ರೈತ ಹಂತಕ ಸಿಎಂ ಸಿದ್ದರಾಮಯ್ಯ ಎಂದು ಫೋಟೋ ಹರಿಬಿಟ್ಟ ಬಿಜೆಪಿ

By Sathish Kumar KH  |  First Published Oct 7, 2023, 4:59 PM IST

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ ಹಂತಕ ಎಂದು ಆರೋಪಿಸಿ ಕರ್ನಾಟಕ ಬಿಜೆಪಿಯಿಂದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.


ಬೆಂಗಳೂರು (ಅ.07): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇವಲ 10 ಜನರ ಮೇಲೆ ಕೇಂದ್ರೀಕರಿಸುವುದನ್ನು ನಿಲ್ಲಿಸಿ 100 ಕೋಟಿ ಜನರ ಮೇಲೆ ಕೇಂದ್ರೀಕರಿಸುವಂತೆ ಟ್ವೀಟ್‌ ಮಾಡಿದ್ದರು. ಆದರೆ, ಇದಕ್ಕೆ ತಿರುಗೇಟು ನೀಡಿರುವ ಕರ್ನಾಟಕ ಬಿಜೆಪಿ ರೈತ ಹಂತಕ ಸಿದ್ದರಾಮಯ್ಯ ಎಂದು ಟ್ವೀಟ್ ಮಾಡಿದ್ದಾರೆ.

ಲೋಸಕಭಾ ಚುನಾವಣೆಗೂ ಮುನ್ನ ದೇಶಾದ್ಯಂತ ಪಕ್ಷಗಳ ನಡುವೆ ರಾಜಕೀಯ ತಿಕ್ಕಾಟ ಆರಂಭವಾಗಿದೆ. ಇಂಡಿ ಮೈತ್ರಿ ಒಕ್ಕೂಟ ಹಾಗೂ ಎನ್‌ಡಿಎ ಒಕ್ಕೂಟದ ನಡುವೆ ವಾಕ್ಸಮರಗಳು ಆರಂಭವಾಗಿವೆ. ಇದರ ನಡುವೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ವಿಶೇಷ ಸೂಚನೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಪ್ರಕಟಿಸಿರುವ ಚಿತ್ರದಲ್ಲಿನ ದೋಷಗಳನ್ನು ಸರಿಪಡಿಸಲಾಗಿದೆ! ಬಿತ್ತನೆ ಬೀಜ ಪೂರೈಸದೆ, ಬರ ಪರಿಹಾರ ಒದಗಿಸದೆ, ಜೀವನದಿ ಕಾವೇರಿಯನ್ನು ತಮ್ಮ ಲಾಭಕ್ಕಾಗಿ ತಮಿಳುನಾಡಿಗೆ ಬಿಟ್ಟು, ಕೇವಲ 100 ದಿವಸದ ಆಡಳಿತದಲ್ಲಿ ರಾಜ್ಯದ 200ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿರುವವರು ಇವರೇ!' ಎಂದು ರಾಜ್ಯ ಬಿಜೆಪಿಯಿಂದ ಎಕ್ಸ್‌ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್‌ ಮಾಡಿಕೊಳ್ಳಲಾಗಿದೆ.

Tap to resize

Latest Videos

ಆರ್‌ಎಸ್‌ಎಸ್‌ ಮುಖಂಡನಿಗೆ ಹೃದಯಾಘಾತ: ಕಾರಲ್ಲಿ ಕುಳಿತುಕೊಂಡೇ ಪ್ರಾಣಬಿಟ್ರು

ವಿ.ಸೂ.: ಅವರು ಪ್ರಕಟಿಸಿರುವ ಚಿತ್ರದಲ್ಲಿನ ದೋಷಗಳನ್ನು ಸರಿಪಡಿಸಲಾಗಿದೆ!

ಬಿತ್ತನೆ ಬೀಜ ಪೂರೈಸದೆ, ಬರ ಪರಿಹಾರ ಒದಗಿಸದೆ, ಜೀವನದಿ ಕಾವೇರಿಯನ್ನು ತಮ್ಮ ಲಾಭಕ್ಕಾಗಿ ತಮಿಳುನಾಡಿಗೆ ಬಿಟ್ಟು, ಕೇವಲ 100 ದಿವಸದ ಆಡಳಿತದಲ್ಲಿ ರಾಜ್ಯದ 200ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿರುವವರು ಇವರೇ! https://t.co/2NjAcR8OlZ pic.twitter.com/916OIIgBtR

— BJP Karnataka (@BJP4Karnataka)

ಕಾಂಗ್ರೆಸ್‌ ಶಾಸಕಾಂಗ ಸಭೆ ಸ್ವಾಗತಗೀತೆ ಮೂಲಕ ತಿರುಗೇಟು: ಮತ್ತೊಂದೆಡೆ ರಾಜ್ಯ ಬಿಜೆಪಿಯಿ ಸಾಮಾಜಿಕ ಜಾಲತಾಣದ ಘಟಕದಿಂದ 'ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯ ಸ್ವಾಗತ ಗೀತೆಯನ್ನು ಬರೆದು ಟ್ವೀಟ್‌ ಮಾಡಿಕೊಂಡಿದೆ.  “ಊರ್‌ ಮೇಲೆ ಊರ್‌ ಬಿದ್ರು ನಾವ್‌ ಚೆನ್ನಾಗಿರ್ಬೇಕು. ಬರ್ಗಾಲ ಬಂದ್ರುನೂ ನಾವ್‌ ಉಂಡು ತಿಂದು ಮಜಾ ಮಾಡ್ಬೇಕು” ಎಂದು ಫೋಟೋ ಸಮೇತ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಶಾಸಕರು ನಮ್ಮ ಜಾತಿ, ಅವರು ಸರಿಯಾಗಿಲ್ಲ, ಮಂತರಿ ಸರಿಯಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬನ್ನಿ ಊಟ ಮಾಡೋಣ, ಸೇರಿ ಮಜಾ ಮಾಡೋಣ' ಎಂದಿದ್ದಾರೆ. ಇನನು ಸಚಿವರು ಹುದ್ದೆ ಸರಿಯಿಲ್ಲ, ಜಾತಿ ಆದ್ಯತೆ, ಇದರಲ್ಲಿ ದುಡ್ಡಿಲ್ಲ, ಶಾಸಕರು ಸರಿಯಿಲ್ಲ ಎಂದು ಆರೋಪ ಮಾಡುವ ಬಗ್ಗೆ ಚಿತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ಗೋಕರ್ಣದಲ್ಲಿ ಹಿಂದೂ ಸಂಪ್ರದಾಯದಂತೆ ಪಿತೃ ಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ!

ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಶ್ಯಾಮನೂರು ಶಿವಶಂಕರಪ್ಪ: ವೀರಶೈವ-ಲಿಂಗಾಯತ ಸಮುದಾಯವನ್ನು ಹತ್ತಿಕ್ಕುತ್ತಿರುವ  ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಗುಟುರು ಹಾಕಿದ್ದ ಶಾಮನೂರು ಶಿವಶಂಕರಪ್ಪ ಅವರ ಬಾಯಿ ಮುಚ್ಚಿಸಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಮಾಡಲಾಗಿತ್ತು. ಮೊನ್ನೆಯಷ್ಟೆ ಸಚಿವ ಸಂಪುಟ ಸಭೆ ನಡೆಸಿ ವೀರಶೈವ-ಲಿಂಗಾಯತ ಸಮುದಾಯದ ವಿರುದ್ಧ ಸಮರ ಸಾರಿದ್ದ ಸಿದ್ದರಾಮಯ್ಯರವರ ಎದುರು ಈಗ ಶಾಮನೂರು ಶಿವಶಂಕರಪ್ಪ ರವರ ತೊಡೆ ತಟ್ಟಿ ನಿಂತಿರುವ ಹಾಗಿದೆ. ನಾನೇ ಹೈಕಮಾಂಡ್ ನನಗೆ ಯಾವ ಹೈಕಮಾಂಡ್ ಇಲ್ಲ ಎನ್ನುವ ಮೂಲಕ ಲಿಂಗಾಯತ ವಿರೋಧಿ ಸಿದ್ದರಾಮಯ್ಯ ಅವರಿಗೆ ಬಿಸಿ ಮುಟ್ಟಿಸಿದ್ದಾರೆ ಶಿವಶಂಕರಪ್ಪರವರು. ಕಾಂಗ್ರೆಸ್ ಸರ್ಕಾರ ತನ್ನ ಲಿಂಗಾಯತ ವಿರೋಧಿ ಧೋರಣೆಯನ್ನು ಮರೆಮಾಚಲು ಸಾಧ್ಯವೇ ಇಲ್ಲ..! ಎಂದು ಪೋಸ್ಟ್‌ ಮಾಡಿದೆ.

click me!