ಸಿದ್ದರಾಮಯ್ಯಗೆ ಜನ, ಕಾರ್ಯಕರ್ತರ ಮೇಲೆ ನಂಬಿಕೆ ಇಲ್ಲ, ಕ್ಷೇತ್ರ ಬದಲಾವಣೆಗೆ ಅರಗ ತಿರುಗೇಟು!

By Suvarna NewsFirst Published Jan 13, 2023, 8:11 PM IST
Highlights

ಸಿದ್ದರಾಮಯ್ಯ ಹಿಂದಿನ ಬಾರಿ ಬೇರೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದಾಗ ಸೋಲಿಸಿದ್ದಾರೆ.  ಭರವಸೆ ಇಲ್ಲದಾಗ ಎರಡು ಕಡೆ ನಿಂತು ಒಂದು ಗೆಲ್ಲುತ್ತೇನೆ ಎನ್ನುವ ನಂಬಿಕೆ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಉಡುಪಿ(ಜ.13):  ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರ ಜೊತೆಗೆ ಕಳೆದ ಬಾರಿಯಂತೆ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸುವ ಮಾತಗಳು ಕೇಳಿಬರುತ್ತಿದೆ. ಸಿದ್ದು ಎರಡೆರಡು ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದರೆ. ಸಿದ್ದರಾಮಯ್ಯ ಎಲ್ಲೂ ನಿಲ್ಲಬಹುದು. ಇದು ಪ್ರಜಾಪ್ರಭುತ್ವ. ಆದರೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಿಗೆ ಸ್ಥಳವೇ ಇಲ್ಲದಾಗಿದೆ. ಹುಡುಕಾಟ ನಡೆಸುತ್ತಲೇ ಇದ್ದಾರೆ. ಸ್ಪರ್ಧೆ ಮಾಡಲು ಭಯಪಡುತ್ತಿದ್ದಾರೆ ಎಂದು ಅರಗ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅರಗ ಜ್ಞಾನೇಂದ್ರ, ಸಿದ್ದು ವಿರುದ್ದ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯಗೆ ಹೆಚ್ಚಿನ ಕ್ಷೇತ್ರದಲ್ಲಿ ಶೋಚನೀಯ ಪರಿಸ್ಥಿತಿ ಇದೆ. ಎಲ್ಲಿ ನಿಂತರೂ ಸೋಲು ಭೀತಿ ಕಾಡುತ್ತಿದೆ. ಹೀಗಾಗಿ ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಓಡಾಡುತ್ತಿದ್ದಾರೆ.  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಹೀಗೆ ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸಿದ್ದುಗೆ ಜನರ ಮೇಲೆ, ಕಾರ್ಯಕರ್ತರ ಮೇಲೆ ನಂಬಿಕೆ ಇಲ್ಲ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.  

ಸ್ಯಾಂಟ್ರೋ ರವಿ ಬಂಧನ, ಗುಜರಾತ್‌ ನಂಟು ಪ್ರಶ್ನಿಸಿದ ಕಾಂಗ್ರೆಸ್, ಕ್ರಮಕ್ಕೆ ಆಗ್ರಹಿಸಿದ ಸಿದ್ದರಾಮಯ್ಯ!

ಹಿಂದಿನ ಭಾರಿ ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಸಿದ್ದರಾಮಯ್ಯಗೆ ಜನರು ಸೋಲಿನ ರುಚಿ ತೋರಿಸಿದ್ದಾರೆ.  ಸಿದ್ದುಗೆ ಜನರ ಜೊತೆಗೆ ಪಕ್ಷದ ಕಾರ್ಯಕರ್ತರೆ ಸೋಲಿಸುತ್ತಾರೆ ಅನ್ನುವ ಭಯವಿದೆ. ಒಂದು ಕಡೆ ಸೋಲುತ್ತೇನೆ ಎಂದು ಎರಡು ಕಡೆ ಸ್ಪರ್ಧೆ. ಕನಿಷ್ಠ ಒಂದು ಕ್ಷೇತ್ರದಲ್ಲಾದರೂ ಗೆಲ್ಲಲು ತಂತ್ರ ಎಂದು ಅರಗ ಹೇಳಿದ್ದಾರೆ. 

ಕೋಲಾರದಿಂದ್ ಸ್ಪರ್ಧೆ ಘೋಷಿಸಿದ್ದ ಸಿದ್ದು
ಇತ್ತೀಚೆಗೆ ಕೋಲಾರಕ್ಕೆ ಬೇಟಿ ನೀಡಿದ ಸಿದ್ದರಾಯಮಯ್ಯ  ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಘೋಷಣೆ ಮಾಡಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಗೆ ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿದ್ದರು. ಈ ಮೂಲಕ ಕ್ಷೇತ್ರ ಹುಡುಕಾಟ ಗೊಂದಲಕ್ಕೆ ತೆರೆ ಎಳೆದಿದ್ದರು. ‘ನನಗೆ ವರುಣದಿಂದ ಸ್ಪರ್ಧಿಸಲು ಒತ್ತಾಯವಿದೆ. ಬಾದಾಮಿ ಕ್ಷೇತ್ರದ ಜನರು ಬೆಂಗಳೂರು ನಿಮಗೆ ದೂರವಾದರೆ ನಾವೇ ಒಂದು ಹೆಲಿಕಾಪ್ಟರ್‌ ಕೊಡಿಸುತ್ತೇವೆ, ವಾರಕ್ಕೊಮ್ಮೆ ಬನ್ನಿ ಸಾಕು, ಇಲ್ಲಿಂದಲೇ ಸ್ಪರ್ಧೆ ಮಾಡಿ ಎನ್ನುತ್ತಿದ್ದಾರೆ. ಆದರೆ, ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ, ಮಾಜಿ ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಹಾಗೂ ಈ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಆಗ್ರಹದ ಮೇರೆಗೆ ಇಲ್ಲಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಆದಾಗ್ಯೂ, ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧನಾಗಿದ್ದು, ಹೈಕಮಾಂಡ್‌ ಸಮ್ಮತಿಸಿದರೆ ಕೋಲಾರದಿಂದಲೇ ಸ್ಪರ್ಧಿಸುತ್ತೇನೆ. ಅಲ್ಲದೆ, ಈ ಬಾರಿ ಒಂದೇ ಕ್ಷೇತ್ರದಿಂದ ನನ್ನ ಸ್ಪರ್ಧೆ’ ಎಂದರು.

ಶಿವಮೊಗ್ಗದಲ್ಲಿ ಕಾರು ಅಪಘಾತ: ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಸಚಿವ ಜ್ಞಾನೇಂದ್ರ

ಸಿದ್ದು ದಿಕ್ಕು ಕಾಣದೆ ಅಲೆಯುತ್ತಿರುವ ನಾಯಕ 
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ರೀತಿ ದಿಕ್ಕು ಕಾಣದೆ ಅಲೆಯುತ್ತಿರುವ ನಾಯಕ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹೀನಾಯ ಸೋಲು ಕಂಡರು. ಚಾಮುಂಡೇಶ್ವರಿ ಕ್ಷೇತ್ರವನ್ನು ಯಾಕೆ ತೊರೆದರು ಎಂದು ಜನರು ಕೂಡ ಕೇಳುತ್ತಿದ್ದಾರೆ. ಒಂದು ವೇಳೆ ಅಭಿವೃದ್ಧಿ ಕಾರ್ಯ ಮಾಡಿದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೆ ಸೋಲು ಅನುಭವಿಸಿದರು? ನಂತರ ಬಾದಾಮಿಗೆ ಹೋದರು. ಅಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದರೆ ಜನ ಯಾಕೆ ಓಡಿಸುತ್ತಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಚಿಮ್ಮನಕಟ್ಟಿಅವರು ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಸಿದ್ದರಾಮಯ್ಯ ಅವರಿಗೆ ಛಲ, ಗೌರವ ಇದ್ದರೆ ಬಾದಾಮಿ ಅಥವಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.

 

click me!