ಹಾಸನದಲ್ಲಿ ಭವಾನಿ ರೇವಣ್ಣ ಪ್ರಚಾರ: ಮನೆ ದೇವರಿಗೆ ವಿಶೇಷ ಪೂಜೆ

By Kannadaprabha News  |  First Published Feb 24, 2023, 11:48 AM IST

ಹಾಸನ ಜೆಡಿಎಸ್ ಅಭ್ಯರ್ಥಿ ಅಕಾಂಕ್ಷಿ, ದೇವೇಗೌಡರ ಸೊಸೆ ಭವಾನಿ ರೇವಣ್ಣ ಅವರು ಗುರುವಾರ ಹಳೇಕೋಟೆಯಲ್ಲಿರುವ ಮನೆ ದೇವರಿಗೆ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು. 


ಹಾಸನ (ಫೆ.24): ಹಾಸನ ಜೆಡಿಎಸ್ ಅಭ್ಯರ್ಥಿ ಅಕಾಂಕ್ಷಿ, ದೇವೇಗೌಡರ ಸೊಸೆ ಭವಾನಿ ರೇವಣ್ಣ ಅವರು ಗುರುವಾರ ಹಳೇಕೋಟೆಯಲ್ಲಿರುವ ಮನೆ ದೇವರಿಗೆ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಆಗಮಿಸಿ ಅಲ್ಲಿಯೂ ಪೂಜೆ ಸಲ್ಲಿಸಿದರು. ಬಳಿಕ, ಹಾಸನ ಕ್ಷೇತ್ರದ ದೊಡ್ಡಪುರಕ್ಕೆ ಆಗಮಿಸಿ, ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಪಕ್ಷದ ಪರ ಪ್ರಚಾರ ನಡೆಸಿದರು. 

ಎಚ್‌.ಡಿ.ರೇವಣ್ಣ ಹಾಗೂ ಪ್ರಜ್ವಲ್‌ ಅವರಿಗೆ ಸಾಥ್‌ ನೀಡಿದರು. ಈ ಮಧ್ಯೆ, ದೊಡ್ಡಪುರಕ್ಕೆ ಆಗಮಿಸಿದ ಜೆಡಿಎಸ್‌ ನಾಯಕರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಅಲ್ಲದೆ, ಹಾಸನದ ಎಸ್ಪಿ ಕಚೇರಿ ಪಕ್ಕದಲ್ಲಿರುವ ಸಂಸದರ ನಿವಾಸವನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಇದೇ ವೇಳೆ, ಹಾಸನ ಕ್ಷೇತ್ರದ ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ, ಸ್ವರೂಪ್‌ ಕೂಡ ನಗರದ ವಿವಿಧೆಡೆ ಪ್ರತ್ಯೇಕವಾಗಿ ಪ್ರಚಾರ ನಡೆಸಿದರು.

Latest Videos

undefined

‘ಗೃಹಿಣಿ ಶಕ್ತಿ’ಯಡಿ 500 ಬದಲು 1000: ಸಿಎಂ ಬೊಮ್ಮಾಯಿ ಘೋಷಣೆ

‘ಸರ್ಕಾರ ಹೇಳಿ​ದಂತೆ ಅಭಿ​ವೃದ್ಧಿ ಮಾಡು​ತ್ತಿ​ಲ್ಲ​’: ಬಿಜೆಪಿಯವರು ಹಳೆ ಅಂಬಾಸಿಡರ್‌ ಕಾಲ ಹೋಗಿದೆ ಎನ್ನುತ್ತಾರೆ. ಈಗೇನಿದ್ದರೂ ಜಾಗ್ವಾರ್‌ ಮತ್ತು ರೇಂಜ್‌ ರೋವರ್‌ ಕಾಲವಂತೆ. ಜಾಗ್ವಾರ್‌, ರೇಂಜ್‌ ರೋವರ್‌ನಂತೆ ಅಭಿವೃದ್ಧಿ ಆಗುತ್ತಿದೆಯಂತೆ. ಹೀಗಂತಾ ಸರ್ಕಾರದವರು ಹೇಳುತ್ತಿದ್ದಾರೆ. ಇವರು ಹೇಳಿದಂತೆ ರಾಜ್ಯದ ಅಭಿವೃದ್ಧಿ ಮಾಡುತ್ತಿಲ್ಲ. ಅವರದೇ ಸ್ವಂತ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದರು.

ಜೆಡಿಎಸ್‌ಗೆ ಮತ ಹಾಕಿದರೆ ಎಟಿಎಂಗೆ ಮತ ಹಾಕಿದಂತೆ ಎನ್ನುತ್ತಿದ್ದಾರೆ. ಶಿವಮೊಗ್ಗದಲ್ಲಿಯೇ ಈಗ ಮೇಲಿನಿಂದ ಕ್ಯಾಮೆರಾ ಬಿಟ್ಟರೆ ಗೊತ್ತಾಗುತ್ತೆ ಇವರ ಎಟಿಎಂಗಳು ಎಷ್ಟಿವೆ ಅಂತ ಎಂದು. ರೈತ ಸಾಲ ಮನ್ನಾ ಮಾಡಿದರೆ ಆರ್ಥಿಕ ಪರಿಸ್ಥಿತಿ ಅಲ್ಲೋಲಕಲ್ಲೋಲ ಆಗುತ್ತೆ ಎಂದು ಬಿಜೆಪಿ ಉಪಾಧ್ಯಕ್ಷ ಹೇಳುತ್ತಾನೆ. ಅವನಿಗೆ ಏನೂ ಗೊತ್ತು ರೈತರ ಕಷ್ಟ? ಮಂಡ್ಯದಲ್ಲಿ ನಡೆದ ಯುವ ಮೋರ್ಚಾ ಸಮಾವೇಶದಲ್ಲಿ ಮಹಾನುಭಾವ ಸಿ.ಟಿ.ರವಿ ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಾನೆ. ಇವತ್ತು ಕೆಎಂಎಫ್‌ ಇಷ್ಟೊಂದು ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ರೇವಣ್ಣರ ಶ್ರಮ ಇದೆ. ಜಯದೇವ ಆಸ್ಪತ್ರೆ ಅಭಿವೃದ್ಧಿಗಿಂತ ಮತ್ತೊಂದು ಉದಾಹರಣೆ ಬೇಕಾ? ಇದಕ್ಕೂ ದೇವೇಗೌಡರ ಕುಟುಂಬ ಕಾರಣ ಎಂದು ಖಾರವಾಗಿ ಹೇಳಿದರು.

ಬಿ.ಎ​ಸ್‌.ಯಡಿಯೂರಪ್ಪ ಅವರ ಬಗ್ಗೆ ವಿರೋಧವಾಗಿ ಏನು ಹೇಳುವುದಿಲ್ಲ. ಅವರು ಪಾಪ ವಿದಾಯದ ಭಾಷಣ ಮಾಡಿದ್ದಾರೆ. ಎಲ್ಲರೂ ಕೂಡ ಒಂದಿಲ್ಲೊಂದು ದಿನ ಸದನದಲ್ಲಿ ವಿದಾಯದ ಭಾಷಣ ಮಾಡಲೇಬೇಕು. ಆದರೆ, ಪಕ್ಷ ನನಗೆ ಎಲ್ಲವೂ ಕೊಟ್ಟಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 2013ರಲ್ಲಿ ಕೆಜೆಪಿ ಕಟ್ಟಿದಾಗ ಇವರಿಗೆ ಪಕ್ಷ ಏನೂ ನೀಡಿರಲಿಲ್ಲವೇ? ಆಗ ಇದೇ ಬಿಜೆಪಿ ಬಗ್ಗೆ ಇವರು ಏನೇನು ಭಾಷಣ ಮಾಡಿದ್ದರು. ಇವೆಲ್ಲವೂ ಇನ್ನೂ ದಾಖಲೆಗಳು ನಮ್ಮ ಬಳಿ ಇವೆ ಎಂದು ಕುಟುಕಿದರು.

ವಕೀಲರ ಮೇಲೆ ಹಲ್ಲೆ ಮಾಡಿದರೆ 3 ವರ್ಷ ಜೈಲು: ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ ಮಂಡನೆ

‘ಇಬ್ಬರು ಶಾರದೆಯರೂ ಗೆಲ್ಲುತ್ತಾರೆ’: ಭವಾನಿ ರೇವಣ್ಣ ಅವರು ಪಕ್ಷದ ಪರ ಪ್ರಚಾರಕ್ಕೆ ಹೊರಟಿದ್ದಾರೆ. ಪಕ್ಷವನ್ಮು ಸಂಘಟಿಸಲು ರೇವಣ್ಣ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಿದ್ದಾರೆ. ಮುಂದಿನ ವಾರದಲ್ಲಿ ಹಾಸನ, ಶಿವಮೊಗ್ಗ ಸೇರಿದಂತೆ, ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಎರಡನೇ ಪಟ್ಟಿಬಿಡುಗಡೆ ಮಾಡಲಿದ್ದೇವೆ. ಶಿವಮೊಗ್ಗದಲ್ಲಿ ಇಬ್ಬರು ಆಕಾಂಕ್ಷಿಗಳಿದ್ದಾರೆ. ಶಿವಮೊಗ್ಗದಲ್ಲಿ ಇಬ್ಬರು ಶಾರದೆಯರು ಗೆಲುವು ಸಾಧಿಸಲಿದ್ದಾರೆ. ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶೃಂಗೇರಿ ಶಾರದಾಂಬೆ ಆಶೀರ್ವಾದದಿಂದ ಇಬ್ಬರು ಶಾರದೆಯರು ಗೆಲ್ಲಲ್ಲಿದ್ದಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

click me!