ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದರ ಹೆಚ್ಚಳವಾಗಿರೋ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ NHAI ಜೊತೆ ಮಾತಾಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಬೆಂಗಳೂರು (ಮಾ.31) : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದರ ಹೆಚ್ಚಳವಾಗಿರೋ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ NHAI ಜೊತೆ ಮಾತಾಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ(MP Pratap simha) ಹೇಳಿದರು.
ಬೆಂಗಳೂರು-ಮೈಸೂರು ಟೋಲ್ ದರದಲ್ಲಿ ಮತ್ತೆ 50 ರೂ ದರ ಹೆಚ್ಚಳ ವಿಚಾರವಾಗಿ ಮಾಧ್ಯಮವರಿಗೆ ಪ್ರತಿಕ್ರಿಯಿಸಿದ ಅವರು, ವಾರ್ಷಿಕವಾಗಿ ಟೋಲ್ ದರ ಹೆಚ್ಚಳ ಮಾಡಿರಬಹುದು. ಆದ್ರೆ ನಾವು ಪ್ರಾರಂಭ ಮಾಡಿ ಈಗಿನ್ನು 15 ದಿನ ಆಗಿದೆ. ನಿಡಘಟ್ಟದಿಂದ ಇನ್ನೂ ಕೆಲಸ ಆಗ್ತಿದೆ. ಕಾಮಗಾರಿ ಕೂಡ ಪೂರ್ಣಗೊಂಡಿಲ್ಲ ಹೀಗಿರುವಾಗ ದರ ಹೆಚ್ಚಳವಾಗಿದೆ ಎಂದರೆ ಅಧಿಕಾರಿಗಳೊಂದಿಗೆ ಮಾತನಾಡಿ ಹೆಚ್ಚಳ ಮಾಡದಂತೆ ಮನವಿ ಮಾಡಿಕೊಳ್ಳುವೆ ಎಂದರು.
Viral Audio: ನಮ್ಮೂರಲ್ಲಿ ನಾನೇ ಮೋದಿ, ನಾನೇ ಟ್ರಂಪ್..' ಪ್ರಧಾನಿಯನ್ನೇ ಟೀಕಿಸಿದ ಬಿಜೆಪಿ ಶಾಸಕ?!
ಇದು ಬೆಂಗಳೂರು, ಮೈಸೂರು(Bengaluru-mysuru expressway )ದರ ಹೆಚ್ಚಳ ಮಾತ್ರವಲ್ಲ. ದೇಶದ ಎಲ್ಲಾ ಟೋಲ್ ದರವೂ ಹೆಚ್ಚಳ ಆಗಿದೆ. ಈ ಬಗ್ಗೆ NGAI ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಸದ್ಯ ಬೆಂಗಳೂರಿನಿಂದ ನಿಡಘಟ್ಟದವರೆಗೂ ಒಂದು ಹಣ ನಿಗದಿಯಾಗಿದೆ. ನಿಡಘಟ್ಟದಿಂದ ಮೈಸೂರಿಗೆ ಬೇರೆ ದರವಿದೆ. ಕುಂಬಳಗೂಡು ಫ್ಲೈ ಓವರ್ ಹತ್ತಿರದವರೆಲ್ಲರೂ ಹಣ ಪಾವತಿ ಮಾಡಬೇಕೆಂದು ಈಗಾಗಲೇ ನಿಗದಿ ಮಾಡಲಾಗಿದೆ. ಬಿಡದಿ,ರಾಮನಗರ, ಚನ್ನಪಟ್ಟಣ ಹೋಗುವವರು ಸರ್ವಿಸ್ ರಸ್ತೆಯಲ್ಲಿ ಹೋಗಿ ಎಂದರು ಮುಂದುವರಿದು ಜನರ ಭಾವನೆಗಳಿಗೆ ತಕ್ಕಂತೆ ನಡೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು.
ಹಣ ದುಬ್ಬರ ಎಫೆಕ್ಟ್:
ಇಂದು ವಿಶ್ವದೆಲ್ಲೆಡೆ ಹಣದುಬ್ಬರವಿದೆ. ಈ ಕಾರಣಕ್ಕೆ ಎಲ್ಲಾ ದೇಶದ ಬ್ಯಾಂಕ್‌ಗಳು ದಿವಾಳಿಯಾಗಿದೆ. ಆದ್ರೆ ನಮ್ಮ ದೇಶ ಸುಸ್ಥಿರವಾಗಿದೆ. ಟೋಲ್ ಸೇರಿದಂತೆ ಅನೇಕ ವಿಚಾರಗಳನ್ನು ಸಮತೋಲನದಲ್ಲಿ ಇಟ್ಕೊಳ್ಳೊದು ನಮ್ಮ ಕರ್ತವ್ಯ. ಅದನ್ನು ಮಾಡುವ ಕೆಲಸ ಮಾಡುತ್ತೇವೆ ಎಂದರು.
ದೇಶದಲ್ಲಿ 20 ಎಕ್ಸ್ ಪ್ರೆಸ್ ವೇಗಳಿವೆ. ಮೈಸೂರು ರಸ್ತೆ ಮೊದಲು ಎರಡು ಪಥ ಇತ್ತು. ಆ ನಂತರ ನಾಲ್ಕು ಪಥದ ರಸ್ತೆ ಮಾಡಲಾಯ್ತು. ಈಗ ಅದೇ ರಸ್ತೆ ಅಷ್ಟಪಥದ ರಸ್ತೆಯಾಗಿದೆ. ಮೊದಲು 3 ಸಾವಿರ ಕೋಟಿ ಮೊದಲು ನಿಗದಿಯಾಗಿತ್ತು. ಅದು ಈಗ ಅದು ಈಗ 12 ಸಾವಿರ ಕೋಟಿ ಆಗಿದೆ. ಕಣಮಿಣಿಕೆ ಬಳಿ ಟೋಲ್ ನಿರ್ಮಾಣವಾಗಿದೆ ಟೋಲ್ ಸಂಗ್ರಹಕ್ಕೆ ಅವಕಾಶ ಕೊಟ್ಟಿದ್ದಾರೆ.
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ವಾಹನ ಸವಾರರಿಗೆ ಮತ್ತೆ ಬರೆ: ಟೋಲ್ ದರ ಭಾರೀ ಹೆಚ್ಚಳ..!
ಬೆಂಗಳೂರು- ಮೈಸೂರು ರಸ್ತೆ ಎಂ ಲಕ್ಷ್ಮಣ್ ಕಿಡಿ
ನಾಳೆಯಿಂದ ಟೋಲ್ ಸಂಗ್ರಹ ಹೆಚ್ಚಿಸಲಾಗಿದೆ. ಒಂದು ತಿಂಗಳ ಅವಧಿಯಲ್ಲೇ 20% ಹೆಚ್ಚಳ ಮಾಡಲಾಗಿದೆ. ಸ್ಕೈಲಾರ್ಕ್ ಎಂಬ ನಾಗಪುರದ ಸಂಸ್ಥೆಗೆ ಟೋಲ್ ಸಂಗ್ರಹ ಮಾಡಲು ಅನುಮತಿ ನೀಡಲಾಗಿದೆ. ಪ್ರತಿದಿನ 90 ಸಾವಿರ ವಾಹನ ಓಡಾಡುತ್ತವೆ. ಅಂದರೆ ಒಂದು ದಿನಕ್ಕೆ 5.5 ಕೋಟಿ ಟೋಲ್ ಕಲೆಕ್ಟ್ ಮಾಡಲಾಗುತ್ತಿದೆ.