Belgum constituency: ಜಿಲ್ಲೆಯ ಮೂವರಿಗೆ ಸಿಗಲಿದೆ ಪವರ್‌ಪುಲ್‌ ಖಾತೆ!

By Kannadaprabha NewsFirst Published May 16, 2023, 9:03 PM IST
Highlights

ರಾಜ್ಯ ರಾಜಕಾರಣದಲ್ಲಿಯೇ ಪವರಪುಲ್‌ ಪಾಲಿಟಿಕ್ಸ್‌ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆ ಬಿಜೆಪಿ ಕೋಟೆಯಾಗಿತ್ತು. ಈ ಚುನಾವಣೆಯಲ್ಲಿ ಕೈ ಎಟಿಕೆ ಕಮಲ ಕೋಟೆ ಛಿದ್ರವಾಗಿದೆ. ಇದರಿಂದಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬೆಳಗಾವಿ ಜಿಲ್ಲೆ ಮತ್ತಷ್ಟುಹುಮ್ಮಸ್ಸು ನೀಡಿದ್ದರಿಂದ ಜಿಲ್ಲೆಯ ಮೂವರಿಗೆ ಪವರಪುಲ್‌ ಖಾತೆ ನೀಡುವ ಮೂಲಕ ಬೆಳಗಾವಿ ಪಾಲಿಟಿಕ್ಸ್‌ಗೆ ಪವರ ತುಂಬುವ ಕಾರ್ಯ ನಡೆಯಲಿದೆ.

ಜಗದೀಶ ವಿರಕ್ತಮಠ

ಬೆಳಗಾವಿ (ಮೇ.16) : ರಾಜ್ಯ ರಾಜಕಾರಣದಲ್ಲಿಯೇ ಪವರಪುಲ್‌ ಪಾಲಿಟಿಕ್ಸ್‌ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆ ಬಿಜೆಪಿ ಕೋಟೆಯಾಗಿತ್ತು. ಈ ಚುನಾವಣೆಯಲ್ಲಿ ಕೈ ಎಟಿಕೆ ಕಮಲ ಕೋಟೆ ಛಿದ್ರವಾಗಿದೆ. ಇದರಿಂದಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬೆಳಗಾವಿ ಜಿಲ್ಲೆ ಮತ್ತಷ್ಟುಹುಮ್ಮಸ್ಸು ನೀಡಿದ್ದರಿಂದ ಜಿಲ್ಲೆಯ ಮೂವರಿಗೆ ಪವರಪುಲ್‌ ಖಾತೆ ನೀಡುವ ಮೂಲಕ ಬೆಳಗಾವಿ ಪಾಲಿಟಿಕ್ಸ್‌ಗೆ ಪವರ ತುಂಬುವ ಕಾರ್ಯ ನಡೆಯಲಿದೆ.

Latest Videos

ಈ ಜಿಲ್ಲೆಯ 18 ವಿಧಾನ ಸಭಾ ಕ್ಷೇತ್ರಗಳ (Belgum assembly constituency) ಪೈಕಿ 13 ಸ್ಥಾನಗಳಲ್ಲಿ ಬಿಜೆಪಿ ಶಾಸಕರಿದ್ದರು. ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರು. ಆದರೆ ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದ ಜನರು 11 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಭದ್ರಕೋಟೆಯಾಗಿದ್ದ ಬೆಳಗಾವಿ ಕಾಂಗ್ರೆಸ್‌ ತಂತ್ರಗಾರಿಕೆಯಿಂದ ಛಿದ್ರವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಮತ್ತೆ ಸದ್ದು ಮಾಡಿದ್ದು, ಇದೀಗ ಬೆಳಗಾವಿ ಮೂವರಿಗೆ ಪ್ರಭಾವಿ ಖಾತೆಗಳನ್ನು ಹಾಗೂ ಇಬ್ಬರಿಗೆ ನಿಗಮಂಡಳಿ ಅಧ್ಯಕ್ಷ ಸ್ಥಾನಗಳನ್ನು ನೀಡುವ ಬಗ್ಗೆ ಕಾಂಗ್ರೆಸ್‌ ಪಾಳಯದಲ್ಲಿ ಚರ್ಚೆಗಳು ನಡೆಯುತ್ತಿವೆ.

Karnataka CM: ಡಿಕೆಶಿಯನ್ನು ಸಿಎಂ ಮಾಡುವಂತೆ ಉಡುಪಿ ಒಕ್ಕಲಿಗರ ಸಂಘ ಆಗ್ರಹ...

ಬಿಜೆಪಿಯಿಂದ ಹೊರ ಬಂದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಅಭೂತ ಪೂರ್ವ ಗೆಲುವು ಸಾಧಿಸಿರುವ ಅಥಣಿ ಶಾಸಕ ಲಕ್ಷ್ಮಣ ಸವದಿ(Laxman savadi  MLA), ಯಮಕನಮರಡಿ ಶಾಸಕ ಸತೀಶ್‌ ಜಾರಕಿಹೊಳಿ(Satish jarkiholi) ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೇ ಹೆಬ್ಬಾಳಕರಗೆ(Lakshmi hebbalkar) ಮಂತ್ರಿಗಿರಿ ಭಾಗ್ಯ ಒದಗಿಬರಲಿದೆ. ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು, ತಾವು ಗೆದ್ದು ಕಾಗವಾಡ, ಕುಡಚಿಯಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿರುವ ಜತೆಗೆ ಗಾಣಿಗ ಸಮುದಾಯದ ನಾಯಕನಿಗೆ ಮಂತ್ರಿಸ್ಥಾನ ನೀಡುವ ಮೂಲಕ ಒಂದು ಕಡೆ ಸಮುದಾಯಕ್ಕೂ ಹಾಗೂ ಮತ್ತೊಂದು ಕಡೆ ಲಕ್ಷ್ಮಣ ಸವದಿಯವರನ್ನು ಮನಬಂದಂತೆ ಜರದಿದ್ದ ಬಿಜೆಪಿ ನಾಯಕರಿಗೆ ಹಾಗು ರಾಜಕೀಯ ಬದ್ದವೈರಿಯಾಗಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿಗೆ ಈ ಮೂಲಕ ನಮ್ಮನ್ನು ನಂಬಿ ಬಂದವರನ್ನು ಕೈ ಬಿಡುವುದಿಲ್ಲ ಎಂಬ ಸಂದೇಶ ನೀಡಲು ಕೈ ನಾಯಕರು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಡೀ ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರ ತೀವ್ರ ವಿರೋಧ ನಡುವೆಯೂ 56 ಸಾವಿರ ಮತಗಳ ಅಂತರದಿಂದ ಗೆದ್ದಿರುವ ಲಕ್ಷ್ಮೇ ಹೆಬ್ಬಾಳ್ಕರ ಈ ಬಾರಿ ಮಂತ್ರಿಯಾಗಲಿದ್ದಾರೆ. ಮಹಿಳಾ ಜತೆಗೆ ಲಿಂಗಾಯತ ಕೋಟಾ ಎರಡರನ್ನೂ ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಲಕ್ಷ್ಮೇ ಹೆಬ್ಬಾಳಕರ ಕೂಡ ಹೆಚ್ಚಿನ ಶ್ರಮ ವಹಿಸಿದ್ದಾರೆ. ಅಲ್ಲದೇ ಇಡೀ ರಾಜ್ಯದಲ್ಲಿ ಪ್ರಭಾವಿ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ. ಹೀಗಾಗಿ ಸಹಜವಾ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ.

ಯಮಕನಮರಡಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪಕ್ಷ ಸಂಘಟನೆ ಜತೆಗೆ ತನ್ನದೇ ಆದ ವರ್ಚಸ್ಸು ಹೊಂದಿದ್ದಾರೆ. ಜತೆಗೆ ಪರಿಶಿಷ್ಟವರ್ಗದ ಪ್ರಭಾವಿ ನಾಯಕವಾಗಿರುವ ಸತೀಶ್‌ ಜಾರಕಿಹೊಳಿ ಅವರು ಈ ಭಾಗದಲ್ಲಿ ಹಿಂದುಳಿದ ವರ್ಗದ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯ ನಾಯಕರು ಪ್ರಚಾರಕ್ಕೆ ಅಷ್ಟಾಗಿ ಆಗಮಿಸದಿದ್ದರೂ ಪ್ರತಿ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡು ಅಹಿಂದ ಮತಗಳನ್ನು ಕ್ರೋಢಿಕರಿಸಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಶಿಷ್ಟವರ್ಗದ ಜತೆಗೆ ಸಿದ್ದರಾಮಯ್ಯ ಅವರ ಬೆಂಬಲಿಗರ ಕೋಟಾವನ್ನು ಗಮನದಲ್ಲಿಟ್ಟುಕೊಂಡಿರುವ ನಾಯಕರು ಈ ಬಾರಿ ಸತೀಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಿದ್ದಾರೆ.

ಅಲ್ಲದೇ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ತನ್ನದೇ ಹಿಡಿತ ಹೊಂದಿರುವ ಮೂಲಕ ಸತತವಾಗಿ ಆಯ್ಕೆಯಾಗುತ್ತಿರುವ ಗಣೇಶ ಹುಕ್ಕೇರಿ ಅಥವಾ ತಮಗಾದರೂ ಮಂತ್ರಿಸ್ಥಾನ ನೀಡುವಂತೆ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಕೂಡ ನಾಯಕರನ್ನು ಭೇಟಿ ಮಾಡುವ ಲಾಭಿ ನಡೆಸಿದ್ದಾರೆ. ಅಲ್ಲದೇ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ರಾಮದುರ್ಗ ಶಾಸಕ ಅಶೋಕ ಪಟ್ಟಣ ಕೂಡ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಅಶೋಕ ಪಟ್ಟಣ ಅವರು ಸಿದ್ದರಾಮಯ್ಯ ಅವರ ಕಟ್ಟಾಬೆಂಬಲಿಗರಾಗಿದ್ದರಿಂದ ಟಿಕೇಟ್‌ ತರುವಲ್ಲಿ ಯಶಸ್ವಿಯಾಗಿದ್ದಲ್ಲದೇ ಆಯ್ಕೆಯೂ ಆಗಿದ್ದಾರೆ. ಮಹಾಂತೇಶ ಕೌಜಲಗಿ ಅವರ ತಂದೆಯೂ ಮಾಜಿ ಸಚಿವರಾಗಿದ್ದಾರೆ. ಜತೆಗೆ ವಿಧಾನ ಪರಿಷತ್‌ ಹಾಗೂ ವಿಧಾನ ಸಭೆಗೆ ಸತತವಾಗಿ ಆಯ್ಕೆಯಾಗಿದ್ದಲ್ಲ, ಕಳಂಕ ರಹಿತ ಶಾಸಕರಾಗಿದ್ದರಿಂದ ಸಚಿವ ಸ್ಥಾನಕ್ಕೆ ಲಾಭಿ ನಡೆಸುತ್ತಿರುವುದು ಸಹಜ. ಆದರೆ ಕಾಂಗ್ರೆಸ್‌ ನಾಯಕರ ಲೆಕ್ಕಾಚಾರವೇ ಬೇರೆಯಾಗಿದ್ದು, ಜಿಲ್ಲೆಗೆ ಮೂರು ಸಚಿವ ಸ್ಥಾನ ಹಾಗೂ 2-3 ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬೆಳಗಾವಿಯಿಂದ 11 ಜನ ಗೆದ್ದಿರುವುದು ಸ್ವಾಭಿಮಾನದ ಪ್ರತೀಕವಾಗಿದೆ: ಲಕ್ಷ್ಮೀ ಹೆಬ್ಬಾಳ್ಕರ್‌

ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಲಕ್ಷ್ಮಣ ಸವದಿ, ದಿ. ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ಮಂತ್ರಿಯಾಗಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಸವದಿ, ಬೊಮ್ಮಾಯಿ ಸರ್ಕಾರದಲ್ಲಿ ಡಿಸಿಎಂ ಸ್ಥಾನದ ಜೊತೆಗೆ ಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಇನ್ನು ಸಿಡಿ ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಎಸ್‌ವೈ ಸಂಪುಟದಲ್ಲಿದ್ದ ಶ್ರೀಮಂತ ಪಾಟೀಲಗೆ ಬೊಮ್ಮಾಯಿ ಸರ್ಕಾರದಲ್ಲಿ ಕೋಕ್‌ ನೀಡಲಾಗಿತ್ತು. ಅದೇ ರೀತಿ ಉಮೇಶ ಕತ್ತಿಯವರ ಅಕಾಲಿಕ? ನಿಧನದಿಂದ ಜಿಲ್ಲೆಗೆ ಮತ್ತೊಂದು ಸ್ಥಾನ ಕಡಿಮೆಯಾಗಿತ್ತು. ಶಶಿಕಲಾ ಜೊಲ್ಲೆ ಮಾತ್ರ ಪೂರ್ಣ ಅವಧಿಗೆ ಸಚಿವೆಯಾಗಿದ್ದರು.

click me!