Karnataka assembly election: ಶಿರಹಟ್ಟಿ ಮೀಸಲು ಕ್ಷೇತ್ರ ಯಾರ ಪಾಲಿಗೆ?

By Kannadaprabha News  |  First Published Dec 2, 2022, 12:02 PM IST

ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾದ ಶಿರಹಟ್ಟಿವಿಧಾಸಭಾ ಕ್ಷೇತ್ರದ 2023ರ ಚುನಾವಣೆಗೆ ಟಿಕೆಟ್‌ ಫೈಟ್‌ ಬಲು ಜೋರಾಗಿದ್ದು, ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಜಿಲ್ಲೆಯ 4 ವಿಧಾನಸಭಾ ಮತಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಅತೀ ಹೆಚ್ಚು ಪೈಪೋಟಿ ಕಂಡು ಬರುತ್ತಿರುವುದು ಇಲ್ಲಿ ಮಾತ್ರ.


ಶಿವಕುಮಾರ ಕುಷ್ಟಗಿ

ಗದಗ (ಡಿ.2) : ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾದ ಶಿರಹಟ್ಟಿವಿಧಾಸಭಾ ಕ್ಷೇತ್ರದ 2023ರ ಚುನಾವಣೆಗೆ ಟಿಕೆಟ್‌ ಫೈಟ್‌ ಬಲು ಜೋರಾಗಿದ್ದು, ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಜಿಲ್ಲೆಯ 4 ವಿಧಾನಸಭಾ ಮತಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಅತೀ ಹೆಚ್ಚು ಪೈಪೋಟಿ ಕಂಡು ಬರುತ್ತಿರುವುದು ಇಲ್ಲಿ ಮಾತ್ರ.

Latest Videos

undefined

ಕಾಂಗ್ರೆಸ್‌ನಿಂದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ಭರತ್‌ ನಾಯಕ, ದೇವಪ್ಪ ಲಮಾಣಿ ಪ್ರಮುಖ ಆಕಾಂಕ್ಷಿಗಳಾಗಿದ್ದು, ಇನ್ನು ಹಲವರು ತಮ್ಮ ತಮ್ಮ ಹೆಸರುಗಳನ್ನು ತೇಲಿ ಬಿಡುತ್ತಿದ್ದಾರೆ.

Karnataka assembly election: ಹಳಿಯಾಳದಲ್ಲಿ ಘೋಟ್ನೇಕರ್‌ ನಡೆ ಕುತೂಹಲಕರ

ಆಡಳಿತಾರೂಢ ಬಿಜೆಪಿಯಲ್ಲಿ ಹಾಲಿ ಶಾಸಕ ರಾಮಣ್ಣ ಲಮಾಣಿ, ಭೀಮಸಿಂಗ್‌ ರಾಠೋಡ, ಡಾ. ಚಂದ್ರು ಲಮಾಣಿ, ಗುರುನಾಥ ದಾನಪ್ಪನವರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಪಕ್ಷ ಯಾರಿಗೆ ಮನ್ನಣೆ ಹಾಕುತ್ತದೆ ಎಂದು ಕಾಯ್ದು ನೋಡಬೇಕು. ಆದರೆ, ವಾಸ್ತವದಲ್ಲಿ ಈ ಬಾರಿ ಬಿಜೆಪಿಯಲ್ಲಿಯೂ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ದ್ವಿಗುಣವಾಗಿದೆ.

ಕಾಂಗ್ರೆಸ್‌ ಈ ಬಾರಿ ಮಹಿಳಾ ಪ್ರತಿನಿಧಿ ಸುಜಾತಾ ದೊಡ್ಡಮನಿ ಅವರಿಗೆ ಅವಕಾಶ ಕಲ್ಪಿಸಲಿದೆ. ಇದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ ಎನ್ನುವ ಸುದ್ದಿಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಈ ಚರ್ಚೆಯ ಮಧ್ಯೆ ಬಿಜೆಪಿ ಕೂಡಾ ಕಾಂಗ್ರೆಸ್‌ ಮಹಿಳಾ ಅಭ್ಯರ್ಥಿ ಎದುರಿಗೆ ಅವರ ಪಕ್ಷದಿಂದಲೂ ಮಹಿಳೆಯನ್ನೇ ಕಣಕ್ಕಿಳಿಸುವ ನಿರ್ಧಾರ ಮಾಡಿದಲ್ಲಿ ಗದಗ- ಬೆಟಗೇರಿ ನಗರಸಭೆಯ ಅಧ್ಯಕ್ಷೆ ಉಷಾ ದಾಸರ ಹೆಸರು ಚರ್ಚೆಯ ಮುನ್ನೆಲೆಗೆ ಬಂದು ನಿಂತಿದೆ.

ತೀವ್ರ ವಿರೋಧಿ ಅಲೆ:

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಶಿರಹಟ್ಟಿಕ್ಷೇತ್ರದಲ್ಲಿ ಈಗಾಗಲೇ ಹಾಲಿ ಶಾಸಕರಿಗೆ ತೀವ್ರ ಆಡಳಿತ ವಿರೋಧಿ ಅಲೆ ಪ್ರಾರಂಭವಾಗಿದೆ. ಬಿಜೆಪಿ ಹಲವಾರು ಮಂಚೂಣಿ ಘಟಕಗಳಲ್ಲಿರುವವರೆಲ್ಲ ಮಾಧ್ಯಮಗಳಿಗೆ ಆಫ್‌ ದಿ ರೆಕಾರ್ಡ್‌... ಬರಿಬೇಡಿ... ನಮ್ಮ ಸಾಹೇಬ್ರಿಗೆ ಟಿಕೆಟ್‌ ಸಿಗಲ್ಲ ಎನ್ನುತ್ತಾರೆ. ಹಾಗಾಗಿ ಬಿಜೆಪಿಯ ಇನ್ನುಳಿದ ಆಕಾಂಕ್ಷಿಗಳಾದ ಭೀಮಸಿಂಗ್‌ ರಾಠೋಡ, ಗುರುನಾಥ ದಾನಪ್ಪನವರ ಮತ್ತು ಡಾ. ಚಂದ್ರು ಲಮಾಣಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

Bellary : ಭತ್ತದ ಸಿರಿ ಸಿರಗುಪ್ಪದಲ್ಲಿ ಕಣಕ್ಕಿಳಿವ ಕಲಿಗಳ್ಯಾರು?

ಕಾಂಗ್ರೆಸ್‌ನಲ್ಲೂ ತೀವ್ರ ಪೈಪೋಟಿ:

ಕಾಂಗ್ರೆಸ್‌ನಲ್ಲಿಯೂ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಇದ್ದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರಿಗಾಗಿ 2 ಬಾರಿ ಪಕ್ಷ ಹೇಳಿದಂತೆ ಸುಮ್ಮನಿದ್ದ ಗದಗ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಈ ಬಾರಿ ಅತ್ಯಂತ ಗಟ್ಟಿಧ್ವನಿಯಲ್ಲಿ ಹಕ್ಕು ಮಂಡಿಸಿದ್ದು, ಅದರಲ್ಲಿ ಸಾಫಲ್ಯ ಕಾಣುವ ಲಕ್ಷಣಗಳಿವೆ. ಭರತ್‌ ನಾಯಕ, ದೇವಪ್ಪ ಲಮಾಣಿ ಕೂಡಾ ಪ್ರಯತ್ನ ನಡೆಸುತ್ತಿದ್ದಾರೆ.

click me!