Karnataka elections 2023: ರಾಜಕೀಯ ಪಕ್ಷಗಳು ಮತದಾರರನ್ನು ವಾಹನಗಳಲ್ಲಿ ಕರೆತರುವಂತಿಲ್ಲ: ಇಲ್ಲಿದೆ ಕಾರಣ

By Sathish Kumar KH  |  First Published May 9, 2023, 3:27 PM IST

ನಾಳೆ (ಮೇ 10) ರಂದು ನಡೆಯುವ ಮತದಾನ ಪ್ರಕ್ರಿಯೆ ವೇಳೆ ಯಾವುದೇ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮ ವಾಹನಗಳಲ್ಲಿ ಮತಗಟ್ಟೆಗೆ ಕರೆದೊಯ್ಯುವಂತಿಲ್ಲ.


ಬೆಂಗಳೂರು (ಮೇ 09): ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯು ಮೇ 10 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ. ಆದರೆ, ಯಾವುದೇ ರಾಜಕೀಯ ಪಕ್ಷಗಳು ಅಥವಾ ಪಕ್ಷದ ಅಭ್ಯರ್ಥಿಗಳು ಮತದಾರರನ್ನು ಮತಗಟ್ಟೆಗಳಿಗೆ ತಮ್ಮ ವಾಹನಗಳಲ್ಲಿ ಕರೆದುಕೊಂಡು ಬರುವಂತಿಲ್ಲ. 

ಕರ್ನಾಟಕ ವಿಧಾನಸಭಾ ಚುನಾವನೆಯ ಮತದಾನದ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗ (ಇಸಿಐ) ಅಗತ್ಯ ಸಿದ್ಧತೆಗಳನ್ನು ನಡೆಸುತ್ತಿದೆ. ಎಲ್ಲಾ ಅರ್ಹ ಮತದಾರರು ತಪ್ಪದೇ ಮತದಾನ ಮಾಡಲು ಕರೆ ನೀಡಿದರ. ಚುನಾವಣಾ ನಿಯಮಗಳ ಪ್ರಕಾರ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಮತ ಹಾಕಲು ಕ್ಷೇತ್ರದ ಹೊರಗಿನಿಂದ ಅಥವಾ ಕ್ಷೇತ್ರದೊಳಗಿನ ಮತದಾರರನ್ನು ತಮ್ಮ ವಾಹನಗಳಲ್ಲಿ ಕರೆತರುವಂತಿಲ್ಲ. ಯಾವುದೇ ಮತದಾರರನ್ನು ಬಸ್ ಅಥವಾ ಇತರ ವಾಹನದಲ್ಲಿ ಕರೆತರುವುದು ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನು ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. 

Tap to resize

Latest Videos

ಮತದಾರರಿಗೆ ಶಾಕ್‌ ಕೊಟ್ಟ ಬಿಬಿಎಂಪಿ: ಹೋಟೆಲ್‌ಗಳಲ್ಲಿ ಉಚಿತ ಊಟ, ತಿಂಡಿ ವಿತರಣೆಗೆ ನಿಷೇಧ!

ಮತದಾನಕ್ಕೆ 5.30 ಲಕ್ಷ ಮಂದಿ ಅರ್ಹರು: ರಾಜ್ಯದಲ್ಲಿ ಮತದಾನ ಮಾಡುವುದಕ್ಕೂ ಮುನ್ನ ಮತದಾರರು ಯಾವುದೇ ಆಸೆ, ಆಮಿಷ, ಪ್ರಭಾವ ಅಥವಾ ಬೆದರಿಕೆಗೆ ಮಣಿಯದೆ ಸ್ವಯಂ ಪ್ರೇರಣೆಯಿಂದ ಮತದಾನ ಮಾಡುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ. ರಾಜ್ಯದಲ್ಲಿ 5,30,85,566 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಈ ಪೈಕಿ 2,66,82,156 ಪುರುಷ, 2,63,98,483 ಮಹಿಳೆ ಹಾಗೂ 4,927 ಇತರೆ ಮತದಾರರು ನಾಳೆ ಮತದಾನ ಮಾಡುವ ಹಕ್ಕು ಹೊಂದಿದ್ದಾರೆ.

ಹಣ ಹಂಚುವುದರ ಮೇಲೆ ಹದ್ದಿನ ಕಣ್ಣು:  ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10 ಮತದಾನ ನಡೆಯಲಿದ್ದು, ಮೇ 8ರ ಸಂಜೆ 6 ಗಂಟೆಗೆ ಬಹಿರಂಗ ಚುನಾವಣಾ ಪ್ರಚಾರ ಕೊನೆಗೊಂಡಿದೆ. ಹೀಗಾಗಿ, ಯಾವುದೇ ರಾಜಕೀಯ ಪಕ್ಷಗಳು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ಅವರ ಚುನಾವಣಾ ಏಜೆಂಟ್‌ಗಳು ಮತ್ತು ಬೆಂಬಲಿಗರು ಬಹಿರಂಗ ಪ್ರಚಾರ ಮಾಡುವಂತಿಲ್ಲ. ಆದರೆ ಇಂದು ರಾತ್ರಿಯವರೆಗೂ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಕರಪತ್ರ ಹಂಚುವುದಕ್ಕೆ ಅವಕಾಶವಿದೆ. ಆದರೆ, ಮದ್ಯ ಮಾರಾಟ, ಸಂಗ್ರಹಣೆ, ಹೊರ ಜಿಲ್ಲೆಗಳಿಂದ ಜನರನ್ನು ಕರೆತರುವುದು, ಮತದಾರರಿಗೆ ಹಣ ಹಂಚಿ ಆಮಿಷ ಒಡ್ಡುವುದು ಪ್ರಜಾಪ್ರತಿನಿಧಿ ಕಾಯ್ದೆ-1951 ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗಲಿದೆ. ಈ ಬಗ್ಗೆ ಪೊಲೀಸರು ಮತ್ತು ಚುನಾವಣಾ ಆಧಿಕಾರಿಗಳು ನಿಗಾವಹಿಸಿದ್ದಾರೆ. 

ರಾಜ್ಯಾದ್ಯಂತ 230 ಕೋಟಿ ರೂ. ಜಪ್ತಿ: ಹೊರ ರಾಜ್ಯದವರಿಗೆ ಪ್ರವೇಶ ನಿಷೇಧ!

ಹೊರಗಿನ ಕ್ಷೇತ್ರದವರಿಗೆ ಅವಕಾಶ ಇಲ್ಲ: ಇನ್ನು ಯಾವುದೇ ಕ್ಷೇತ್ರದಲ್ಲಿ ಮತದಾರರಲ್ಲದವರು ಮತದಾನ ದಿನಕ್ಕೂ 48 ಗಂಟೆಗಳ ಮುನ್ನ ಕ್ಷೇತ್ರವನ್ನು ತೊರೆಯಬೇಕು. ಕ್ಷೇತ್ರದ ವ್ಯಾಪ್ತಿಯ ಕಲ್ಯಾಣ ಮಂಟಪ, ಸಮುದಾಯ ಭವನ, ಹೋಟೆಲ್, ಅತಿಥಿ ಗೃಹಗಳಲ್ಲಿ ತಂಗಿರುವವರ ಪಟ್ಟಿಯನ್ನು ಪರಿಶೀಲಿಸಿ ಮತದಾರರಲ್ಲದವರನ್ನು ಕ್ಷೇತ್ರದಿಂದ ಹೊರಗೆ ಕಳುಹಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಆದೇಶವನ್ನು ಪಾಲಿಸುವಂತೆ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೇ 10ರಂದು ನಡೆಯುವ ಮತದಾನಕ್ಕೆ ಅನುಕೂಲವಾಗುವಂತೆ ಮತದಾನದ ದಿನದಂದು ಜಾತ್ರೆ, ದನಗಳ ಜಾತ್ರೆ, ಹಬ್ಬ, ಉರುಸ್ ನಿಷೇಧಿಸಲಾಗಿದೆ.

click me!