಬಿಜೆಪಿ ಆದ್ಯತೆ ನೀಡಲಿದೆ ಎಂದರು.